Abdul Razzaq: ತಾಯಿಯ ವಿಚಿತ್ರ ಆಸೆ- ಸ್ವಂತ ತಂಗಿಯನ್ನೇ ಮದುವೆಯಾದ ಖ್ಯಾತ ಕ್ರಿಕೆಟಿಗ !!

Abdul Razzaq: ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಹಲವು ವಿಶೇಷತೆಗಳಿಂದ ಮಾತ್ರವಲ್ಲ ಕುತೂಹಲ, ಆಶ್ಚರ್ಯಗಳಿಂದಲೂ ಕೂಡಿರುತ್ತದೆ. ಕೆಲವೊಮ್ಮೆ ಅದು ಊಹೆಗೂ ಮೀರಿರುತ್ತದೆ. ಕೇಳಿದಾಗ ನಾವೂ ದಂಗಾಗಿಬಿಡುತ್ತೇವೆ. ಆದರೂ ಇಂತವನ್ನು ತಿಳಿಯಬೇಕು ಅನ್ನೊ ಹುಚ್ಚು ಕುತೂಹಲ ಇದ್ದೇಇರುತ್ತೆ ಬಿಡಿ. ಇಷ್ಟೆಲ್ಲಾ ಪೀಠಿಕೆ ಹಾಕುವಾಗ ಇದೇ ರೀತಿಯ ವಿಚಾರವನ್ನೇ ನಾವು ಹೇಳಹೊರಟಿರುವುದು ಎಂದು ನಿಮಗಾಗಲೇ ಅರ್ಥವಾಗಿರುತ್ತೆ ಬಿಡಿ.

ಹೌದು, ನಾವು ಈಗ ಇಂತದ್ದೇ ಆಶ್ಚರ್ಯಕರವಾದ ವಿಚಾರವೊಂದನ್ನು ಬಿಚ್ಚಿಡುತ್ತಿದ್ದೇವೆ. ಅದೇನೆಂದರೆ ನಾವಿಲ್ಲಿ ಮಾತನಾಡುತ್ತಿರುವುದು ಪಾಕಿಸ್ತಾನದ ಅತ್ಯುತ್ತಮ ಆಲ್‌ರೌಂಡರ್‌ ಗಳಲ್ಲಿ ಒಬ್ಬರಾಗಿದ್ದ ಅಬ್ದುಲ್ ರಜಾಕ್(Abdul Razzaq) ಬಗ್ಗೆ. ಅದೂ ಕೂಡ ಬಹಳ ಅಚ್ಚರಿ ಎನಿಸುವ ಅವರ ವೈಯಕ್ತಿಕ ಜೀವನದ ಕುರಿತು. ಅಬ್ದುಲ್ ರಜಾಕ್ ಕ್ರಿಕೆಟ್ ಲೋಕದಲ್ಲಿ ಹೇಗೆ ದೊಡ್ಡ ಹೆಸರು ಮಾಡಿದ್ದಾರೋ ಹಾಗೆಯೇ ವೈಯಕ್ತಿಕ ಬದುಕಿನಿಂದಲೂ ಭಾರೀ ಚರ್ಚೆಗೆ ಕಾರಣರಾಗಿದ್ರು.

ಯಸ್, ಯಾಕೆಂದರೆ ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು(Ayesha) ಮದುವೆಯಾಗಿದ್ದಾರೆ. ಮಾತ್ರವಲ್ಲ ಅಬ್ದುಲ್ ರಜಾಕ್ ಮತ್ತು ಆಯೇಷಾ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರ ಕೂಡಾ ಇದೆ. ಅರೆ, ರಜಾಕ್ ಏಕೆ ಹೀಗೆ ಮಾಡಿದರು ಅಂದ್ರೆ ಇದು ಅವರ ತಾಯಿಯ ಆಸೆಯಂತೆ. ಹೌದು, ಅಬ್ದುಲ್ ರಜಾಕ್ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಅವರ ತಾಯಿ 1999 ರ ವಿಶ್ವಕಪ್ ನಂತರ ನಿಧನರಾದ ನಂತರ, ತಾಯಿಯ ಕೊನೆ ಆಸೆ ಈಡೇರಿಸಬೇಕು ಎನ್ನುವ ಕಾರಣಕ್ಕೆ ತನಗಿಂತ ಬಹಳ ಕಿರಿಯವಳಾದ ಆಯೆಷಾ ಜೊತೆ ಮದುವೆಯಾದರಂತೆ!

 

ಅಬ್ದುಲ್ ರಝಾಕ್ ಜೊತೆಗೆ ಅವರ ತಾಯಿ ಮಾಡುವೆ ವಿಚಾರ ಪ್ರಸ್ತಾಪ ಮಾಡಿದಾಗ ಆಯೆಷಾ ಇನ್ನು ಪುಟ್ಟ ಹುಡುಗಿಯಂತೆ. ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದ ಆಯೆಷಾಳನ್ನೇನೀನು ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ. ಈ ಬಗ್ಗೆ ಅಬ್ದುಲ್ ರಜಾಕ್ ನೀಇದ ವಿವರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

1 Comment
  1. SK says

    ಏನ್ ತಲೆ ಸರಿ ಇಲ್ಲದೆ ಬರೀತಿಯೋ. ಸ್ವಂತ ತಂಗಿ ಮತ್ತು, ದೊಡ್ಡಮ್ಮ – ಚಿಕ್ಕಮ್ಮನ ಮಗಳ ಬಗ್ಗೆ ವ್ಯತ್ಯಾಸ ಗೊತ್ತಿಲ್ಲದ ಗುಗ್ಗು ಇರಬೇಕು ಬರೆದವನು…

Leave A Reply

Your email address will not be published.