China: ಇನ್ಮುಂದೆ ನಾಯಿ ಸಾಕೋದಕ್ಕೂ, ಸೈಕಲ್, ಟಿವಿಗೂ ಕಟ್ಟಬೇಕು ಟ್ಯಾಕ್ಸ್ !! ಆದ್ರೆ ಚೀನಾದಲ್ಲಿ ಮಾತ್ರ
China: ಕಾನೂನು, ನಿಯಮ ವಿಚಾರಗಳಾದಿಯಾಗಿ ಎಲ್ಲಾ ವಿಚಾರದಲ್ಲೂ ಪ್ರತಿಯೊಂದು ದೇಶದಲ್ಲೂ ಒಂದೊಂದು ರೂಲ್ಸ್ ಇರುತ್ತದೆ. ಅಂತೆಯೇ ತೆರಿಗೆ ವಿಚಾರವೂ ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಆದರೆ ಸಾಕೋ ನಾಯಿಗೂ, ಕೊಂಡುಕೊಂಡಿರೋ ಸೈಕಲ್, ಟಿವಿಗೂ ಟ್ಯಾಕ್ಸ್ ಕಟ್ಟಬೇಕು ಅನ್ನೋ ವಿಚಾರ ನಿಮಗೆ ಗೊತ್ತಿದೆಯಾ?
ಯಸ್, ನಾಯಿ ಸಾಕೋದಕ್ಕೂ, ಸೈಕಲ್, ಟಿವಿಗೂ ಟ್ಯಾಕ್ಸ್ ಕಟ್ಟಲೇಬೇಕು. ಹಾಗಂತ ಇದನ್ನು ಕೇಳಿದ ಕೂಡಲೇ ಗಾಬರಿಯಾಗಬೇಡಿ, ಯಾಕೆಂದರೆ ಈ ನಿಯಮ ನಮ್ಮ ಭಾರತದಲ್ಲಿಲ್ಲ. ಬದಲಿಗೆ ಚೀನಾ ದೇಶದಲ್ಲಿ. ಚೀನಾ(China)ದಲ್ಲಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆಯು ಬಹುತೇಕ ಭಾರತದಂತೆಯೇ ಇದೆ, ಆದರೆ ಇಲ್ಲಿನ ಅನೇಕ ವಿಚಿತ್ರ ತೆರಿಗೆಗಳು ಜನರಿಗೆ ಅಚ್ಚರಿಯನ್ನುಂಟು ಮಾಡೋದು ಸತ್ಯ.
ಯಸ್, ತೆರಿಗೆಯ ವಿಷಯದಲ್ಲೂ ಇದೇ ಆಗಿದೆ. ಇಲ್ಲಿ ಕೆಲವು ತೆರಿಗೆಗಳು ತುಂಬಾ ವಿಚಿತ್ರವಾಗಿವೆ, ಆ ತೆರಿಗೆ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗೋದು ಖಚಿತ. ಯಾಕಂದ್ರೆ ನೀವು ಅಂದುಕೊಂಡಿರದಂಯತಹ ವಿಷ್ಯಗಳ ಮೇಲೆ ತೆರಿಗೆ ಇದೆ, ಅದನ್ನು ಜನರು ಊಹಿಸಲೂ ಸಾಧ್ಯವಿಲ್ಲ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೀವು ನಾಯಿಯನ್ನು ಸಾಕಲು (tax for pet dog) ಬಯಸಿದರೆ, ಮಾಲೀಕರು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೆ, ಬೈಸಿಕಲ್ಗಳು, ಟಿವಿಗಳು, ಡಿಸ್ಕೋಥೆಕ್ಗಳು ಮತ್ತು ಉಪ್ಪಿನಂತಹ ವಸ್ತುಗಳ ಮೇಲೆ ಸಹ ಸರ್ಕಾರವು ತೆರಿಗೆಗಳನ್ನು ವಿಧಿಸುತ್ತದೆ!!
ಇಷ್ಟೇ ಅಲ್ಲದೆ ಚೀನಾದಂತಹ ದೇಶವು ತೆರಿಗೆಯ ವಿಷಯದಲ್ಲಿ ಸ್ಥಳೀಯರನ್ನು ಮಾತ್ರವಲ್ಲದೆ ವಿದೇಶಿ ಜನರನ್ನು ಸಹ ಬಿಡುವುದಿಲ್ಲ. ಈ ದೇಶವು ಇಲ್ಲಿಗೆ ಬರುವ ವಿದೇಶಿಯರಿಂದ ತೆರಿಗೆಯನ್ನು ಸಂಗ್ರಹಿಸುತ್ತದೆ