UP: ರಾಹುಲ್ ಗಾಂಧಿ ಹೊಲಿದ ಚಪ್ಪಲಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ !! 10 ಲಕ್ಷ ಕೊಡ್ತೀನಿ ಕೊಡಲ್ಲ ಅಂತಾನೆ ಅಂಗಡಿ ಮಾಲೀಕ !!

Share the Article

UP: ಇತ್ತೀಚೆಗೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ(Rahul Gandhi) ಸುಲ್ತಾನ್‌ಪುರದ(Sulthan Pura) ಚಮ್ಮಾರರೊಬ್ಬರ ಅಂಗಡಿಗೆ ಭೇಟಿ ನೀಡಿ ಚಪ್ಪಲಿ ಹೊಲಿದಿದ್ದರು. ಇದೀಗ ಅವರು ಹೊಲಿದ ಚಪ್ಪಲಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು ಲಕ್ಷ ಲಕ್ಷ ಡಿಮ್ಯಾಂಡ್ ಬರುತ್ತಿದೆ.

ಹೌದು, ಕಳೆದ ಜು.26ರಂದು ಸುಲ್ತಾನಪುರದ ಚಮ್ಮಾರನೊಬ್ಬನ ಅಂಗಡಿಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಕೈಯಾರೆ ಚಪ್ಪಲಿಯೊಂದನ್ನು ಹೊಲಿದಿದ್ದರು ಹಾಗೂ ಅದಕ್ಕೀಗ 10 ಲಕ್ಷ ರು.ನಷ್ಟು ಭಾರೀ ಬೇಡಿಕೆ ಬಂದಿದೆ. ಆದರೆ ಆ ಚಪ್ಪಲಿಯನ್ನು ಯಾರಿಗೂ ನೀಡದೇ ಚಮ್ಮಾರ ತನ್ನ ಬಳಿಯೇ ಇರಿಸಿಕೊಳ್ಳಲು ನಿರ್ಧರಿಸಿದ್ದಾನೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಅಂಗಡಿಯ ಮಾಲೀಕ ರಾಮ್‌ಚೇತ್‌(Ram Chetan) ಮಾತನಾಡಿ ‘ಈಗ ಜನರು ಬಂದು ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ರಾಹುಲ್‌ ಗಾಂಧಿ ಕೂಡ ನನ್ನನ್ನು ಸಂಪರ್ಕಿಸಿದ್ದರು. ರಾಹುಲ್‌ ಗಾಂಧಿ ಹೊಲಿದ ಚಪ್ಪಲಿಗಾಗಿ ತುಂಬಾ ಕರೆಗಳು ಬರುತ್ತಿವೆ. ಆ ಚಪ್ಪಲಿಗೆ 10 ಲಕ್ಷ ರೂ. ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, ನಾನು ಅವರ ಹಣವನ್ನು ನಿರಾಕರಿಸಿದ್ದೇನೆ. ನಾನು ಈ ಚಪ್ಪಲಿಗಳನ್ನು ಯಾರಿಗೂ ನೀಡುವುದಿಲ್ಲ. ನಾನು ಇದಕ್ಕೆ ಫ್ರೇಮ್‌ ಹಾಕಿ ಅಂಗಡಿಯಲ್ಲಿ ಸಂರಕ್ಷಿಸಿ ಇಡುತ್ತೇನೆ’ ಎಂದು ತಿಳಿಸಿದ್ದಾರೆ.

ಅಂದಹಾಗೆ ರಾಹುಲ್‌ ಗಾಂಧಿ ಜುಲೈ 26ರಂದು ಸುಲ್ತಾನ್‌ಪುರದ ಹೊರವಲಯ ವಿಧಾಯಕ್ ನಗರ ಪ್ರದೇಶದಲ್ಲಿರುವ ರಾಮ್‌ಚೇತ್‌ ಅವರ ಅಂಗಡಿಗೆ ಅಚ್ಚರಿಯ ಭೇಟಿ ನೀಡಿದ್ದರು. ಭೇಟಿ ವೇಳೆ ರಾಮ್‌ ಚೇತ್‌ ಅವರ ಕುಟುಂಬದ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ ನಾಯಕ ವಿಚಾರಿಸಿದ್ದರು. ಅಲ್ಲದೆ ತಾವೂ ಒಂದು ಚಪ್ಪಲಿಯನ್ನೂ ಹೊಲಿದಿದ್ದರು. ಅವರು ಹೊಲಿದ ಚಪ್ಪಲಿಗೆ ಈಗ ಇನ್ನಿಲ್ಲದ ಬೇಡಿಕೆ ವ್ಯಕ್ತವಾಗಿದೆ.

Leave A Reply