Home News Red Alert: ಈ ಬಾರಿ ಜುಲೈನಲ್ಲಿ ವಾಡಿಕೆಗಿಂತಲೂ ಎಷ್ಟು ಮಳೆ ಜಾಸ್ತಿ ಬಿದ್ದಿದೆ..? ದಕ್ಷಿಣ...

Red Alert: ಈ ಬಾರಿ ಜುಲೈನಲ್ಲಿ ವಾಡಿಕೆಗಿಂತಲೂ ಎಷ್ಟು ಮಳೆ ಜಾಸ್ತಿ ಬಿದ್ದಿದೆ..? ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ರೆಡ್‌ ಅಲರ್ಟ್‌

Rain Alert

Hindu neighbor gifts plot of land

Hindu neighbour gifts land to Muslim journalist

Red Alert: ಕಳೆದ ಮುಂಗಾರು ಕೈಕೊಟ್ಟ ಹಿನ್ನೆಲೆ ವಾಡಿಕೆಗಿಂತ ಕಡಿಮೆ ಮಳೆ ಆಗಿದ್ದರ ಹಿನ್ನೆಲೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿತ್ತು. ಆದರೆ ಈ ಬಾರಿ ಯಥೇಚ್ಛವಾಗಿ ಮಳೆ ಸುರಿದಿದೆ. ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ (Karnataka Rain) ಮುಂಗಾರು ಮಳೆ (Monsoon) ಆಗಿದೆ. ವರ್ಷಂಪ್ರತಿ ಜುಲೈನಲ್ಲಿ 263 ಮಿ.ಮೀ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಜುಲೈ 1 ರಿಂದ 30ರ ವರೆಗೆ ರಾಜ್ಯದಲ್ಲಿ 390 ಮಿ.ಮೀ ನಷ್ಟು ಮಳೆ ಬಿದ್ದಿದೆ. ವಾಡಿಕೆಗಿಂತ 48% ಹೆಚ್ಚಾಗಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ. ಜೂನ್‌ನಲ್ಲಿ 199 ಮಿ.ಮೀ ಮಳೆಯಾಗಬೇಕಿತ್ತು. ಆದರೆ 194 ಮಿ.ಮೀ. ಮಳೆಯಾಗುವ ಮೂಲಕ 3% ಕಡಿಮೆ ಮಳೆ ಸುರಿದಿತ್ತು.

ನಿನ್ನೆ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಮಳೆ ಸುರಿದಿತ್ತು. ಇಂದು ಕೂಡ ರಾಜ್ಯದ ನಾಲ್ಕು ಜಿಲ್ಲೆಗೆ ರೆಡ್‌ ಅಲರ್ಟ್‌ (Red Alert) ಜಾರಿಯಾಗಿದೆ. ಹಾಗೂ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ (Orange Alert) ಘೋಷಣೆಯಾಗಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗೆ ರೆಡ್‌ ಅಲರ್ಟ್‌ ಜಾರಿ ಮಾಡಲಾಗಿದೆ. ಇಂದು ಭಾರೀ ಮಳೆ (Heavy Rain) ಬೀಳಲಿದೆ ಎಂದು ಹವಾಮಾನ ಇಲಾಅಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಆರೆಂಜ್‌ ಅಲರ್ಟ್‌ ಜಾರಿ ಮಾಡಿದೆ. ಬೆಳಗಾವಿ, ಮೈಸೂರಿಗೆ ಯೆಲ್ಲೋ ಅಲರ್ಟ್‌ ಜಾರಿಯಾಗಿದೆ.

ರೆಡ್‌ ಅಲರ್ಟ್‌ ಜಾರಿಯಾದ ಜಿಲ್ಲೆಗಳ ಪೈಕಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಕನ್ನಡ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.

Central Government: ಹೊಸದಾಗಿ ಮದುವೆ ಆಗಿರೋ ಜೋಡಿಗಳಿಗೆ ಗುಡ್ ನ್ಯೂಸ್ – ಕೇಂದ್ರದಿಂದ ನಿಮಗೆ ಸಿಗಲಿದೆ 2.50 ಲಕ್ಷ ರೂ !!