Home News Sunil Bose: ಹೆಂಡತಿಗೆ ಇಡುವಂತೆ KAS ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸಂಸದ ಸುನೀಲ್...

Sunil Bose: ಹೆಂಡತಿಗೆ ಇಡುವಂತೆ KAS ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸಂಸದ ಸುನೀಲ್ ಬೋಸ್ – ಅಪ್ಪ ಮಹದೇವಪ್ಪ ಸಮರ್ಥಿಸಿದ್ದು ಹೀಗೆ !!

Hindu neighbor gifts plot of land

Hindu neighbour gifts land to Muslim journalist

Sunil Bose: ಕುಂಕುಮ, ತಿಲಕ ಎಂಬುದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ. ಇದಕ್ಕೆ ಅದರದ್ದೇ ಆದ ಮಹತ್ವವಿದೆ. ಅಲ್ಲದೆ ಇದನ್ನು ಹಚ್ಚಲು, ಹಚ್ಚಿಕೊಳ್ಳಲೂ ಕೂಡ ರೀತಿ, ನೀತಿಗಳಿವೆ. ನಾವಾಗೇ ಹೇಗೆ ಹಚ್ಚಿಕೊಳ್ಳಬೇಕು, ಬೇರೆಯವರಿಗೆ ಹೇಗೆ ಹಚ್ಚಬೇಕು ಎಂದೆಲ್ಲಾ ರಿವಾಜುಗಳಿವೆ. ಅಂತೆಯೇ ಹೆಂಡತಿಗೆ ಗಂಡ ಕುಂಕುಮ ಹಚ್ಚುವ ಬಗ್ಗೆಯೂ ನಾವು ಕೇಳಿದ್ದೇವೆ. ಹೇಗೆ ಹಚ್ಚುತ್ತಾರೆಂದು ನಾವು ದೇವಾಲಯ, ಪೂಜೆ-ಪುರಸ್ಕಾರಗಳ ಸಮಯದಲ್ಲಿ ನೋಡಿದ್ದೇವೆ. ಆದರೀಗ ಅಚ್ಚರಿ ಎಂಬಂತೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ(Savita) ಅವರ ಹಣೆಗೆ ಹೆಂಡತಿಗೆ ಕುಂಕುಮ ಇಡುವಂತೆ ಚಾಮರಾಜನಗರ ಸಂಸದ ಸುನೀಲ್‌ ಬೋಸ್(Sunil Bose) ಅವರು ಕುಂಕುಮ ಇಟ್ಟಿದ್ದಾರೆ.

ಹೌದು, ಆಷಾಢ ಮಾಸದ 3ನೇ ಶುಕ್ರವಾರ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ ಹಾಗೂ ಸಂಸದ ಸುನೀಲ್‌ ಬೋಸ್ ಚಾಮುಂಡಿ ಬೆಟ್ಟಕ್ಕೆ(Chamundi Hill) ಜೊತೆಯಾಗಿ ಬಂದಿದ್ದರು. ಈ ವೇಳೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವಾಗ ಬೆಂಬಲಿಗರ ಸಮ್ಮುಖದಲ್ಲೇ ಸವಿತಾ ಅವರ ಹಣೆಗೆ ಹೆಂಡತಿಯನ್ನು ತೋಳಲ್ಲಿ ಬಂದಿಸುವಂತೆ ಬಂಧಿಸಿ ಸಚಿವ ಹೆಚ್​.ಸಿ ಮಹದೇವಪ್ಪ ಅವರ ಮಗ ಸುನೀಲ್ ಬೋಸ್​ ಕುಂಕುಮ ಇಟ್ಟಿದ್ದಾರೆ. ಇದು ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯಸ್, ಸುನೀಲ್‌ ಬೋಸ್ ಹಾಗೂ ಸವಿತಾ ಅವರ ನಡೆ ಸದ್ಯ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾದೆ. ಈ ಸಲದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮಗೆ ಮದುವೆಯಾಗಿಲ್ಲ ಎಂದು ಸುನೀಲ್‌ ಬೋಸ್ ಅಫಿಡೆವಿಟ್ ಸಲ್ಲಿಸಿದ್ದರು. ಆದರಿಲ್ಲಿ ಹೆಂಡತಿಗೆ ಇಟ್ಟಂತೆ ತಿಲಕ ಇಟ್ಟ ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅಪ್ಪ, ಸಚಿವ ಮಹದೇವಪ್ಪ ಹೇಳಿದ್ದೇನು?
ಸಂವಿಧಾನದಲ್ಲಿ ಹಾಗೂ ಹಿಂದೂ ಸಂಪ್ರದಾಯದಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ಯಾವುದೇ ಲಿಂಗಭೇದ ಅಥವಾ ತಾರತಮ್ಯಕ್ಕೆ ಅವಕಾಶವಿಲ್ಲ. ಯಾರು ಯಾರಿಗೆ ಬೇಕಾದ್ರು ಕುಂಕುಮ ಇಡಬಹುದು. ಹೀಗಿರುವಾಗ ನನ್ನ ಪುತ್ರ ಸಂಸದ ಸುನೀಲ್ ಭೋಸ್ ಮಹಿಳಾ ಕೆಎಎಸ್ ಅಧಿಕಾರಿಯ ಹಣೆಗೆ ಕುಂಕುಮ ಇಟ್ಟಿದ್ದರಲ್ಲಿ ತಪ್ಪೇನಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ(H C Mahadevappa) ಹೇಳಿದ್ದಾರೆ.