Train Cancelled: ಕರ್ನಾಟಕ ಕರಾವಳಿಗೆ ರೈಲು ರದ್ದು; ಯಾವೆಲ್ಲಾ ಟ್ರೈನ್? ಇಲ್ಲಿದೆ ಕಂಪ್ಲೀಟ್ ವಿವರ
Train Cancelled: ಭಾರೀ ಮಳೆಯ ಕಾರಣ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡಕಮುರಿ- ಕಡಗರಹಳ್ಳಿ ನಿಲ್ದಾಣಗಳ ನಡುವೆ ರೈಲ್ವೆ ಹಳಿಯ ಕೆಳಗೆ ಭೂ ಕುಸಿತವಾಗಿರುವ ಕಾರಣ ಕಾರ್ಯಾಚರಣೆ ನಡೆಯುತ್ತಿದ್ದು, ಹಲವು ರೈಲುಗಳನ್ನು ರದ್ದುಗೊಳಿಸಲಾಗಿರುವ ಕುರಿತು ವರದಿಯಾಗಿದೆ.
ಇದರಲ್ಲಿ ಮುಖ್ಯವಾಗಿ ಕರ್ನಾಟಕ ಕರಾವಳಿ ಭಾಗಕ್ಕೆ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ನೈಋತ್ಯ ರೈಲ್ವೆ ಇಲಾಖೆಯು ಭಾನುವಾರ ಮಧ್ಯಾಹ್ನ ಈ ಮಾಹಿತಿಯ ಕುರಿತು ಪ್ರಕಟಣೆ ಹೊರಡಿಸಿದೆ.
ಯಡಕಮುರಿ-ಕಡಗರಹಳ್ಳಿ ರೈಲು ನಿಲ್ದಾಣಗಳ ನಡುವೆ ಭೂ ಕುಸಿತವಾದ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಪೂರ್ಣಗೊಳ್ಳಲು ಅಂದಾಜು 5 ದಿನಗಳು ಬೇಕು ಎಂದು ಹೇಳಲಾಗಿದೆ.
ರದ್ದಾಗಿರುವ ರೈಲುಗಳ ಪಟ್ಟಿ
* ರೈಲು ನಂಬರ್ 16511. ಕೆಎಸ್‌ಆರ್ ಬೆಂಗಳೂರು- ಕಣ್ಣೂರು. ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 16512. ಕಣ್ಣೂರು-ಕೆಎಸ್‌ಆರ್ ಬೆಂಗಳೂರು, ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.
* ರೈಲು ನಂಬರ್ 16595. ಕೆಎಸ್‌ಆರ್ ಬೆಂಗಳೂರು- ಕಾರವಾರ. ಜುಲೈ 29ರಿಂದ ಆಗಸ್ಟ್ 3ರ ತನಕ ಸ್ಥಗಿತ. ರೈಲು ನಂಬರ್ 16596. ಕಾರವಾರ-ಕೆಎಸ್‌ಆರ್ ಬೆಂಗಳೂರು. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.
* ರೈಲು ನಂಬರ್ 16585. ಎಸ್‌ಎಂವಿಟಿ ಬೆಂಗಳೂರು- ಮುರುಡೇಶ್ವರ, ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 16586. ಮುರುಡೇಶ್ವರ- ಎಸ್‌ಎಂವಿಟಿ ಬೆಂಗಳೂರು. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.
* ರೈಲು ನಂಬರ್ 07377. ವಿಜಯಪುರ-ಮಂಗಳೂರು ಸೆಂಟ್ರಲ್. ಜುಲೈ 29 ರಿಂದ ಆಗಸ್ಟ್ 3ರ ತನಕ ರದ್ದು. ರೈಲು ನಂಬರ್ 07378. ಮಂಗಳೂರು ಸೆಂಟ್ರಲ್- ವಿಜಯಪುರ. ಜುಲೈ 30 ರಿಂದ ಆಗಸ್ಟ್ 4ರ ತನಕ ರದ್ದು.
* ರೈಲು ನಂಬರ್16515. ಯಶವಂತಪುರ-ಕಾರವಾರ. ಜುಲೈ 29, 31 ಮತ್ತು ಆಗಸ್ಟ್ 2ರಂದು ರದ್ದು. ರೈಲು ನಂಬರ್ 16516. ಕಾರವಾರ-ಯಶವಂತಪುರ. ಜುಲೈ 30, ಆಗಸ್ಟ್ 1 ಮತ್ತು 3ರಂದು ರದ್ದು.
* ರೈಲು ನಂಬರ್ 16575. ಯಶವಂತಪುರ- ಮಂಗಳೂರು ಜಂಕ್ಷನ್. ಜುಲೈ 30 ಮತ್ತು ಆಗಸ್ಟ್ 1ರಂದು ರದ್ದು. ರೈಲು ನಂಬರ್ 16576. ಮಂಗಳೂರು ಜಂಕ್ಷನ್-ಯಶವಂತಪುರ. ಜುಲೈ 31 ಮತ್ತು ಆಗಸ್ಟ್ 2ರಂದು ರದ್ದು.
* ರೈಲು ನಂಬರ್ 16539. ಯಶವಂತಪುರ- ಮಂಗಳೂರು ಜಂಕ್ಷನ್. ಆಗಸ್ಟ್ 3ರಂದು ರದ್ದು. ರೈಲು ನಂಬರ್ 16540. ಮಂಗಳೂರು ಜಂಕ್ಷನ್- ಯಶವಂತಪುರ ಆಗಸ್ಟ್ 4ರಂದು ರದ್ದು.
ರೈಲು ಸಂಚಾರ ಪುನಃ ಆರಂಭಿಸಲು ಪ್ರಯತ್ನ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ಆಗಾಗ ಅಪ್‌ಡೇಟ್ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಹೇಳಿದೆ.