Bengaluru: ಮೂಗರ ಭಾಷೆ ಡಬ್ಬಿಂಗ್ ಪ್ರಕರಣ: ರೇಡಿಯೊ ಜಾಕಿ ಸೇರಿದಂತೆ ಇಬ್ಬರು ಅರೆಸ್ಟ್!
Bengaluru: ಮಾತುಪ್ರಚಾರದ ಗೀಳಿಗೆ ಬಿದ್ದು ಅವರಿಗೆ ಆಗದ ಶತ್ರುಗಳಿಗೆ ಮೂಕ ಸನ್ನೆಯ ಮೂಲಕ ಅವಮಾನ ಮಾಡಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು (Cyber Police) ಬಂಧಿಸಿದ್ದಾರೆ.
ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಆರೋಪಿಗಳೆಂದು ಗುರುತಿಸಲಾಗಿದೆ. ಈ ಆರೋಪಿಗಳು ಕಿವುಡ ಮತ್ತು ಮೂಗರ ಭಾಷೆಯನ್ನು ಅಶ್ಲೀಲ ಮೂಕ ಸನ್ನೆ ಮೂಲಕ ಅವಮಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ಮೂಕರಿಗೆ ಅವಮಾನ ಮಾಡಿದಂತೆ ಮತ್ತು ಯುವ ರಾಜಕಾರಣಿಗಳ ಮಾನವೀಯತೆಯ ಪ್ರಶ್ನೆಯಾಗಿದೆ.
ಆರೋಪಿ ಶರವಣ ಯಾವ ಕೆಲಸ ಮಾಡದೇ ಮನೆಯಲ್ಲೇ ಇದ್ದ. ಇನ್ನೊಬ್ಬ ಆರೋಪಿ ರೋಹನ್ ಕಾರಿಯಪ್ಪ ರೇಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದ. ಯುವ ರಾಜಕಾರಣಿಗಳ ಮೇಲೆ ಸೇಡು ತೀರಿಸುವ ಭರದಲ್ಲಿ ಮಾತು ಬಾರದ ಮೂಗರು ಬಳಸುವ ಸನ್ನೆಯನ್ನು ನಕಲಿ ಮಾಡುತ್ತ ಅಶ್ಲೀಲವಾಗಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ದರು.
ರೋಹನ್ ಎಂಬಾತ ಹಿಂದಿಯಲ್ಲಿ ರಾಜಕೀಯದ ಬಗ್ಗೆ ರೇಡಿಯೋದಲ್ಲಿ ಮಾತನಾಡಿದ್ರೆ, ಆರೋಪಿ ಶರವಣ ಅದನ್ನು ಮೂಕ ಸನ್ನೆಯಲ್ಲಿ ಅವಹೇಳನ ಮಾಡಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದನು. ಆರೋಪಿ ಶರವಣ ಮೂಕ ಸನ್ನೆಯನ್ನು ಕಲಿತಿದ್ದನು. ಬೆಂಗಳೂರಲ್ಲಿ ತಾನು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಮುಕರು ಬಳಸುವ ಸನ್ನೆಯನ್ನು ಬಳಸಿ ಕೆಟ್ಟದಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿರೋದು ತಪ್ಪು ಎಂದು ಗೊತ್ತಿದ್ದು ಸಹ ವೀಡಿಯೋ ಮಾಡಿದ್ದ ಎಂದು ಸೈಬರ್ ಪೊಲೀಸರಿಂದ ತಿಳಿದು ಬಂದಿದೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಸಂಘಟಗಳು ದೆಹಲಿಯಲ್ಲಿ ದೂರು ದಾಖಲಿಸಿದ್ದವು. ಬಳಿಕ ಬೆಂಗಳೂರಿನವರು (Bengaluru) ಎಂದು ಗೊತ್ತಾಗಿ ಕಮಿಷನರ್‌ಗೆ ದೂರು ನೀಡಲಾಗಿತ್ತು. ನಂತರ ಈ ಬಗ್ಗೆ ಸಿಸಿಬಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ತೀವ್ರವಾಗಿ ವಿರೋಧ ವ್ಯಕ್ತವಾಗುತ್ತಿದ್ದಂತೆ ವೀಡಿಯೋ ಡಿಲೀಟ್ ಮಾಡಿದ್ದ ಆರೋಪಿಗಳು, ಮತ್ತೊಮ್ಮೆ ಅಪಾಲಜಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು ಎಂದು ಸೈಬರ್ ಪೊಲೀಸರ ತನಿಖೆಯ ಮೂಲಕ ತಿಳಿದು ಬಂದಿದೆ.