K.S.Eshwarappa: ಬಿಜೆಪಿ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು : ಇಲ್ಲವಾದಲ್ಲಿ ಪಕ್ಷ ಎರಡು ಹೋಳಾದಿತು – ಕೆಎಸ್ ಈಶ್ವರಪ್ಪ
K.S.Eshwarappa: ಅತ್ತ ಪಾದಯಾತ್ರೆ ಮುಗಿದ ಕೂಡಲೆ ಇತ್ತ ನಿನ್ನೆ ಬಿಜೆಪಿಯ 12 ಅತೃಪ್ತ ಶಾಸಕರು ಒಗ್ಗೂಡಿ ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ. ಈ ಬಗ್ಗೆತಕ್ಷಣವೇ ಕೇಂದ್ರ ನಾಯಕರು ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ಪಕ್ಷ ಎರಡು ಹೋಳಾಗುವ ಅಪಾಯವಿದೆ ಎಂದು ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನು ಪ್ರತಿಕ್ರಿಯಿಸಿದ್ದಾರೆ.
ಯತ್ನಾಳ್, ಜಾರಕಿಹೊಳಿ, ಸಿದ್ದೇಶ್ವರ್ ಹೀಗೆ ಅನೇಕರು ಸಭೆ ನಡೆಸಿದ್ದು ಅಸಮಾಧಾನ ಹೊರ ಹಾಕಿದ್ದಾರೆ. 12 ಜನ ಮಾತ್ರ ಸಭೆ ನಡೆಸಿದ್ದಾರೆ ಅಂತಾ ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಸಭೆ ಸೇರಿದವರು ಸಂಘಟನೆಯಲ್ಲಿದ್ದವರು, ಪಕ್ಷವನ್ನು ಕಟ್ಟಿದ್ದಾರೆ. ಇವರುಗಳು ಏನೇನೂ ನೋವು ಅನುಭವಿಸುದ್ದಾರೆಂದು ಹೇಳಿಕೊಂಡಿಲ್ಲ. ಪಕ್ಷದ ವಿಚಾರದಡಿ ಕೆಲಸ ಮಾಡಿದ್ರು ಬಹಳ ಜನಕ್ಕೆ ನೋವಿದೆ. ಇವರು ಮುಂದಿನ ದಿನದಲ್ಲಿ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದಾರೆ. ಬೆಳಗಾವಿಯ ನಂತರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಒಂದು ವೇಳೆ ಪಾದಯಾತ್ರೆ ನಡೆಸಿದರೆ ಗಲ್ಲಿ ಗಲ್ಲಿಗಳಲ್ಲಿ ಪಾರ್ಟಿ ಎರಡಾಗುತ್ತದೆ. ಪ್ರತಿ ತಾಲೂಕಿನಲ್ಲಿ ಬಿಜೆಪಿ ಇಭ್ಭಾಗವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಈಶ್ವರಪ್ಪ. ಕೇಂದ್ರದ ನಾಯಕರು ಪಾದಯಾತ್ರೆ ನಡೆಸುವವರನ್ನು ಕರೆದು ಮಾತನಾಡಿದರೆ ಪಾದಯಾತ್ರೆ ಆಗಲ್ಲ. ಪಕ್ಷ ಕಟ್ಟಿದ ನಾಯಕರನ್ನು ಮಾತನಾಡಿಸದೆ ಹೋದ್ರೆ ಇನ್ನಷ್ಟು ಜನ ಇದಕ್ಕೆ ಸೇರ್ಪಡೆ ಆಗುತ್ತಾರೆ.
ಮಾತನಾಡಿಸದೆ ಇದ್ದರೆ ತಾಲೂಕು ಮಟ್ಟದಲ್ಲಿ ಪಾರ್ಟಿ ಎರಡು ಹೋಳಾಗುತ್ತದೆ. ಹೀಗೆ ಆದಲ್ಲಿ ಬರುವಂತಹ ದಿನದಲ್ಲಿ ಸಂಘಟನೆ ಛಿದ್ರ, ಛಿದ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ವಿಜಯೇಂದ್ರರನ್ನು ಅಧ್ಯಕ್ಷರಾನ್ನಾಗಿ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಅಧಿಕಾರ ನೀಡಿದಕ್ಕೆ ಲೋಕಸಭೆಯಲ್ಲಿ 25 ರಿಂದ 17 ಸ್ಥಾನಕ್ಕೆಇಳಿದೆವು. ಮೋದಿ ಇದ್ದು, ಪಕ್ಷ ಬಲ ಇದ್ದಾಗ ಹೆಚ್ಚು ಸ್ಥಾನ ಗೆಲ್ಲುವು ಕಂಡಿದ್ದೆವು. ಪ್ರಧಾನಿ ಮೋದಿ ನಮ್ಮ ನೆಚ್ಚಿನ ನಾಯಕ. ಈಗ ಜೆಡಿಎಸ್ ಹೊಂದಾಣಿಕೆ ಮಾಡದೆ ಹೋಗದಿದ್ರೆ ಇಷ್ಟು ಸ್ಥಾನ ಕೂಡ ಬರುತ್ತಿರಲಿಲ್ಲ ಎಂದು ಹೇಳಿದ ಈಶ್ವರಪ್ಪ, ಯಡಿಯೂರಪ್ಪ ಕುಟುಂಬದವರ ಕೈಯಲ್ಲಿ ಪಾರ್ಟಿ ಕೊಡಲು ಕೇಂದ್ರದ ನಾಯಕರಿಗೇಕೆ ಮೋಹ? ಎಂದು ಅಸಮಧಾನ ಹೊರ ಹಾಕಿದ್ದಾರೆ.
ಸಾಮೂಹಿಕ ನಾಯಕತ್ವ ಎಂದು ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯುತ್ತಿತ್ತು. ಸ್ವಜನ ಪಕ್ಷಪಾತವನ್ನು ಯಡಿಯೂರಪ್ಪ ಮಾಡಿದ್ದಾರೆ. ಬಿಜೆಪಿಯಲ್ಲಿ ಹಿಂದುತ್ವನೇ ಹೊರಟು ಹೋಗಿದೆ. ಒಂದು ವೇಳೆ ಕೇಂದ್ರದ ನಾಯಕರು ಗಮನಿಸದೆ ಹೋದ್ರೆ ಪಕ್ಷ ಕಟ್ಟಿದವರಿಗೆ ನೋವಾಗುತ್ತದೆ. ನನಗೆ ಯಾರ ಮುಲಾಜು ಇಲ್ಲ, ನನಗೆ ಪಕ್ಷ ಮುಖ್ಯ. ಪಕ್ಷದಲ್ಲಿನ ಬೆಳವಣಿಗೆಯ ಕುರಿತು ಕೇಂದ್ರದ ನಾಯಕರು ಬೇಗ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿದೆ. ಇದಕ್ಕೆ ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದ ಈಶ್ವರಪ್ಪ, ಸಲ್ಮಾನ್ ಖುರ್ಷಿದ್ ದೇಶದ್ರೋಹ ಹೇಳಿಕೆ ನೀಡಿದ್ದಾರೆ. ಇವರನ್ನು ತಕ್ಷಣ ಬಂಧಿಸಬೇಕು. ಬಾಂಗ್ಲಾದಂತೆ ಭಾರತದಲ್ಲಿ ಅಲ್ಪ ಸಂಖ್ಯಾಂತರು ಪ್ರತಿಭಟನೆ ನಡೆಸುತ್ತಾರೆ. ನರಮೇಧ ಮಾಡುತ್ತಾರೆ ಎಂದು ಹೇಳಿದ್ದಾರೆ ಇದು ಖಂಡನೀಯ. ಈ ರೀತಿ ಗೊಂದಲ ಹುಟ್ಟಿಸುವ ಹೇಳಿಕೆಗಳನ್ನು ಯಾರು ಕೂಡ ಇಡಬಾರದು ಎಂದು ಈಶ್ವರಪ್ಪ ಹೇಳಿದರು.