Paris Olympics: ಪ್ಯಾರಿಸ್ ಒಲಂಪಿಕ್ ಗೆ ಅದ್ಧೂರಿ ತೆರೆ, ಅತೀ ಹೆಚ್ಚು ಪದಕ ಗೆದ್ದ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?

Share the Article

Paris Olympics: ಜುಲೈ 26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಕ್ರೀಡಾ ಹಬ್ಬ ಭಾನುವಾರ (ನಿನ್ನೆ) ಅದ್ಧೂರಿಯಾಗಿ ತೆರೆಕಂಡಿದೆ. ಕಳೆದ ಜುಲೈ 26ರಂದು ಪ್ಯಾರಿಸ್‌ನ (Paris) ಸೆನ್‌ ನದಿ ದಡದಲ್ಲಿ ಅದ್ಧೂರಿಯಾಗಿ ಆರಂಭವಾಗಿದ್ದ ಕ್ರೀಡಾಕೂಟಕ್ಕೆ ಸ್ಟೇಡ್‌ ಡೆ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ತೆರೆ ಎಳೆಯಲಾಗಿದೆ.

ಹೌದು, ಕಳೆದ ತಿಂಗಳು 26ರಂದು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ 2024ಕ್ಕೆ ಅದ್ಧೂರಿ ಚಾಲನೆ ದೊರಕಿತು. ಈ ಟೂರ್ನಿಯಲ್ಲಿ 206 ದೇಶಗಳ 10,741 ಆಟಗಾರರು ಪಾಲ್ಗೊಂಡಿದ್ದರು. ಸಾಮಾನ್ಯವಾಗಿ ಉದ್ಘಾಟನಾ ಸಮಾರಂಭವನ್ನು ಕ್ರೀಡಾ ಸಭಾಂಗಣದಲ್ಲಿ ನಡೆಸಲಾಗುತ್ತದೆ. ಆದರೆ ವಿಶೇಷವೆಂಬಂತೆ ಮೊದಲ ಬಾರಿಗೆ ಇದು ಪ್ಯಾರಿಸ್‌ನ ಪ್ರಮುಖ ಹೆಗ್ಗುರುತಾಗಿರುವ ಸೀನ್ ನದಿ ದಡದಲ್ಲಿ ನಡೆಯಿತು. ಇದೀಗ ಈ ಪ್ಯಾರಿಸ್ ಹಬ್ಬ ಮುಕ್ತಾಯವಾಗಿದೆ. ಇದರಲ್ಲಿ ಹೆಚ್ಚು ಪದಕ ಗೆದ್ದ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ? ಎಂದು ಕಣ್ಣಾಡಿಸೋಣ ಬನ್ನಿ.

ಅಮೆರಿಕ ಮತ್ತು ಚೀನಾ ನಡುವೆ ‘ಪದಕದ ಓಟ’:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ 126 ಪದಕಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ತನ್ನ ಒಲಿಂಪಿಕ್ ಅಭಿಯಾನವನ್ನು 40 ಚಿನ್ನದ ಪದಕಗಳೊಂದಿಗೆ ಒಟ್ಟು 91 ಪದಕಗಳೊಂದಿಗೆ ಕೊನೆಗೊಳಿಸಿತು. ಒಲಿಂಪಿಕ್ಸ್‌ನುದ್ದಕ್ಕೂ ಅಮೆರಿಕ ಮತ್ತು ಚೀನಾದಂತಹ ಎರಡು ಕ್ರೀಡಾ ಮಹಾಶಕ್ತಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಡೈವಿಂಗ್ ಮತ್ತು ಕಲಾತ್ಮಕ ಈಜುಗಳಂತಹ ಪೂಲ್ ಈವೆಂಟ್‌ಗಳಲ್ಲಿ ಚೀನಾ ಪ್ರಾಬಲ್ಯ ಹೊಂದಿತ್ತು. ಮತ್ತೊಂದೆಡೆ, ಯುಎಸ್ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿತು. ಅಥ್ಲೆಟಿಕ್ಸ್‌ನಲ್ಲಿ ಮಾತ್ರ 14 ಚಿನ್ನ, 11 ಬೆಳ್ಳಿ ಮತ್ತು 9 ಕಂಚು ಗೆದ್ದಿತು. ಎಂಟು ಚಿನ್ನ ಸೇರಿದಂತೆ 28 ಪದಕಗಳನ್ನು ಗೆದ್ದುಕೊಂಡಿರುವ ಅಮೆರಿಕ ಈಜುಕೊಳದಲ್ಲೂ ಶಕ್ತಿ ಪ್ರದರ್ಶಿಸಿತು.

ಭಾರತಕ್ಕೆ 6 ಪದಕ:
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತು. ಆಸ್ಟ್ರೇಲಿಯಾ 18 ಚಿನ್ನದ ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡರೆ, ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಟಾಪ್-5 ಅನ್ನು ಸೇರಿಕೊಂಡಿತು. ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನ ಗಳಿಸಿತು. ಭಾರತ ತಂಡವು ಒಂದು ಬೆಳ್ಳಿ ಮತ್ತು ಐದು ಕಂಚಿನೊಂದಿಗೆ 71ನೇ ಸ್ಥಾನದಲ್ಲಿದೆ.

Leave A Reply