Indian National Flag: ರಾಷ್ಟ್ರಧ್ವಜಕ್ಕೆ ಕುಸಿದ ಬೇಡಿಕೆ: ಕೇಂದ್ರ ಸರ್ಕಾರದ ಈ ನಿರ್ಧಾರವೇ ಇದಕ್ಕೆ ಕಾರಣ !

Indian National Flag: ದೇಶದ ಏಕೈಕ ಮಾನ್ಯತೆ ಪಡೆದ ರಾಷ್ಟ್ರಧ್ವಜ ತಯಾರಿಕೆ ಸಂಸ್ಥೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ. ಇಲ್ಲಿ ಪ್ರತಿ ವರ್ಷ ಕೋಟಿಯಾಂತರ ರುಪಾಯಿಗಳ ಧ್ವಜ ಮಾರಾಟ ವಹಿವಾಟು ನಡೆಯುತ್ತದೆ. ಆದರೆ ಈ ಬಾರಿ ಸುರಿದ ಬಾರಿ ಮಳೆ ಮತ್ತು ಹವಾಮಾನ ಬದಲಾವಣೆ ಧ್ವಜ ಮಾರಾಟದ ಮೇಲೆ ಪರಿಣಾಮ ಬೀರಿದೆ. ಕೇವಲ ನಿರಂತ ಮಳೆ ಮಾತ್ರವಲ್ಲದೆ ಕೇಂದ್ರ ಸರ್ಕಾರದ ನಿರ್ಧಾರ ಕೂಡ ಬೇಡಿಕೆ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಸ್ವಾತಂತ್ರ್ಯ ‌ಅಮೃತಮಹೋತ್ಸವ ಹಿನ್ನೆಲ ಕೇಂದ್ರ ಸರ್ಕಾರ ಪಾಲಿಸ್ಟರ್, ಸಿಂಥೆಟಿಕ್ ಧ್ವಜಗಳ ತಯಾರಿಕೆ ಅನುಮತಿ‌ ನೀಡಿರುವುದೇ ಖಾದಿ ಧ್ವಜಕ್ಕೆ ಬೇಡಿಕೆ ಕುಸಿಯಲು ಕಾರಣ.

ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (KKGSS) ರಾಷ್ಟ್ರಧ್ವಜಗಳನ್ನು ತಯಾರಿಸಲಾಗುತ್ತದೆ. ಆದರೆ ಈ ಬಾರಿ ಬೇಡಿಕೆ ಅರ್ಧಕ್ಕೆ ಅರ್ಧ ಕುಸಿದಿದೆ. ಶೇ 50ರಷ್ಟು ಮಾತ್ರ ಬೇಡಿಕೆ ಬಂದಿದೆ. ಇದಕ್ಕೆ ನಿರಂತರವಾಗಿ ಸುರಿಯುತ್ತಿರುವ ಮಳೆ, ಹವಾಮಾನ ಬದಲಾವಣೆ, ಪ್ರವಾಹ, ನೆರೆ ಮತ್ತು ರಸ್ತೆಗಳ ಅವ್ಯವಸ್ಥೆ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದಾಖಲೆ ಪ್ರಮಾಣದ ವಹಿವಾಟು ನಡೆದಿತ್ತು. ಆದರೆ, ಈ ಬಾರಿ ಜುಲೈ ತಿಂಗಳ ಅಂತ್ಯದವರೆಗೆ 97 ಲಕ್ಷ ರೂಪಾಯಿ ವಹಿವಾಟು ಮಾತ್ರ ಆಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮಾಹಿತಿ ನೀಡಿದ್ದಾರೆ.

“ಉತ್ತರ ಮತ್ತು ದಕ್ಷಿಣ ಭಾರತ ಸೇರಿದಂತೆ ದೇಶದಾಂತ್ಯದಿಂದ ರಾಷ್ಟ್ರಧ್ವಜಕ್ಕೆ ಭಾರಿ ಬೇಡಿಕೆ ಬರುತ್ತದೆ. ಆದರೆ ಈ ಬಾರಿ ಬಹಳ ಕುಂಠಿತವಾಗಿದೆ. ಸಾಮಾನ್ಯ ಪ್ರತಿವರ್ಷ 3 ರಿಂದ 3.5 ಕೋಟಿಯಷ್ಟು ಧ್ವಜ ಮಾರಾಟ ನಡೆಯುತ್ತಿತ್ತು. ಬರುವ ಜನವರಿ 26 ಗಣರಾಜ್ಯದ ವರೆಗೆ 3.5 ವಹಿವಾಟಿನ ನಿರೀಕ್ಷೆ ಇತ್ತು. ಆದರೆ, ಪ್ರಕೃತಿ ವಿಕೋಪ ಇದಕ್ಕೆಲ್ಲ ತಣ್ಣೀರೆರಚಿದೆ. ಭಾರತೀಯ ಮಾನಕ ಸಂಸ್ಥೆ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸುತ್ತದೆ. ಅಳತೆಗೆ ತಕ್ಕಂತೆ ದರ ನಿಗಧಿಯಾಗುತ್ತದೆ. 250 ರೂ.ಯಿಂದ 30 ಸಾವಿರವರೆಗೆ ರಾಷ್ಟ್ರಧ್ವಜದ ಬೆಲೆ ಇರುತ್ತದೆ. ಇನ್ನೊಂದು ಬೇಸರದ ಸಂಗತಿ ಎಂದರೆ ಧ್ವಜ ತಯಾರು ಮಾಡಲು ಬಟ್ಟೆ ತಯಾರಿಸುವ ಮಗ್ಗ ಹಾಗೂ ಪರಿಕರಗಳಿಗೆ ನೆರೆ ನೀರು ನುಗ್ಗಿ ಖಾದಿ ಉತ್ಪಾದನೆ ಕುಸಿತ ಕಂಡಿದೆ‌. ಆದರೆ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಳೆದ ವರ್ಷ ತಯಾರಿಸಿದ 1ಕೋಟಿ 80 ಲಕ್ಷದ ಧ್ವಜಗಳು ಸ್ಟಾಕ್ ಇನ್ನು ಬಾಕಿ ಇದೆ. ಈ ಬಾರಿ ಬೇಡಿಕೆ ಕಡಿಮೆ ಆಗಿರುವುದರಿಂದ ಸಂಸ್ಥೆ ಜೊತೆಗೆ ಕಾರ್ಮಿಕರ ಆದಾಯಕ್ಕೂ ಹೊಡೆತ ಬಿದ್ದಿದೆ.

ರಾಷ್ಟ್ರಧ್ವಜ ಮಾರಾಟದ ಅಂಕಿ – ಅಂಶ:
ವರ್ಷ ಮೊತ್ತ ಧ್ವಜ ಮಾರಾಟ
2020-21 1.15 ಕೋಟಿ 16,290
2021-22 2.5 ಕೋಟಿ 20,171
2022-23 4.28 ಕೋಟಿ 28,850
2023-24 2.26 ಕೋಟಿ 18,614
2024-25 97 ಲಕ್ಷ ರೂ. 11,000

Leave A Reply

Your email address will not be published.