Bengaluru Meat Row: ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಮಾಂಸದಲ್ಲಿ ಇದೆ ಮತ್ತೊಂದು..! 3 ಲ್ಯಾಬ್‌ಗಳ ವರದಿ ಪ್ರಕಟ, ಜನರಿಗೆ ಎಚ್ಚರಿಕೆ !

Rajasthan Meat Test Report : ನಾಯಿ ಮಾಂಸ ವಿವಾದ ತರಿಸಿದ್ದ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಮಾಂಸದಲ್ಲಿ ಇನ್ನೊಂದು ಅಂಶ ಬೆಳಕಿಗೆ ಬಂದಿದೆ. ಸದ್ಯ ಆ ಮಾಂಸದ ಶುಚಿತ್ವ ಹಾಗೂ ಬ್ಯಾಕ್ಟೀರಿಯಾ ಗುಣಮಟ್ಟ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಬಿಡುಗಡೆಯಾಗಿದೆ. ಒಟ್ಟು ಮೂರು ಲ್ಯಾಬ್ ಗಳಿಗೆ ಶುಚಿತ್ವ ಪರೀಕ್ಷೆಗಾಗಿ ಕಳಿಸಲಾಗಿತ್ತು. ಆ ವರದಿಯಂತೆ ಮಾಂಸದಲ್ಲಿ ಬ್ಯಾಕ್ಟೀರಿಯಾ ಮಟ್ಟ ತುಸು ಹೆಚ್ಚಿರುವುದು ಕಂಡುಬಂದಿದೆ. ಈ ಹಿನ್ನೆಲೆ ಸೇವಿಸುವವರಿಗೆ ಮಹತ್ವದ ಸೂಚನೆ ನೀಡಲಾಗಿದೆ.

ಮಾಂಸದ ಶುಚಿತ್ವ ಹಾಗೂ ಗುಣಮಟ್ಟದ ಕುರಿತು ಹೊಸದಾಗಿ ಮೂರು ಪ್ರಯೋಗಾಲಯಗಳಿಂದ ವರದಿ ಪ್ರಕಟವಾಗಿದ್ದು, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಾಹಿತಿ ನೀಡಿದೆ.

ಕಳೆದ ತಿಂಗಳು ಜುಲೈ 26ರ ರಾತ್ರಿ ಜೈಪುರ ಮೈಸೂರು ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಬೆಂಗಳೂರು ನಗರಕ್ಕೆ ಅಬ್ದುಲ್‌ ರಜಾಕ್‌ ಎಂಬುವವರು ಸುಮಾರು 4,500 ಕೆ.ಜಿ.ಯಷ್ಟು ಮಾಂಸ ತರಿಸಿದ್ದರು. ಜೈಪುರದಿಂದ ನಾಯಿ ಮಾಂಸ ತಂದು ಮಾರಾಟ ಮಾಡಲಾಗುತ್ತಿದೆ ಎಂದು ರಾಷ್ಟ್ರ ರಕ್ಷಣಾ ಪಡೆಯ ಕೆರೆಹಳ್ಳಿ ಕಾರ್ಯಕರ್ತರು ಆರೋಪಿಸಿದ್ದರು.

ಈ ಹಿನ್ನೆಲೆ ಅಲ್ಲಿನ ಮಾಂಸದ ಮಾದರಿಗಳನ್ನು ಪರೀಕ್ಷೆಗಾಗಿ ಹೈದರಾಬಾದ್‌ನ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ಅಧೀನದಲ್ಲಿರುವ ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಯ (ಎನ್‌ಎಂಆರ್‌ಐ) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಲಾದ ಪರೀಕ್ಷಾ ವರದಿಯಲ್ಲಿ ಜೈಪುರದಿಂದ ತರಿಸಿದ್ದು ಕುರಿ ಮಾಂಸ ಎಂಬುದು ದೃಢಪಟ್ಟಿದೆ.

ಮೂರು ಪ್ರತ್ಯೇಕ ಲ್ಯಾಬ್‌ಗಳಲ್ಲಿ ವಿಶ್ಲೇಷಣೆ ಮಾಡಲಾಗಿದೆ
ಮಾಂಸದ ಶುಚಿತ್ವ ಮತ್ತು ಅದರಲ್ಲಿನ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಂಬಂಧಿಸಿದಂತೆ ಎಫ್‌ಎಸ್‌ಎಸ್‌ಎಐ ಅಂಗೀಕೃತ, ಎನ್‌ಎಬಿಎಲ್‌ ಮಾನ್ಯತೆ ಹೊಂದಿದ 3 ಪ್ರತ್ಯೇಕ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೊಳಪಡಿಸಲಾಗಿತ್ತು. ಆ 3 ವರದಿಯಲ್ಲೂ ಅದು ಕುರಿ ಮಾಂಸವೆಂಬುದು ದೃಢಪಟ್ಟಿದೆ.

ಬ್ಯಾಕ್ಟೀರಿಯಾ ಮಟ್ಟ ಹೆಚ್ಚಳ
ಎರಡು ಪ್ರಯೋಗಾಲಯಗಳ ವರದಿಗಳಲ್ಲಿ ಮಾಂಸದ ಮೈಕ್ರೋಬಯೋಲಾಜಿಕಲ್‌ ಪ್ಯಾರಾಮೀಟರ್‌ಗಳು ಮಾನದಂಡಗಳಿಗೆ ಅನುಗುಣವಾಗಿವೆ ಎಂದು ತಿಳಿಸಲಾಗಿದೆ. ಇನ್ನು ಒಂದು ಪ್ರಯೋಗಾಲಯದ ವರದಿಯಲ್ಲಿ ಇಕೋಲಿ ಎಂಬ ಬ್ಯಾಕ್ಟೀರಿಯಾವು ನಿರ್ದಿಷ್ಟಪಡಿಸಿದ ಮಾನದಂಡಕ್ಕಿಂತ ಹೆಚ್ಚಿರುವುದು ಕಂಡುಬಂದಿದೆ. ಈಗ ಪ್ರಯೋಗಾಲಯಗಳು ಈ ಮಾಂಸ ಸೇವಿಸುವವರಿಗೆ ಮಹತ್ವದ ಮಾಹಿತಿ ನೀಡಿದ್ದು, ಮಾಂಸವನ್ನು ಚೆನ್ನಾಗಿ ತೊಳೆದು ಬೇಯಿಸಿ ಸೇವಿಸಬೇಕೆಂದು ಸಲಹೆಯನ್ನು ನೀಡಿವೆ.

Leave A Reply

Your email address will not be published.