Wayanad Landslide: ವಿಧಿ ಎಷ್ಟೊಂದು ಕ್ರೂರಿ : ಆ 6 ಕೈಗಳು, 3 ತಲೆ, 8 ಕಾಲುಗಳು, ರುಂಡವೇ ಇಲ್ಲದ ಆ ದೇಹಗಳು ಯಾರದ್ದು..?

Wayanad Landslide: ಸುಂದರವಾದ ಪ್ರಕೃತಿಯ ಮಧ್ಯೆ ಭೂ ತಾಯಿಯ ಮಡಿಲಲ್ಲಿ ಸ್ವಂತ ಮನೆ ಕಟ್ಟಿಕೊಂಡು ಆನಂದದ ಬದುಕು ಸಾಗಿಸುತ್ತಿದ್ರು. ಆದರೆ ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಮಾಯ. ಕೇವಲ ಆರ್ಥನಾದ ಮಾತ್ರ. ಸಸ್ಯಶ್ವಾಮಲೆಯಾಗಿದ್ದ ವಯನಾಡಿನ ಮಲ್ಪಾಡಿ ಮಣ್ಣಿನ ರಾಶಿಯಾಗಿ ಮಾರ್ಪಟ್ಟಿತ್ತು. ಅಲ್ಲಿದ್ದವರು ಯಾರು ಎಲ್ಲಿ ಹೋದರೂ ಅನ್ನೋದನ್ನು ನೋಡೋದಕ್ಕೂ ಯಾರೂ ಇರಲಿಲ್ಲ. ಇದೀಗ ಎರಡು ದಿನಗಳ ಕಾರ್ಯಚರಣೆ ನಂತರ ಅನೇಕರ ಮೃತದೇಹದ ಭಾಗಗಳು ಒಂದೊಂದಾಗಿ ಸಿಗುತ್ತಿದೆ. ಒಂದೆಡೆ ಕೈ ಸಿಕ್ಕರೆ, ಇನ್ನೊಂದೆಡೆ ಕಾಲುಗಳು, ಮತ್ತೊಂದೆಡೆ ರುಂಡಗಳು, ಇನ್ನೆಲ್ಲೂ ಸಂಧಿಯಲ್ಲಿ ಮುಂಡಗಳು, ಮಣ್ಣಿನ ಅಡಿಯಲ್ಲಿ ಕೊಳೆತ ದೇಹಗಳು..

ವಯನಾಡಿನ ಜನರ ಬದುಕು ನಿಜಕ್ಕೂ ಇಷ್ಟೊಂದು ನರಕ ಸದೃಶವಾಯ್ತೆ..? ತಮ್ಮವರನ್ನು ಕೊನೆ ಬಾರಿಗೆ ನೋಡುವ ಭಾಗ್ಯಕ್ಕಾಗಿ ಕಾಯುತ್ತಿರುವ ಸಂಬಂಧಿಕರಿಗೆ ಇದೆಂಥ ದೌರ್ಭಾಗ್ಯ. ಸದ್ಯಕ್ಕೆ ಮಲ್ಪಾಡಿಯಲ್ಲಿದ್ದ ಸರ್ಕಾರಿ ಆಸ್ಪತ್ರೆಯ ಶವಾಗಾರವನ್ನು ತಾತ್ಕಾಲಿಕವಾಗಿ ಅಲ್ಲೆ ಪಕ್ಕದಲ್ಲಿರುವ ಸಭಾಂಗಣಕ್ಕೆ ವರ್ಗಾಯಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಜಾಗ ಸಾಕಾಗದ ಕಾರಣ ಈ ವ್ಯವಸ್ಥೆ ಮಾಡಿಲಾಗಿದೆ. ತಮ್ಮವರ ಹೆಣಕ್ಕಾಗಿ ಸಂಬಧಿಕರು ಕಾಯುತ್ತಿರುವ ದೃಶ್ಯ ಮನಕಲಕುವಂತಿದೆ. ನಮ್ಮವರ ಹೆಣ ನೋಡಲು ಸಿಗುತ್ತೋ ಇಲ್ವೋ ಅನ್ನುವ ಗೊಂದಲದಲ್ಲೇ ಕಾಯುತ್ತಿದ್ದಾರೆ.

ಆದರೆ ವಿಧಿಯ ವಿಪರ್ಯಾಸವೇ ಬೇರೆಯೇ ಇದೆ. ಇಷ್ಟು ಭೀಕರವಾಗಿ ಪ್ರಾಣ ಬಿಟ್ಟ ಮೇಲೂ ವಿಧಿ ಅವರನ್ನು ಬಿಡುತ್ತಿಲ್ಲ. ಕೊನೆಗೆ ಹೆಣವಾದರೂ ಸಂಬಂಧಿಕರಿಗೆ ಸಿಗಬಾರದಾ..? ಆದರೆ ಕೊಳೆತ ಶವಗಳೇ ಶವಾಗಾರ ಸೇರುತ್ತಿವೆ. ದೇಹವೇ ಇಲ್ಲದ ಆರು ಕೈಗಳು ಪತ್ತೆಯಾದರೆ, ಮತ್ತೆ ಮೂರು ತಲೆ ಮಾತ್ರ ಪತ್ತೆಯಾಗಿದೆ. ಇದನ್ನು ಯಾರದ್ದು ಎಂದು ಹೇಗೆ ಪತ್ತೆ ಮಾಡುವುದು..? ಮುಖಗಳು ಮಣ್ಣಿನಲ್ಲಿ ಹೂತ ಪರಿಣಾಮ ಯಾರದ್ದೆಂದೇ ತಿಳಿಯುತ್ತಿಲ್ಲ. ಎಂಟು ಬರೀಯ ಕಾಳುಗಳು ಮಾತ್ರ ಶವಗಾರದಲ್ಲಿವೆ. ಇದರಲ್ಲಿ ನಮ್ಮವರ ಕಾಲುಗಳು ಯಾವುವು..? ಇನ್ನು ತಲೆಯೇ ಇಲ್ಲದ ಮುಂಡಗಳು ಐದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌ ತಂಡ ಕೈಗೆ ಸಿಕ್ಕ ದೇಹದ ಭಾಗಗಳನ್ನು ಶವಗಾರದಲ್ಲಿ ತಂದು ಇರಿಸಿದ್ದಾರೆ. ನಿಜಕ್ಕೂ ವಿಧಿ ಎಷ್ಟೊಂದು ಕ್ರೂರಿ ಅಲ್ವಾ..? ಸ್ವಂತ ಸೂರಿನೊಂದಿಗೆ ಸುಂದರ ಬದುಕು ಕಟ್ಟಿಕೊಂಡವರು ಚೂರಲ್ಮಲ ಊರಿನ ಜನ. ಆದರೆ ವಿಧಿ ಲಿಖಿತ ಬೇರೇಯೇ ಇತ್ತು. ತಮ್ಮ ಸ್ವಂತ ಮನೆಯೊಂದಿಗೆ ತಮ್ಮ ಬದುಕೂ ಕೊಚ್ಚಿ ಹೋಯ್ತು.

Wayanad Landslide: ವಯನಾಡು ದುರಂತ : ಬೇರೆಯವರ ಮಗು ಕಾಪಾಡಲು ಹೋಗಿ ತನ್ನ ಮಗಳನ್ನು ಕಳೆದುಕೊಂಡ ಮಹಿಳೆ : ಮುಂದೇನಾಯ್ತು ಆ ಕುಟುಂಬಕ್ಕೆ..?

Leave A Reply

Your email address will not be published.