Priyank kharge: ಇಂದು ಸರ್ಕಾರದ ಇ – ಸ್ವತ್ತು ಸಾಫ್ಟ್ ವೇರ್ ಕೆಲಸ ಮಾಡಲ್ಲ, ಯಾಕೆ ಗೊತ್ತಾ ?
Priyank kharge: ಇಂದು ಜು.30 ಇ-ಸ್ವತ್ತು ತಂತ್ರಾಂಶವು ಕಾರ್ಯನಿರ್ವಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಹೇಳಿದ್ದಾರೆ. ಹೌದು, ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆ ಪರಿಚಯಿಸುತ್ತಿರುವ ಹಿನ್ನೆಲೆ ಇ-ಸ್ವತ್ತು ತಂತ್ರಾಂಶವು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಸಾರ್ವಜನಿಕರ ಸಮಸ್ಯೆ ಕಡಿಮೆ ಮಾಡಲು ತಂತ್ರಾಂಶ ಕಾರ್ಯಾರಂಭಿಸಿದ ನಂತರ ಇ-ಸ್ವತ್ತು ತಂತ್ರಾಂಶದ ಕಾರ್ಯಾವಧಿ ಆ.2ರವರೆಗೆ ಪ್ರತಿ ನಿತ್ಯ ಸಂಜೆ 8 ಗಂಟೆಯವರೆಗೂ ಸೇವೆ ಸಲ್ಲಿಸಲು ಕಾಲಾವಧಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಅಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತು ತಂತ್ರಾಂಶದ ಹೊಸ ಅವತರಣಿಕೆಯನ್ನು ಅಭಿವೃದ್ದಿಪಡಿಸಲಾಗಿದ್ದು, ಈ ತಂತ್ರಾಂಶದ ಹೊಸ ಅವತರಣಿಕೆಯನ್ನು ಸಾರ್ವಜನಿಕರ ಸೇವೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಇ-ಸ್ವತ್ತು ತಂತ್ರಾಂಶದ ಬಳಕೆದಾರರಿಗೆ ಸಹಾಯ ಆಗುವಂತೆ ಸಮಗ್ರ ಆವೃತ್ತಿಯೊಂದಿಗೆ ಆರಂಭ ಮಾಡಲಾಗಿರುವ ಈ ತಂತ್ರಾಂಶದ ಮೂಲಕ ಸಾರ್ವಜನಿಕರ ಆಸ್ತಿಯನ್ನು ಗ್ರಾಮ ಠಾಣಾದ ಒಳಗೆ ಆಥವಾ ಹೊರಗೆ ಬರುವ ಬಗ್ಗೆ ಅಳತೆ ಮಾಡಿಸುವ ಪ್ರಕ್ರಿಯೆಯನ್ನು ಗ್ರಾಮ ಪಂಚಾಯತಿಯ ಹಂತದಲ್ಲಿ ದಿಶಾಂಕ್ ಆಪ್ ಮೂಲಕ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.