Marriage: ಇಳಿ ವಯಸ್ಸಿನ ಒಂಟಿತನಕ್ಕೆ ದಾರಿ ಕಂಡುಕೊಂಡ ಮಾಜಿ ಐಪಿಎಸ್‌ ಅಧಿಕಾರಿ : ಇದಕ್ಕೆ ಮಕ್ಕಳೇ ಕಾರಣ!

Marriage: ವಯಸ್ಸಾದ ಮೇಲೆ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವ ಸಮಯ ಅದು. ಅದು ಒಂದು ಕಾಲದಲ್ಲಿ ಈ ರೀತಿ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಿಗೆ ತಮ್ಮ ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳುವಷ್ಟು ಟೈಂ ಇಲ್ಲ. ವೃದ್ಧ ತಂದೆ ತಾಯಿ ಒಂದೆಡೆಯಾದರೆ, ಮಕ್ಕಳು ಕೆಲಸದ ನಿಮಿತ್ತ ಇನ್ನೆಲ್ಲೋ ಬದುಕುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ವೃದ್ಧರು ಒಂಟಿಯಾಗುತ್ತಾರೆ. ಅದರಲ್ಲೂ ಅವರು ಸಂಗಾತಿಯನ್ನು ಕಳೆದುಕೊಂಡಿದ್ದರೆ ಅವರ ಬದುಕು ಪಾಪ ನರಕ. ತಮ್ಮ ಮಕ್ಕಳಿಗಾಗಿ ದುಡಿದು ಜೀವನ ಕಟ್ಟಿಕೊಟ್ಟು ಕೊನೆಗೆ ಒಂಟಿಯಾಗಿ ಬದುಕುವ ಭಾಗ್ಯ ಈಗಿನ ಪೋಷಕರದ್ದು.

ಇಲ್ಲೊಬ್ಬ ವೃದ್ಧರು ತಮ್ಮ 81ನೇ ವಯಸ್ಸಿನಲ್ಲಿ ತಮ್ಮ ಒಂಟಿತನವನ್ನು ಕಳೆಯಲು ಮರು ಮದುವೆ ಆಗಿದ್ದಾರೆ. ಆಶ್ಚರ್ಯ ಅನಿಸಿದರು ಇದು ಅನಿವಾರ್ಯ ಅವರಿಗೆ. ಈ ಯವಸ್ಸಿನಲ್ಲಿ ಮದುವೆಯಾದ ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರು ಲಖನೌದ ಇಂದಿರಾನಗರ ನಿವಾಸಿ. 2022ರಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು. ಎಸ್ಆರ್ ದಾರಾಪುರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಎಲ್ಲರೂ ಮದುವೆಯಾಗಿ ಅವರವರ ಜೀವನದಲ್ಲಿ ಬಿಸ್ಯಿಯಾಗಿದ್ದಾರೆ. ಈ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಲು, ಅವರ ಮನಸ್ಸಿನ ಒಂಟಿತನ ದೂರ ಮಾಡಲು ಯಾರೂ ಇಲ್ಲ. ಇಳಿ ವಯಸ್ಸಿನಲ್ಲಿ ಸಂಗಾತಿ ಅಥವಾ ತಮ್ಮವರ ಅಗತ್ಯ ಬಹಳ ಇರುತ್ತದೆ. ಜೊತೆಗೆ ಯಾರು ಇಲ್ಲ ಎಂದರೆ ಬದುಕು ಬಹಳ ದುಸ್ತರವಾಗಿರುತ್ತದೆ.

ಇವರು ಈ ಎಲ್ಲಾ ನೋವುಗಳಿಂದ ಹೊರಬರಲು ಲಂಖೀಪುರದ ಮಹಿಳೆಯೊಂದಿಗೆ ಆಗಸ್ಟ್‌ 8ರಂದು ಎರಡನೇ ಬಾರಿಗೆ ಮದುವೆಯಾಗಿದ್ದಾರೆ. ಆಕೆ ಅಂಗನವಾಡಿ ಕಾರ್ಯಕರ್ತೆ. ತಂದೆಯ ಬಗ್ಗೆ ಕಾಳಜಿ ತೂರಲು ಯಾರಿಗೂ ಪುರುಸೋತ್ತಿಲ್ಲ. ಇದರಿಂದ ಬೇಸತ್ತ ನಿವೃತ್ತ ಐಪಿಎಸ್ ಅಧಿಕಾರಿ ಇನ್ನೊಂದು ಮದುವೆ ಆಗಿದ್ದಾರೆ. ಇವರ ಬಗ್ಗೆ ಅವರ ಊರಿನಲ್ಲಿ ಒಳ್ಳೆ ಅಭಿಪ್ರಾಯವಿದೆ. ಸಮಾಜ ಸೇವೆ ಮಾಡುತ್ತ ಕಾಲ ಕಳೆಯುತ್ತಾರಂತೆ. ಅವರಿಗೆ ಇತ್ತೀಚೆಗೆ ಅನಾರೋಗ್ಯವೂ ಕಾಡಿದ ಕಾರಣ ಅವರನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಈ ಕಾರಣಕ್ಕಾಗಿ ತಮ್ಮ ಕೊನೇ ದಿನಗಳಲ್ಲಿ ತನ್ನನ್ನು ನೋಡಿಕೊಳ್ಳಲು ಯಾರದರು ಬೇಕು ಎಂದು ಈ ನಿರ್ಧಾರ ಮಾಡಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ.

Leave A Reply

Your email address will not be published.