Work Pressure: ಕಚೇರಿಯಲ್ಲಿ ಕೆಲಸ ಮಾಡಿ ಆಯಾಸ, ಒತ್ತಡವೇ? ಹೀಗೆ ಮಾಡಿ: ತಕ್ಷಣವೇ ಹೊಸ ಶಕ್ತಿಯನ್ನು ಪಡೆಯುವಿರಿ
Work Pressure: ಬೆಳಗ್ಗೆ ಎದ್ದ ಕ್ಷಣದಿಂದ ನಮ್ಮ ತಲೆಯಲ್ಲಿ ಆಫೀಸ್ ಕೆಲಸಗಳ ಪಟ್ಟಿ ಶುರುವಾಗುತ್ತದೆ. ಮನೆಯಲ್ಲಿರುವ ಎಲ್ಲವನ್ನೂ ಹೊತ್ತುಕೊಂಡು ಆಫೀಸ್ ತಲುಪಲು 9.30 ಅಥವಾ 10 ಗಂಟೆ ಆಗಿರುತ್ತದೆ. ಆ ಹೊತ್ತಿಗೆ ದಿನವಿಡೀ ಏನನ್ನು ಮುಗಿಸಬೇಕು ಎಂಬ ಪ್ಲಾನಿಂಗ್ ನಮ್ಮ ತಲೆಯಲ್ಲಿ ಸ್ಥಿರವಾಗಿರುತ್ತದೆ.
ಆಮೇಲೆ ಆಫೀಸಿಗೆ ಹೋದ ಮೇಲೆ ಕೊಂಚ ಫ್ರೆಶ್ ಅಪ್ ಆಗಿ ತಕ್ಷಣ ಕೆಲಸ ಶುರು ಮಾಡುತ್ತೇವೆ. ಕೆಲಸದಲ್ಲಿ ತೊಡಗಿದ ನಂತರ ಕೆಲವೊಮ್ಮೆ ನಮಗೆ ನೀರು ಕುಡಿಯುವಷ್ಟು ವ್ಯವಧಾನವೂ ಇರುವುದಿಲ್ಲ. ಕೆಲವೊಮ್ಮೆ ಮಧ್ಯಾಹ್ನ ಊಟದ ಸಮಯವಾಗಿರುವದು ಸಹ ಗಮನಕ್ಕೆ ಬರದಷ್ಟು ಕೆಲಸದ ಹೊರೆ ಇರುತ್ತದೆ. ನಿರಂತರವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದರಿಂದ ನಮ್ಮ ಕಣ್ಣು, ಕೈ, ಬೆನ್ನು, ಕುತ್ತಿಗೆ ಬಿಗಿದಂತಾಗಿ ನಮಗೆ ಒಂದು ರೀತಿಯ ಆಯಾಸ ಅಥವಾ ಮಂಪರು ಬರುತ್ತದೆ.
ಈ ಆಯಾಸವನ್ನು ಹೋಗಲಾಡಿಸಲು ಕೆಲವೊಮ್ಮೆ ಟೀ, ಕಾಫಿ ತೆಗೆದುಕೊಳ್ಳುತ್ತೇವೆ ಅಥವಾ ಕೆಲವೊಮ್ಮೆ ಅತ್ತಿತ್ತ ಸುತ್ತಾಡಿ ಬರುತ್ತೇವೆ. ಆದರೆ, ಕೆಲವು ಸರಳವಾದ ಕ್ರಿಯೆಗಳನ್ನು ಮಾಡುವುದರಿಂದ ಈ ಈ ಆಯಾಸ ಅಥವಾ ಮಂಪರನ್ನು ಹೋಗಲಾಡಿಸಬಹು.
1. ಕಣ್ಣಿನ ವ್ಯಾಯಾಮ
ಲ್ಯಾಪ್‌ಟಾಪ್ ಅನ್ನು ನಿರಂತರವಾಗಿ ನೋಡುವುದು ಕಣ್ಣಿನ ಆಯಾಸಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ, ನಿಮ್ಮ ಕಣ್ಣುಗಳನ್ನು ಲ್ಯಾಪ್ಟಾಪ್ನಿಂದ ದೂರವಿರಿಸಿ ಮತ್ತು ಕೆಲವು ಸರಳ ವ್ಯಾಯಾಮಗಳನ್ನು ಮಾಡಿ. ಕಣ್ಣುಗಳನ್ನು ಮಾತ್ರ ಮೇಲಕ್ಕೆ ಮತ್ತು ಕೆಳಕ್ಕೆ, ಎಡ ಮತ್ತು ಬಲಕ್ಕೆ ವೃತ್ತಾಕಾರವಾಗಿ ತಿರುಗಿಸಬೇಕು. ಇದು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಣ್ಣ ರೆಪ್ಪೆಗಳನ್ನು ಗಟ್ಟಿಯಾಗಿ ಮುಚ್ಚುವುದು ತೆರೆಯುವುದು ಈ ರೀತಿ 25 ಬಾರಿ ಮಾಡಬೇಕು ಇದು ಕಣ್ಣಿನ ಸುತ್ತಲಿನ ಸ್ನಾಯುಗಳನ್ನು ವಿರಾಮಗೊಳಿಸುತ್ತದೆ.
2. ಬೇಸರವಾದಾಗ ಟೀ ಬ್ರೇಕ್
ಕೆಲಸದಿಂದ ದಣಿವಾದಾಗ ಗೆಳೆಯರೊಂದಿಗೆ ಕ್ಯಾಂಟೀನ್‌ಗೆ ಹೋಗಿ ಟೀ, ಕಾಫಿ ಕುಡಿಯುತ್ತೇವೆ. ಅಂತಹ ಸಂದರ್ಭಗಳಲ್ಲಿ ಟೀ, ಕಾಫಿ ಜೊತೆಗೆ ಒಂದಿಷ್ಟು ಜಂಕ್ ಫುಡ್ ಕೂಡ ತಿನ್ನುತ್ತೇವೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಿಗೆ ಹಣ್ಣು ಅಥವಾ ತರಕಾರಿ ಸಲಾಡನ್ನು ತಿನ್ನುವುದು ಯಾವಾಗಲೂ ಉತ್ತಮ. ಅಥವಾ ಗ್ರೀನ್ ಟೀ ಇಲ್ಲವೇ ಆಯುರ್ವೇದ ಗಿಡಮೂಲಿಕೆ ಪೇಯ ಇತ್ಯಾದಿಗಳನ್ನು ಸೇವಿಸಬಹುದು.
3. ಕುಳಿತುಕೊಂಡು ಪ್ರಾಣಾಯಾಮ ಮತ್ತು ವ್ಯಾಯಾಮಗಳನ್ನು ಮಾಡಿ
ದೀರ್ಘ ಉಸಿರನ್ನು ಎಳೆದುಕೊಂಡು ಬಿಡುವುದು ವಿಶ್ರಾಂತಿ ಅನುಭವಿಸಲು ಸಹಾಯ ಮಾಡುತ್ತದೆ. ಅಥವಾ ಅನುಲೋಮ ವಿಲೋಮ ಪ್ರಾಣಾಯಾಮ ಒಂದು ಉತ್ತಮ ವಿಕಲ್ಪವಾಗಿದೆ. ಕೆಲಸ ಮಾಡುವಾಗ ಮಧ್ಯೆ ಬಿಡುವು ಮಾಡಿಕೊಂಡು ಈ ಚಟುವಟಿಕೆಗಳನ್ನು ಮಾಡಿ. ಇದು ಕೆಲಸದ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಂತಿರುವಾಗ ಅಥವಾ ಕುರ್ಚಿಯಲ್ಲಿ ಕುಳಿತಿರುವಾಗ ಕೆಲವು ಸರಳ ಯೋಗಾಸನಗಳನ್ನು ಮಾಡಲು ಮರೆಯದಿರಿ. ಪ್ರತಿ 1/2 ಗಂಟೆ ಒಮ್ಮೆ ನಿಮ್ಮ ಕೆಲಸವನ್ನು ನಿಲ್ಲಿಸಿ ಎರಡು ಮೂರು ನಿಮಿಷ ಈ ಸರಳ ಕ್ರಿಯೆಗಳನ್ನು ಮಾಡುತ್ತಾ ಇದ್ದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಸಹಾಯವಾಗುತ್ತದೆ.