Naga Chaitanya Engagement: ಎಂಗೇಜ್ಮೆಂಟ್ ದಿನವೇ ನಟ ನಾಗಚೈತನ್ಯಗೆ ಬಿಗ್ ಶಾಕ್; ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು?

Share the Article

Naga Chaitanya Engagement: ನಟ ನಾಗ ಚೈತನ್ಯ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಆಗಸ್ಟ್ 8ರಂದು ಉಂಗುರ ಬದಲಾಯಿಸಿಕೊಂಡು ಎಂಗೇಜ್ ಆಗಿದ್ದಾರೆ. ಅಲ್ಲದೇ ಅಕ್ಕಿನೇನಿ ನಾಗಾರ್ಜುನ ಈ ಸುದ್ದಿಯನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ. ಸದ್ಯ ಎಂಗೇಜ್ಮೆಂಟ್ (Naga Chaitanya Engagement)  ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆದ್ರೆ ಜ್ಯೋತಿಷಿ ವೇಣುಸ್ವಾಮಿ ಅವರು ನಿಶ್ಚಿತಾರ್ಥದ ದಿನದಂದು ಟಾಲಿವುಡ್‌ ನಟ ನಾಗಚೈತನ್ಯ ಬಗ್ಗೆ ಸ್ಫೋಟಕ ವಿಷಯವೊಂದನ್ನು ನುಡಿದಿದ್ದಾರೆ. ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ವೈವಾಹಿಕ ಜೀವನ ಮತ್ತು ಭವಿಷ್ಯವನ್ನು ಹೇಳುತ್ತೇನೆ ಎಂದು ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದಾರೆ. ಅದಕ್ಕೆ ಇಂದು ಉತ್ತರ ಸಿಗಲಿದೆ.

ಹೌದು, ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆ ಮತ್ತು ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಆಗಸ್ಟ್ 9ರಂದು ಹೇಳುತ್ತೇನೆ ಎಂದು ಸೆನ್ಸೇಷನಲ್ ಪೋಸ್ಟ್ ಮಾಡಿದ್ದಾರೆ.

ವೇಣು ಸ್ವಾಮಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ವೈವಾಹಿಕ ಜೀವನದ ಸಂವೇದನಾಶೀಲ ಮತ್ತು ಜಾತಕ ವಿಶ್ಲೇಷಣೆ ನಡೆಯಲಿದೆ” ಎಂದು ಬರೆದಿದ್ದಾರೆ. ಈ ಪೋಸ್ಟ್ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೇಣು ಸ್ವಾಮಿ ಈ ಹಿಂದೆ ಉಲ್ಲೇಖಿಸಿದ ಅನೇಕ ಜಾತಕ ವಿಚಾರ ನಿಜವಾಗಿದೆ. ಸಮಂತಾ ಮತ್ತು ನಾಗಚೈತನ್ಯ ಬೇರ್ಪಡುತ್ತಾರೆ ಎಂದು ವೇಣು ಸ್ವಾಮಿ ನಿಶ್ಚಿತಾರ್ಥದ ಸಮಯದಲ್ಲಿಯೇ ಹೇಳಿದ್ದರು. ಕೊನೆಗೆ ಅದೇ ನಿಜವಾಯ್ತು.

ಅಲ್ಲದೇ ಇತ್ತೀಚೆಗೆ ಭಾರತವು ಟಿ 20 ವಿಶ್ವಕಪ್‌ ಗೆಲ್ಲುತ್ತದೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದರು. ಅದೂ ಸಹ ನಿಜವಾಗಿತ್ತು.

ಈಗ, ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ವೈವಾಹಿಕ ಜೀವನದ ಜಾತಕವನ್ನು ಹೇಳುತ್ತೇನೆ ಎಂದು ವೇಣು ಸ್ವಾಮಿ ಪೋಸ್ಟ್ ಮಾಡಿದ್ದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಉಂಟುಮಾಡಿದೆ.

Leave A Reply