Neighbour Rooster: ಮುಂಜಾನೆದ್ದು ಕೋಳಿ ಕಾಟವೆಂದು ಪೊಲೀಸರ ಬೆನ್ನು ಬಿಡದ ಮಹಿಳೆ! ಏನಿದು ಕೋಳಿ ವಿಷ್ಯ

Neighbour Rooster: ಮಹಿಳೆಯರಿಗೆ ಕೆಲವೊಮ್ಮೆ ಜಗಳ ಮಾಡೋಕೆ ಕಾರಣ ಬೇಕಿಲ್ಲ. ಸಣ್ಣ ಕಾರಣಕ್ಕೂ ಕೋಳಿಯಂತೆ ಕಾಲು ಕೆದರಿಕೊಂಡು ಜಗಳ ಮಾಡೋಕೆ ಸದಾ ಸಿದ್ದರಿರುತ್ತಾರೆ. ಇದೀಗ ಮಹಿಳೆ ಒಬ್ಬಳು ಕೋಳಿ ವಿಷ್ಯಕ್ಕೆ ಪೊಲೀಸ್ ಮೆಟ್ಟಿಲೇರಿದ್ದಾಳೆ. ಹೌದು, ಏನಿದು ಕೋಳಿ ಜಗಳ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಬೆಳಗಿನ ಮುಂಜಾನೆ ಕೋಳಿ ಕೂಗೋದು ಸಾಮಾನ್ಯ. ಆದ್ರೆ, ಪಕ್ಕದ ಮನೆಯ ಕೋಳಿ (Neighbour Rooster) ಬೆಳಗಾಗುವುದಕ್ಕಿಂತ ಮುಂಚೆ ಕೂಗಲು ಆರಂಭಿಸುತ್ತಿದೆ. ನನ್ನ ನಿದ್ದೆಯನ್ನು ಕೋಳಿ ಹಾಳುಮಾಡುತ್ತಿದೆ ಎಂದು ಪಾಲಿಕೆ ಅಧಿಕಾರಿಗಳಿಗೆ ಮಹಿಳೆ ಒಬ್ಬಳು ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಕೇರಳದ ಪಾಲಕ್ಕಾಡಿನಲ್ಲಿ ಮಹಿಳೆಯೂ, ಪಕ್ಕದ ಮನೆಯವರು ಸಾಕಿರುವ ಹುಂಜ 4 ಗಂಟೆಗೆ ಕೂಗಲು ಶುರುಮಾಡುತ್ತಿದೆ. ಇದರಿಂದ ನನ್ನ ನಿದ್ದೆ ಹಾಳಾಗುತ್ತಿದೆ. ಜೊತೆಗೆ ಆರೋಗ್ಯ ಹದಗೆಡುತ್ತಿದೆ. ಇಷ್ಟೇ ಅಲ್ಲ ಪಕ್ಕದ ಮನೆಯವರು ಕೋಳಿ ಗೂಡನ್ನು ಶುಚಿಯಾಗಿಟ್ಟುಕೊಂಡಿಲ್ಲ. ಇದರಿಂದ ಗಬ್ಬು ನಾತ ಬೀರುತ್ತಿದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು. ನನ್ನ ನೆಮ್ಮದಿಗೆ ಭಂಗ ತರುತ್ತಿರುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಮಹಿಳೆ ಲಿಖಿತ ದೂರನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿದ್ದಾರೆ.
ದೂರು ಸ್ವೀಕರಿಸಿದ ವಾರ್ಡ್ ಕೌನ್ಸಿಲರ್ ಮಹಿಳೆಯ ಪಕ್ಕದ ಮನೆಗೆ ತೆರಳಿ ದೂರಿನ ಕುರಿತು ವಿವರಿಸಿದ್ದಾರೆ. ಈ ವೇಳೆ ಗೂಡು ಶುಚಿಯಾಗಿಡಲು ಒಪ್ಪಿಕೊಂಡಿದ್ದಾರೆ. ಇದರಂತೆ ಕೋಳಿ ಗೂಡನ್ನು ಶುಚಿ ಮಾಡಿದ್ದಾರೆ. ಇದೇ ವೇಳೆ ಕೋಳಿ ಕೂಗುವುದು ಸಹಜ. ಇದನ್ನು ನಿಲ್ಲಿಸುವುದು ಹೇಗೆ ಎಂದು ಮರು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಾದ ದೂರುದಾರ ಮಹಿಳೆ ಆರೋಗ್ಯ ಇಲಾಖೆ ಮೊರೆ ಹೋಗಿದ್ದಾಳೆ.