TB Dam ನ ಮುರಿದ ಗೇಟಿನ ಉದ್ದ, ಅಗಲ ಎಷ್ಟು ಗೊತ್ತಾ? ಗೊತ್ತಾದ್ರೆ ಅಚ್ಚರಿ ಅನಿಸ್ಬೋದು?
TB Dam ನ 19ನೇ ಗೇಟಿನ ಚೈನ್ ಕಟ್ಟಾಗಿ ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ಇದರ ದುರಸ್ತಿಗೆ ನೀರು ಬಿಡುವುದು ಅನಿವಾರ್ಯ. ಹೀಗಾಗಿ ನೀರು 20 ಅಡಿಯಷ್ಟು ಇಳಿಕೆಯಾಗಬೇಕಾಗುತ್ತದೆ. ಪರಿಣಾಮ 105 ಅಡಿ ಟಿಎಂಸಿ(TMC) ನೀರಿನ ಸಾಮರ್ಥ್ಯವಿರುವ ಡ್ಯಾಂ ನಲ್ಲಿ 65 ಟಿಎಂಸಿ ಖಾಲಿಯಾಗಲಿದ್ದು, ರೈತರು ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಇನ್ನು ತುಂಡಾದ ಗೇಟಿನ ಉದ್ದ, ಅಗಲ ಎಷ್ಟು ಎಂದು ಗೊತ್ತಾದ್ರೆ ನೀವೂ ಅಚ್ಚರಿ ಪಡುವಿರಿ.
ಇದೀಗ ತುಂಡಾಗಿರುವ ಚೈನ್‌ಲಿಂಕ್ ಗೇಟ್ ಅನ್ನು 70 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಜಲಾಶಯಕ್ಕೆ ಇದೀಗ ಹೊಸ ಕ್ರಸ್ಟ್‌ಗೇಟ್ ಅಳವಡಿಸಬೇಕಾಗುತ್ತದೆ. ಈ ಗೇಟ್‌ನ ಎತ್ತರ 60 ಅಡಿ, ಅಗಲ 20 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ. 12 ಅಡಿ ಎತ್ತರದ 5 ಕಬ್ಬಿಣದ ಹಲಗೆಗಳನ್ನು ಜೋಡಿಸಿ, ಬೆಸುಗೆ ಹಾಕಿ ಈ ಗೇಟ್ ರೂಪಿಸಲು ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ಸದ್ಯ 10ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿಯಿಂದ ಮೂರ್ನಾಲ್ಕು ದಿನಗಳಲ್ಲಿ ಹೊಸ ಗೇಟ್‌ಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ. 19. 230 ಮೀಟರ್ ಉದ್ದ, 1.250 ಮೀಟರ್ ಅಗಲ ಮತ್ತು ದಪ್ಪ ಗಾತ್ರದ ಕಬ್ಬಿಣದ ಗೇಟ್ ನಿರ್ಮಾಣವಾಗಿದ್ದು, 10 ದಿನದೊಳಗೆ ಗೇಟ್ ಕುರಿಸಲು ಪ್ಲ್ಯಾನ್ ಮಾಡಲಾಗುತ್ತಿದೆ.
ಅಂದಹಾಗೆ 1,633 ಅಡಿ ಎತ್ತರದಷ್ಟು ನೀರು ನಿಲ್ಲುವ ತುಂಗಭದ್ರಾ ಜಲಾಶಯವು ರಾಜ್ಯದ ಬೃಹತ್ ಜಲಾಶಯಗಳಲ್ಲಿ ಒಂದು. ಪ್ರಸ್ತುತ ಜಲಾಶಯವು ಭರ್ತಿಯಾಗಿದ್ದು, 105.78 ಟಿಎಂಸಿಯಷ್ಟು (ಪೂರ್ಣ ಸಾಮರ್ಥ್ಯಕ್ಕೆ) ನೀರು ನಿಂತಿತ್ತು. ಶನಿವಾರದ (ಆಗಸ್ಟ್ 10) ಒಳಹರಿವು 40,925 ಕ್ಯೂಸೆಕ್ ಇತ್ತು. ಜಲಾಶಯಕ್ಕೆ 28,133 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿತ್ತು. ಆಗಸ್ಟ್ 11 ರ ತಡರಾತ್ರಿಯಲ್ಲಿ 19 ನೇ ಗೇಟ್ ತುಂಡಾಗಿದ್ದರಿಂದ ಏಕಾಏಕಿ ಅದೊಂದೇ ಗೇಟ್‌ನತ್ತು ಹೆಚ್ಚಿನ ನೀರು ರಭಸವಾಗಿ ನುಗ್ಗಿತು.