H D Kumarswamy: ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ದಾಖಲೆಗಳನ್ನು ಕೊಟ್ಟಿದ್ದು ಡಿ ಕೆ ಶಿವಕುಮಾರ್ ? ಸ್ಪೋಟಕ ಸತ್ಯ ಬಹಿರಂಗ !!

Share the Article

H D Kumarswamy: ಮುಡಾ ಹಗರಣದ(Muda Scam) ವಿರುದ್ಧ ಬಿಜೆಪಿ-ಜೆಡಿಎಸ್(BJP-JDS) ಸಮರ ಸಾರಿದ್ದು ಇದೀಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಕೈಗೊಂಡಿವೆ. ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಸ್ಪೋಟಕ ಸತ್ಯವೊಂದನ್ನು ಬಹಿರಂಗಗೊಳಿಸಿದ್ದಾರೆ.

ಹೌದು, ಬಿಜೆಪಿ ಹಾಗೂ ಜೆಡಿಎಸ್(BJP-JDS) ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಮುಡಾ ಹಗರಣ ಕುರಿತು ಸಿಎಂ ಸಿದ್ದರಾಮಯ್ಯ(CM Siddaramaiah) ಅವರ ವಿರುದ್ಧವಾಗಿ ದಾಖಲೆಗಳನ್ನು ನೀಡಿದ್ದು, ನೀವೇ ಅಲ್ಲವೇ(ಡಿಕೆಶಿ)? ಆ ದಾಖಲೆಗಳನ್ನು ಹುಡುಕಿಕೊಂಡು ಯಾರ ಯಾರ ಮನೆಗೆ ಹೋಗ್ತಿದ್ದೀರಾ ಎಂದು ನಮಗೆ ಗೊತ್ತು. ಆದರೆ, ಇವಾಗ ನಾನು ಸಿದ್ದರಾಮಯ್ಯ ಅವರ ಪರ, ಅವರನ್ನು ಮುಟ್ಟಲು ಬಿಡುವುದಿಲ್ಲ ಎಂದು ನಾಟಕ ಆಡ್ತಿದ್ದಾರೆ ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಅಲ್ಲದೆ ಕಾಂಗ್ರೆಸ್ ಸರ್ಕಾರ ಹತ್ತು ವರ್ಷ ಅಧಿಕಾರದಲ್ಲಿ ಇರಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ‌. ಆದರೆ, ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಹತ್ತು ವರ್ಷ ಅಲ್ಲ, ಹತ್ತು ತಿಂಗಳು ಮುಂದುವರಿಯಲ್ಲ ಸರ್ಕಾರ ಎಂದು ಭವಿಷ್ಯ ನುಡಿದರು. ಜೊತೆಗೆ ನಮ್ಮ ನಡುವೆ ಸಣ್ಣ ಪುಟ್ಟ ಗೊಂದಲ ಇರಬಹುದು. ಆದರೆ ಬಿಜೆಪಿ ಹಾಗೂ ಜೆಡಿ ಎಸ್ ನಡುವೆ ಬಿರುಕು ಉಂಟು ಮಾಡಲು ಅಸಾಧ್ಯ. ನಿಮ್ಮ ಆಕ್ರಮಣಗಳನ್ನು ಬಯಲಿಗೆಳೆಬೇಕಾದರೆ ಬಿಜೆಪಿ ಜೆಡಿಎಸ್ ಒಟ್ಟಾಗಿ ಕೈಜೋಡಿಸಿದ್ದೇವೆ. ನಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ ಎಂದರು.

Leave A Reply