Home News R Ashok: ಸಿದ್ದರಾಮಯ್ಯ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಸಾಕು! ಅವರು ಎಂತವರು ಅನ್ನೋದು ಕನ್ನಡಿಗರಿಗೆ...

R Ashok: ಸಿದ್ದರಾಮಯ್ಯ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಸಾಕು! ಅವರು ಎಂತವರು ಅನ್ನೋದು ಕನ್ನಡಿಗರಿಗೆ ಉತ್ತರ ಸಿಗುತ್ತೆ; ಆರ್. ಅಶೋಕ್

R Ashok

Hindu neighbor gifts plot of land

Hindu neighbour gifts land to Muslim journalist

R Ashok: ಮುಡಾ ಹಗರಣದ ಹೆಸರು ಹೇಳುತ್ತಿದಂತೆಯೇ ಯಾವಾಗಲು ಸಿಎಂ ಸಿದ್ದರಾಮಯ್ಯ (CM Siddaramaiah) , ಗರಂ ಆಗುತ್ತಾರೆ. ಅಲ್ಲದೇ ಎಷ್ಟೋ ಸಲ ಇದರ ಬಗ್ಗೆ ಹೇಳುವುದು? ಮತ್ತೆ ಮತ್ತೆ ಕೆದಕಬೇಡಿ ಅಂತಾ ಹೇಳಿದ್ದು ಇದೆ. ಆದ್ರೆ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ನೀರಿಕ್ಷೆ ಮಾಡುತ್ತಿದ್ದಾರೆ. ನಿಜವಾಗಲೂ ಮುಖ್ಯಮಂತ್ರಿಗಳು ಸತ್ಯವಂತರೇ ಆಗಿದ್ರೆ ನೀವು ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ (R Ashok) ಕೇಳಿದ್ದಾರೆ.

ಆ ಪ್ರಶ್ನೆಗಳು ಇಂತಿವೆ:

1.) 2013ರ ಚುನಾವಣಾ ಅಫಿಡವಿಟ್ ನಲ್ಲಿ ತಮ್ಮ ಪತ್ನಿಯ ಆಸ್ತಿ ಉಲ್ಲೇಖ ಮಾಡದೆ ತಪ್ಪು ಮಾಹಿತಿ ನೀಡುತ್ತೀರಿ. ನಂತರ 2018ರಲ್ಲಿ ಅದರ ಮಾರುಕಟ್ಟೆ ಮೌಲ್ಯ ₹25 ಲಕ್ಷ ಎಂದು ನಮೂದಿಸಿದ್ದೀರಿ. 5 ವರ್ಷಗಳಾದ ಮೇಲೆ ದಿಢೀರನೆ ಆಸ್ತಿ ಹೊಂದಿರುವ ಬಗ್ಗೆ ಜ್ಞಾನೋದಯವಾಯಿತು?

2.) ಈಗ ಹಗರಣ ಬೆಳಕಿಗೆ ಬಂದಮೇಲೆ ₹63 ಕೋಟಿ ಕೊಡಿ ಸೈಟು ಬಿಟ್ಟುಕೊಡುತ್ತೇನೆ ಎಂದು ಹೇಳುತ್ತೀರಿ. 2018ರಲ್ಲಿ ₹25 ಲಕ್ಷ ಇದ್ದ ಆಸ್ತಿ ಮೌಲ್ಯ, 2024ರಲ್ಲಿ ₹63 ಕೋಟಿ ಆಗಲು ಹೇಗೆ ಸಾಧ್ಯ? ಇದೇನಾದರೂ @RahulGandhi ಅವರ ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಯೋಜನೆಯ ಭಾಗವಾ?

3. 50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಕೊಡುವುದು ಬೇಡ ಎಂದು ನಗರಾಭಿವೃದ್ಧಿ ಇಲಾಖೆ ಆದೇಶವಿದ್ದರೂ ಅದನ್ನ ಉಲ್ಲಂಘಿಸಿ ಮೂಡಾ ಅಧ್ಯಕ್ಷ ಮರಿಗೌಡ ಅವರು ಹಗರಣದ ಬಾಗಿಲನ್ನು ತೆಗೆದಿದ್ದು ಏಕೆ? ಇದರ ಹಿಂದೆ ಯಾವ ಪ್ರಭಾವಿ ಶಕ್ತಿ ಕೆಲಸ ಮಾಡುತ್ತಿತ್ತು?

ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ಅಶೋಕ್ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕನ್ನಡಿಗರ ಪರವಾಗಿ ಪೋಸ್ಟ್ ಹಾಕಿದ್ದಾರೆ.