Sirigere Mutt: ನಾಡಿನ ಶ್ರೀಮಂತ ಮಠ, ಸಿರಿಗೆರೆ ತರಳಬಾಳು ಶ್ರೀಗಳ ಪೀಠ ತ್ಯಾಗಕ್ಕೆ ಭಕ್ತರಿಂದಲೇ ಒತ್ತಾಯ !! ಏನಿದು ವಿವಾದ?

Sirigere Mutt: ‘ತರಬಾಳು’(Taralabalu) ಕಾರ್ಯಕ್ರಮದ ಮೂಲಕವೇ ರಾಜ್ಯದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದ ಚಿತ್ರದುರ್ಗದ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ(Dr Shivamurthy Shivacharya Swamiji) ಪೀಠತ್ಯಾಗ ಮಾಡಬೇಕೆಂಬ ಆಗ್ರಹ ಇದೀಗ ಜೋರಾಗಿದೆ. ಮಠದ ಭಕ್ತಾದಿಗಳೇ ಈಷಕೂಗನ್ನು ಎಬ್ಬಿಸಿದ್ದಾರೆ. ಹಾಗಿದ್ರೆ ಸ್ವಾಮೀಜಿಯ ಪೀಠತ್ಯಾಗ ಚರ್ಚೆ ಈಗ ಮುನ್ನೆಲೆಗೆ ಬಂದಿದ್ದೇಕೆ? ಭಕ್ತರು ಆಕ್ರೋಶಗೊಂಡಿದ್ದೇಕೆ? ಇಲ್ಲಿದೆ ನೋಡಿ ಮಾಹಿತಿ.

ಹೌದು, ಸಿರಿಗೆರೆ(Sirigere) ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (Sirigere Shivamurthy Shivacharya Swamiji) ಅವರು ಪೀಠ ತ್ಯಾಗ ಮಾಡಿ, ಉತ್ತರಾಧಿಕರಿಯನ್ನು ನೇಮಕ ಮಾಡುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಶ್ರೀಗಳ ಪೀಠತ್ಯಾಗ, ಉತ್ತರಾಧಿಕಾರಿ ನೇಮಕ ಮತ್ತು ಹಿರಿಯ ಗುರುಗಳ ಅವಧಿಯಲ್ಲಿ ರೂಪಿತವಾದ ಬೈಲಾ ಯಥಾವತ್ತಾಗಿ ಜಾರಿಗೊಳಿಸಬೇಕೆಂದು ರವಿವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ (Shamanur Shivashankarappa) ಅಧ್ಯಕ್ಷತೆಯಲ್ಲಿ ಸಾದರ ಲಿಂಗಾಯತ ಸಮಾಜದ ಮುಖಂಡರ ಸಭೆ ನಡೆದಿದ್ದು, ನಿರ್ಧಾರ ಕೈಗೊಳ್ಳಲಾಗಿದೆ.

“ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್​​ ತಿದ್ದುಪಡಿ ಮಾಡಿಕೊಂಡಿದ್ದಾರೆ, ಇದರ ಅಗತ್ಯವಿತ್ತಾ. ಕೋರ್ಟ್​ನಲ್ಲಿ ಈ ವಿಚಾರ ಇದೆ. ವೈಭವದಿಂದ ಇದ್ದ ಸಿರಿಗೆರೆ ಮಠಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಿರಿಗೆರೆ ಹಾಗೂ ಸಾಣಿಹಳ್ಳಿ ಸ್ವಾಮೀಜಿಗಳು ಬದಲಾಗಲಿ, ಉತ್ತರಾಧಿಕಾರಿಗಳನ್ನು ಮಾಡಲಿ ಎಂದು ಶಿವಶಂಕರಪ್ಪ ಒತ್ತಾಯಿಸಿದರು. ಅಲ್ಲದೇ, ಆ. 18ಕ್ಕೆ ಬೆಂಗಳೂರಿನಲ್ಲಿ ಸ್ವಾಮೀಜಿ ಭೇಟಿ ಆಗಲಿದ್ದೇವೆ. ಅದಕ್ಕಾಗಿ 25 ಸದಸ್ಯರ ನಿಯೋಗ ರಚನೆ ಆಗಿದೆ, ಅವರ ಜೊತೆ ಚರ್ಚೆ ಮಾಡಿ, ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿವಶಂಕರಪ್ಪ ಹೇಳಿದ್ದಾರೆ. ಅಲ್ಲದೆ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದ್ದು ಆಗಸ್ಟ್‌ 18ರಂದು ಸಿರಿಗೆರೆ ತರಳಬಾಳು ಮಠಕ್ಕೆ ಹೋಗಲು ನಿರ್ಧಾರ ಮಾಡಲಾಗಿದೆ.

ಸ್ವಾಮೀಜಿಗಳ ಪೀಠತ್ಯಾಗಕ್ಕೆ ಆಗ್ರಹ ಏಕೆ?
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿ ಆಗಿ 42 ವರ್ಷ ಕಳೆದಿದೆ. ಸ್ವಾಮೀಜಿ ಅವರಿಗೆ 60 ವರ್ಷ ಆದ ಕೂಡಲೇ ನಿವೃತ್ತಿ ಹೊಂದಬೇಕಿತ್ತು, ಆದರೂ ನಿವೃತ್ತಿ ಆಗಿಲ್ಲ. ಸದ್ಯ ಸ್ವಾಮೀಜಿಗೆ 78 ವರ್ಷ ವಯಸ್ಸು ಆಗಿದೆ. ಈ ಹಿಂದೆ ಸ್ವಾಮೀಜಿಯ ಸಹೋದರಿ ಮಗನನ್ನು ಮರಿ ಸ್ವಾಮೀಜಿ ಮಾಡಬೇಕು ಅಂತ ಸ್ವಾಮೀಜಿ ಮುಂದಾಗಿದ್ದರು. ಆದರೆ ಸಮಾಜದಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಮುಂದೂಡಿರುವ ಆರೋಪ ಇದೆ. ನಿವೃತ್ತಿ ವಯಸ್ಸು ಹತ್ತಿರ ಬಂದಾಗ ಸಿರಿಗೆರೆಗೆ ಮರಿ ಸ್ವಾಮಿಯನ್ನು ನೇಮಕ ಮಾಡಬೇಕಿತ್ತು. ಅದು ಕೂಡ ಆಗಿಲ್ಲ.

ಪೀಠತ್ಯಾಗ ಚರ್ಚೆ ಈಗ ಮುನ್ನಲೆಗೆ ಬಂದಿರುವುದು ಏಕೆ?
ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ 30 ವರ್ಷಗಳ ಹಿಂದೆ ಟ್ರಸ್ಟ್​ ರಚಿಸಿ ಏಕ ವ್ಯಕ್ತಿ ಡೀಡ್​ ರಚಿಸಿದ್ದು, ಭಕ್ತರಿಗೆ ಈಗ ಗೊತ್ತಾಗಿದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ. ಇದು ಸಹಜವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾಮೀಜಿಗಳ ಪೀಠ ತ್ಯಾಗ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಸಭೆಗಳು ನಡೆಯುತ್ತಿದ್ದವು. ಆದರೆ, ಮುನ್ನಲೆಗೆ ಬಂದಿರಲಿಲ್ಲ. ಇದೀಗ ಶಾಸಕ ಶಾಮನೂರು ಶಿವಶಂಕರಪ್ಪ ಪ್ರವೇಶದಿಂದ ಈ ವಿಚಾರ ಮಹತ್ವ ಪಡೆದುಕೊಂಡಿದೆ.

ದಶಕದ ಹಿಂದೆಯೇ ಪೀಠತ್ಯಾಗಕ್ಕೆ ನಿರ್ಧರಿಸಿದ್ದ ಸ್ವಾಮೀಜಿ:
ಡಾ. ಶಿವಮೂರ್ತ ಶಿವಾಚಾರ್ಯ ಸ್ವಾಮೀಜಿ ಅವರು ದಶಕದ ಹಿಂದೆಯೇ ಬಹಿರಂಗ ಸಭೆಯಲ್ಲಿ ಪೀಠತ್ಯಾಗ ಮಾಡುವುದಾಗಿ ಹೇಳಿದ್ದರು. ಆದರೆ, ಭಕ್ತರು ಇಂತಹ ನಿರ್ಧಾರ ಕೈಗೊಳ್ಳದಿರಿ. ನೀವೇ ಮುಂದುವರೆಯಬೇಕು ಎಂಬ ಒತ್ತಾಯದ ಮೇರೆಗೆ ಸ್ವಾಮೀಜಿ ಅವರು ಪೀಠದಲ್ಲಿ ಮುಂದುವರೆದಿದ್ದಾರೆ. ಅಲ್ಲದೆ, ಉತ್ತರಾಧಿಕಾರಿ ನೇಮಕ ವಿಚಾರವನ್ನು ಭಕ್ತರಿಗೆ ಬಿಟ್ಟಿದ್ದಾರೆ.

Leave A Reply

Your email address will not be published.