Pistol: ಲೈಸೆನ್ಸ್ ಸೀಲ್ ಯಾವುದೂ ಇಲ್ಲ! ಮಹಿಳೆಯಿಂದ ಪಕ್ಕಾ ಪಿಸ್ತೂಲ್ ಸೇಲ್: ವಿಡಿಯೋ ವೈರಲ್

Share the Article

Pistol: ಲೈಸೆನ್ಸ್ ಸೀಲ್ ಯಾವುದೂ ಇಲ್ಲ. ರಾಶಿ ರಾಶಿ ಪಕ್ಕಾ ಪಿಸ್ತೂಲ್ ಸೇಲ್ ಮಾಡಿದ್ರೆ ಯಾರಿಗೆ ತಾನೇ ಬೇಡ ಹೇಳಿ. ಪಕ್ಕದ ಮನೆಯವರನ್ನು ಉಡೀಸ್ ಮಾಡ್ಬೇಕ್ ಅನ್ನೋವಷ್ಟು ಕೋಪ ಇದ್ದೋರು ಇವರನ್ನು ಹುಡುಕಿಕೊಂಡು ಹೋಗೋದು ಖಂಡಿತ.

ವಿಷ್ಯ ಏನಂದ್ರೆ ಮಹಿಳೆ ಒಬ್ಬಳು ಪಾತ್ರೆ ತೊಳೆಯುತ್ತಿದ್ದಾಳೆ ಅಂದುಕೊಂಡು ವಿಡಿಯೋ ನೋಡಿದಾಗ ಆಕೆ ರಾಶಿ ರಾಶಿ ಪಿಸ್ತೂಲ್ (Pistol)  ಕ್ಲೀನಿಂಗ್ ಮಾಡೋ ಸೀನ್ ನೋಡಿ ಯಾರಿಗಾದ್ರೂ ಶಾಕ್ ಆಗಲೇ ಬೇಕು. ಹೌದು, ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ನೀರಿನಲ್ಲಿ ತೊಳೆಯುತ್ತಿರುವ ಈ ವೈರಲ್ ವಿಡಿಯೊದಿಂದ ಇದೀಗ ಭಾರಿ ಅಕ್ರಮವೊಂದು ಬಯಲಾಗಿದೆ.

ಸದ್ಯ ಮಧ್ಯಪ್ರದೇಶದ ಪೊಲೀಸರು ಈ ವಿಡಿಯೋ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನಗೆ ಬೀಗ ಹಾಕಿದ ಘಟನೆ ನಡೆದಿದೆ. ಜೊತೆಗೆ ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್‌, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆಯ ಪತಿ ಶಕ್ತಿ ಕಪೂರ್ ಶಾಖಾವರ್ ಮಾವ ಬಿಹಾರಿಲಾಲ್ ಶಾಖಾವಾರ್ ಇಬ್ಬರು ಜೊತೆ ಸೇರಿ ಕಳೆದ ಆರು ತಿಂಗಳಿನಿಂದ ಈ ಅಕ್ರಮ ಕಾರ್ಖಾನೆ ನಡೆಸುತ್ತಿದ್ದು, ಇಲ್ಲಿ ಲೈಸೆನ್ಸ್ ಸೀಲ್ ಯಾವುದೂ ಇಲ್ಲದೇ ಪಿಸ್ತೂಲ್‌ಗಲನ್ನು ತಯಾರಿಸಲಾಗುತಿತ್ತು. ಅಷ್ಟೇ ಅಲ್ಲ ಈ ಪಿಸ್ತುಲ್ ಗೆ ಡಿಮ್ಯಾಂಡ್ ಕೂಡಾ ಜೋರಾಗಿಯೇ ಇತ್ತು. ಇದರಿಂದ ಅಕ್ರಮ ವಹಿವಾಟಿಗೆ ಇದೇ ಪಿಸ್ತೂಲ್‌ಗಳು ಬಳಕೆಯಾಗುತ್ತಿತ್ತು.

ಇದೀಗ ಪೊಲೀಸರು ಈ ವಿಡಿಯೋದ ಕುರಿತು ತನಿಖೆ ನಡೆಸಿ ನೇರವಾಗಿ ಅಕ್ರಮ ಕಾರ್ಖಾನೆಗೆ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಅಕ್ರಮ ಪಿಸ್ತೂಲ್‌ಗಳು, ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ.

 

Leave A Reply