BPL ಕಾರ್ಡ್ ಹೊಂದಿರುವ ಎಲ್ಲರೂ ಗಮನಿಸಬೇಕಾದ ವಿಚಾರ – ಇಲ್ಲಿದೆ ಸರ್ಕಾರದಿಂದ ಅಘಾತಕಾರಿ ಸುದ್ದಿ !!
BPL Card: ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರಿಗೆ ಇದ್ದಕ್ಕಿದ್ದಂತೆ ದೊಡ್ಡ ಆಘಾತ ನೀಡಲು ಮುಂದಾಗಿದೆ. ಆದರೆ ಸರ್ಕಾರದ ಈ ನಿಯಮ BPL ಕಾರ್ಡ್ ಹೊಂದಿರುವ ಎಲ್ಲರಿಗೂ ಶಾಕ್ ನೀಡಲ್ಲ. ಯಾರು BPL ಕಾರ್ಡ್ ಪಡೆಯಲು ಅರ್ಹರಲ್ಲದಿದ್ದರೂ ಯಾರು ಕಾರ್ಡ್ ಹೊಂದಿದ್ದಾರೋ ಅವರಿಗೆ ಮಾತ್ರ ಅಘಾತ ಕಟ್ಟಿಟ್ಟ ಬುತ್ತಿ.
20 ಲಕ್ಷ BPL ಕಾರ್ಡ್ ರದ್ಧು!!
ಸರ್ಕಾರದ ಆದೇಶದ ಬೆನ್ನಲ್ಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅನರ್ಹ ಫಲಾಭವಿಗಳನ್ನು ಪತ್ತೆ ಹಚ್ಚಲು ತಯಾರಿ ನಡೆಸಿದೆ. ಇದರಲ್ಲಿ ಅನರ್ಹರು ಪತ್ತೆಯಾದರೆ ಅಂದಾಜು 20 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗಬಹುದು ಎಂದು ಹೇಳಲಾಗ್ತಿದೆ
ಯಾರ ಕಾರ್ಡ್ ರದ್ದಾಗಬಹುದು?
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದಲ್ಲಿ, ಆದಾಯ ತೆರಿಗೆ ಪಾವತಿ ಮಾಡಿದ್ದರೆ, ನಿಗದಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನಗರಗಳಲ್ಲಿ 1000 ಚದರಡಿಯ ಪಕ್ಕಾ ಮನೆ ಇದ್ದಲ್ಲಿ, ಪ್ರತಿ ತಿಂಗಳು 150 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದಲ್ಲಿ, ವೈಟ್ ಬೋರ್ಡ್ 4 ಚಕ್ರದ ವಾಹನ ಇದ್ದು ಬಿಪಿಎಲ್ ಕಾರ್ಡ್ ಮಾಡಿಸಿದವರ ಕಾರ್ಡ್ ರದ್ದಾಗಲಿದೆ.
ಅಲ್ಲದೆ ದೊರೆತ ಮಾಹಿತಿ ಪ್ರಕಾರ ಅನರ್ಹ, ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲು ಮುಂದಾಗಿದೆ. ಹೀಗಾಗಿ ಈ ಕಾರ್ಯ ಆದಷ್ಟು ಬೇಗ ಮುಗಿದು ಬಿಪಿಎಲ್ ಕಾರ್ಡ್ ಕಡಿಮೆ ಆಗುತ್ತವೆ ಎನ್ನಲಾಗಿದೆ.