Home News Paris Olympics 2024: ‘CAS’ ನಿಂದ ವಿನೇಶ್ ಅರ್ಜಿ ಸ್ವೀಕಾರ: ಫೋಗಟ್ ಅವರಿಗೆ ‘ಬೆಳ್ಳಿ ಪದಕ’...

Paris Olympics 2024: ‘CAS’ ನಿಂದ ವಿನೇಶ್ ಅರ್ಜಿ ಸ್ವೀಕಾರ: ಫೋಗಟ್ ಅವರಿಗೆ ‘ಬೆಳ್ಳಿ ಪದಕ’ ನಿರೀಕ್ಷೆ

Hindu neighbor gifts plot of land

Hindu neighbour gifts land to Muslim journalist

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪರಕದೊಂದಿಗೆ ತಾಯ್ನಾಡಿಗೆ ಮರಳ ಬೇಕಾದ ಕುಸ್ತಿ ಪಟು ವಿನೇಶ್‌ ಪೊಗಟ್‌ ಅವರಿಗೆ ಬೆಳ್ಳಿ ಪದಕ ಸಿಗುವ ಭರವಸೆ ಇದೆ. 50 ಕೆಜಿ ವಿಭಾಗದ ಅಂತಿಮ ಪಂದ್ಯದಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CAS) ಮೇಲ್ಮನವಿ ಸಲ್ಲಿಸಿದ್ರು. ಅವರು ನ್ಯಾಯಾಲಯಕ್ಕೆ ಒಟ್ಟು ಎರಡು ಮನವಿಗಳನ್ನ ಸಲ್ಲಿಸಿದ್ದರು. ಒಂದು, ಫೋಗಟ್’ರನ್ನ ಮತ್ತೆ ತೂಕ ಮಾಡಲು ಅವಕಾಶ ಕೇಳಿದ್ದರು. ಮತ್ತೊಂದು ಬೇಡಿಕೆ ಏನಂದರೆ ಬೆಳ್ಳಿ ಪದಕಕ್ಕೆ ತಾನು ಅರ್ಹಳು, ಇದನ್ನು ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.

ನ್ಯಾಯಾಲಯವು ಮೊದಲ ಮನವಿಯನ್ನು ತಿರಸ್ಕರಿಸಿದೆ. ಅಂತಿಮ ಸ್ಪರ್ಧೆ ಈಗಾಗಲೆ ಚಿನ್ನದ ಪದಕಕ್ಕಾಗಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಮತ್ತು ಯುಎಸ್‌ಎಯ ಸಾರಾ ಆನ್ ಹಿಲ್ಡೆಬ್ರಾಂಟ್ ನಡುವೆ ನಡೆದು ಆಗಿದೆ ಎಂದು ಹೇಳಿದೆ. ಹಾಗೂ ಅವರ ಎರಡನೇ ಮನವಿಯಲ್ಲಿ, ಪೋಗಟ್ ಬೆಳ್ಳಿ ಪದಕ ಮನವಿ ಮಾಡಿದ್ದಾರೆ. ಯಾಕೆಂದರೆ ಅವರು ಆ ದಿನವೇ ಅದನ್ನ ಗಳಿಸಿದ್ದರು. ಅಂದು ಅವರ ತೂಕವೂ ಸರಿಯಾಗಿತ್ತು ಎಂದು ಹೇಳಿದ್ದಾರೆ. ಒಂದು ವೇಳೆ ಸಿಎಎಸ್ ತೀರ್ಪು ಫೋಗಟ್ ಪರವಾಗಿ ಬಂದರೆ, ಐಒಸಿ ಅದಕ್ಕೆ ಬದ್ಧವಾಗಿರಬೇಕು. ಶುಕ್ರವಾರ ಬೆಳಿಗ್ಗೆ 11: 30ರ ಹೊತ್ತಿಗೆ ಎಎಸ್’ನ ಅಂತಿಮ ತೀರ್ಪು ಹೊರ ಬೀಳಬಹುದು. ಬೇಳ್ಳಿ ಪದಕ ವಿನೇಶ್‌ ಪೊಗಟ್‌ ಅವರಿಗೆ ಸಿಗುತ್ತಾ ಇಲ್ವಾ ಅನ್ನೋದು ತಿಳಿಯುತ್ತದೆ.