Bhopal: ಕತ್ತೆಗಳಿಗೆ ಬಿಸಿಬಿಸಿ ರುಚಿಕರ ಜಾಮೂನು ತಿನ್ನಿಸಿ ಸಂಭ್ರಮಿಸಿದ ಜನತೆ, ಕಾರಣ ಏನು ಗೊತ್ತಾ ?

Bhopal: ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಿದ್ದು ವಿಕಟ ಕವಿ ಯೋಗರಾಜ್ ಭಟ್. ಆದ್ರೆ ಅಲ್ಲೊಂದು ಕಡೆ ಹಗಲಲ್ಲೇ ಕರಡಿಯ ಬದಲಿಗೆ ಕತ್ತೆಗಳಿಗೆ ಜಾಮೂನು ತಿನ್ನಿಸಲಾಗಿದೆ. ಮಧ್ಯಪ್ರದೇಶದಲ್ಲಿ ಜನ ಕತ್ತೆಗಳಿಗೆ ರುಚಿರುಚಿಯಾದ ಜಾಮೂನು ಮಾಡಿ ಬಡಿಸಿದ್ದಾರೆ. ಕತ್ತೆಗಳು ಬಿಸಿಬಿಸಿ ಜಾಮೂನುಗಳನ್ನು ಚಪ್ಪರಿಸಿ ತಿಂದಿವೆ. ಹೌದು, ಮಧ್ಯಪ್ರದೇಶದ ಭೋಪಾಲಿನಲ್ಲಿ ಕತ್ತೆಗಳಿಗೆ ಜಾಮೂನು ಕೊಡಲಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ವರುಣದೇವ ಕೃಪೆ ತೋರಿದ್ದು, ದೇಶಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೆಲವು ಕಡೆ ಇನ್ನೂ ಮಳೆಯಾಗದ ಕಾರಣ ಜನ ದೇವರ ಮೊರೆ ಹೋಗುತ್ತಿದ್ದು, ಅಂತಹ ಒಂದು ಆಚರಣೆಯ ಫಲವಾಗಿ ಕತ್ತೆಗಳಿಗೆ ಜಾಮೂನು ಭಾಗ್ಯ ದೊರಕಿದೆ.

ಮಳೆ ಬರಿಸಲು ಜನರು ಕೈಗೊಳ್ಳುವ ವಿವಿಧ ಆಚರಣೆಗಳಲ್ಲಿ ಕತ್ತೆಗಳಿಗೆ ಮದುವೆ ಮಾಡಿಸುವುದು ಕೂಡ ಒಂದು. ಮಳೆಗಾಲ ಆರಂಭವಾದರೂ ಆಕಾಶದಿಂದ ಭೂಮಿಗೆ ಹನಿ ನೀರು ಕೂಡಾ ಬೀಳದೆ ಇದ್ದಾಗ ಜನರು ಕತ್ತೆಗಳಿಗೆ ಮದುವೆ ಮಾಡಿಸುತ್ತಾರೆ. ಏಕೆಂದರೆ ಕತ್ತೆಗಳಿಗೆ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬುದು ಜನರ ನಂಬಿಕೆ. ಆದರೆ, ಇಲ್ಲೊಂದು ಕಡೆ ಕತ್ತೆಗಳಿಗೆ ಮದುವೆ ಮಾಡಲಾಗಿದೆ. ಆಯಾ ಕತ್ತೆಗಳ ಮದುವೆಯಾದ ಖುಷಿಗೆ ಕತ್ತೆಗಳಿಗೆ ಗುಲಾಬ್ ಜಾಮೂನನ್ನು ತಿನ್ನಿಸಲಾಗುವ ವಿಚಿತ್ರ ಆಚರಣೆ ಜಾರಿಯಲ್ಲಿದೆ.

ಮಧ್ಯಪ್ರದೇಶದ ಭೋಪಾಲ್ ಪಕ್ಕದ ಮಂಡ್‌ಸೌರ್ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆ ಆರಂಭವಾಗದ ಕಾರಣ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಕೆಲ ದಿನಗಳಿಗೆ ಅಲ್ಲಿ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ಇದೊಂದು ವಿಶಿಷ್ಟ ಸಂಪ್ರದಾಯವಾಗಿದ್ದು, ಈ ರೀತಿ ಮಾಡುವುದರಿಂದ ವರುಣ ದೇವನ ಕೃಪೆಗೆ ಪಾತ್ರವಾಗುತ್ತೇವೆ ಎಂಬ ನಂಬಿಕೆ ಜನರಲ್ಲಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕತ್ತೆಗಳಿಗೆ ಸ್ನಾನ ಮಾಡಿಸಿ ನಂತರ ಅವಕ್ಕೆ ಹೂವಿನ ಹಾರಗಳನ್ನು ಹಾಕಿ ಪೂಜೆ ಮಾಡುತ್ತಾರೆ. ಇದಾದ ಬಳಿಕ ಅವುಗಳಿಗೆ ನೈವೇದ್ಯವಾಗಿ ಗುಲಾಬ್ ಜಾಮೂನ್‌ಗಳನ್ನು ತಿನ್ನಿಸುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

Leave A Reply

Your email address will not be published.