Driving License: ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಸಿಹಿ ಸುದ್ದಿ: ಕೇಂದ್ರದಿಂದ ಘೋಷಣೆ
Driving License: ಡ್ರೈವಿಂಗ್ ಲೈಸೆನ್ಸ್ ಹೊಂದಿರುವಿರ ಹಾಗಾದ್ರೆ ವಾಹನ ಸವಾರರಾದ ನಿಮಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಸದ್ಯ ಇತ್ತೀಚೆಗೆ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಮೊದಲೆಲ್ಲ ಡ್ರೈವಿಂಗ್ ಟೆಸ್ಟ್ ಕೊಡುವುದಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿ ಎಂದರೆ ಆರ್‌ಟಿಒ ಕಚೇರಿಗೆ ಅಲೆದಾಡಬೇಕಾಗುತ್ತದೆ. ಆದರೆ ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹರಾಸಾಹಸ ಮಾಡಬೇಕಿಲ್ಲ.
ಹೌದು, ಕೇಂದ್ರ ಸರ್ಕಾರ ಇತ್ತೀಚೆಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳಲ್ಲಿ ಬದಲಾವಣೆ ತಂದಿರುವ ಹೊಸ ನಿಯಮಗಳ ಪ್ರಕಾರ, ಆರ್ಟಿಒ ಕಚೇರಿಗಳಿಗಿಂತ ಖಾಸಗಿ ಏಜೆನ್ಸಿಗಳಿಗೆ ಡ್ರೈವಿಂಗ್ ಪರೀಕ್ಷೆಗಳನ್ನು ನಡೆಸಲು ಮತ್ತು ಡ್ರೈವಿಂಗ್ ಪ್ರಮಾಣಪತ್ರಗಳನ್ನು ನೀಡಲು ಅಧಿಕಾರ ನೀಡಲಾಗಿದೆ.
ಸಂಸ್ಥೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಪರವಾನಗಿ ಲಭ್ಯವಿದೆ. ಇದರಿಂದ ಆರ್‌ಟಿಒ ಕಚೇರಿ ಸುತ್ತಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ರಸ್ತೆ ಸಾರಿಗೆ ಇಲಾಖೆಗಳು ಚಾಲನಾ ಸಂಸ್ಥೆಗಳನ್ನು ಆರಂಭಿಸುತ್ತಿವೆ. ಚಾಲನಾ ಪರವಾನಗಿಗಾಗಿ ಅರ್ಜಿದಾರರು ಮಾನ್ಯತೆ ಪಡೆದ ಡ್ರೈವಿಂಗ್ ಸಂಸ್ಥೆಗಳ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಇನ್ನು ಭಾರತೀಯ ಚಾಲನಾ ಪರವಾನಗಿ ಹೊಂದಿರುವವರು ಕೆಲ ದೇಶಗಳಲ್ಲಿ ಚಾಲನೆ ಮಾಡಲು ಹೆಚ್ಚುವರಿ ಪರವಾನಗಿಯನ್ನು ಪಡೆಯುವ ಅಗತ್ಯವಿಲ್ಲ. ಭಾರತೀಯ ಡ್ರೈವಿಂಗ್ ಲೈಸೆನ್ಸ್ ಮಾನ್ಯತೆ ಪಡೆದ ದೇಶಗಳಲ್ಲಿ ತಮ್ಮ ಪರವಾನಗಿ ಬಳಸಿ ವಾಹನ ಚಾಲನೆ ಮಾಡಬಹುದು. ಅದರಂತೆ ಮಾರಿಷಸ್ ನಲ್ಲಿ ನಾಲ್ಕು ವಾರಗಳವರೆಗೆ ನಮ್ಮ ಚಾಲನಾ ಪರವಾನಗಿ ಮಾನ್ಯತೆ ಹೊಂದಿದೆ. ಈ ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ನೀವು ಇಲ್ಲಿನ ಬೀಚ್‌ಗಳಲ್ಲಿ ಚಾಲನೆ ಮಾಡಬಹುದು. ಜೊತೆಗೆ ಸ್ವೀಡನ್, ಸಿಂಗಾಪುರ, ಸ್ವಿಟ್ಜರ್ಲೆಂಡ್, ಅಮೇರಿಕಾದಲ್ಲೂ ವಾಹನ ಚಲಾಯಿಸಬಹುದು. USA ನಲ್ಲಿ ಫಾರ್ಮ್ 1-94 ಅನ್ನು ಸಲ್ಲಿಸಬೇಕು. ಈ ಮೂಲಕ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ವಿದೇಶದಲ್ಲಿ ಚಾಲನೆ ಮಾಡಲು ಕೇಂದ್ರವು ಅನುಕೂಲ ಕಲ್ಪಿಸಿದೆ. ಸ್ಪೇನ್‌ನಲ್ಲಿಯೂ ಸಹ ಭಾರತೀಯ ಡ್ರೈವಿಂಗ್ ಲೈಸೆನ್ಸ್ಗಳನ್ನು ಸ್ವೀಕರಿಸಲಾಗುತ್ತದೆ.