Home News Crime: ಲೈಂಗಿಕ ಚಟುವಟಿಕೆಗೆ ಮಾಸ್ಟರ್ ಪ್ಲಾನ್: ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 12 ವರ್ಷ ಜೈಲುವಾಸ!

Crime: ಲೈಂಗಿಕ ಚಟುವಟಿಕೆಗೆ ಮಾಸ್ಟರ್ ಪ್ಲಾನ್: ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 12 ವರ್ಷ ಜೈಲುವಾಸ!

Hindu neighbor gifts plot of land

Hindu neighbour gifts land to Muslim journalist

Crime: ಅಮೆರಿಕದಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ನೆಲೆಸಿದ್ದ ಉಪೇಂದ್ರ ಆಡೂರು (32) ಎಂಬಾತ ಈ ಪ್ರಕರಣದ ಆರೋಪಿ ಎಂದು ಪೊಲೀಸರ ತನಿಖೆಯ ಮೂಲಕ ಪತ್ತೆಯಾಗಿದ್ದಾನೆ.

ಉಪೇಂದ್ರ ಎಂಬಾತ ಅಡೂರು ಸೊಶಿಯಲ್ ಮೀಡಿಯಾಗಳ ಮೂಲಕ ನಿಷೇಧಿತ ಚಟುವಟಿಕೆಗಳನ್ನು ನಡೆಸುತ್ತಿದ್ದನು ಎಂಬ ಶಂಕೆಯ ಮೇಲೆ ಪತ್ತೆದಾರಿ ಪೊಲೀಸರು 2022ರ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಉಪೇಂದ್ರ ಮೇಲೆ ಒಂದು ಕಣ್ಣಿಟ್ಟಿದ್ದರು. ಆದರೆ ಈತನ ಪೋಲಿಯಾಟ ಕಡಿಮೆಯಾಗಿರಲಿಲ್ಲ. ಇದನ್ನು ಕಂಡ ಪೊಲೀಸರು ಒಂದು ನಕಲಿ ಖಾತೆ ತೆಗೆದು ಉಪೇಂದ್ರ ಅಡೂರುನಿಗೆ ಬಾಲಕಿಯರ ರೀತಿ ಮೆಸೇಜ್ ಮಾಡಿ ಇವನ ನೈಜ ಮುಖ ಕಂಡು ಹಿಡಿದು ಪೊಲೀಸರು ಇವನನ್ನು ಸೆರೆಹಿಡಿದ್ದಿದ್ದಾರೆ.

ಈತನು ಬಾಲಕಿಯರಿನ್ನೇ ಟಾರ್ಗೆಟ್ ಮಾಡುತ್ತ ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ (Crime) ಭಾಗಿಯಾಗಿಸಲು ಪ್ರೇರಿಪಿಸುತ್ತಾ ಪ್ರಯತ್ನ ಮಾಡುತ್ತಿದ್ದನು. ಈಗ ಈತನ ಆರೋಪ ಸಾಬೀತಾಗಿದ್ದರಿಂದ ವಿದ್ಯಾರ್ಥಿಯೊಬ್ಬನಿಗೆ ಅಮೆರಿಕದ ಫೆಡರಲ್ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪೊಲೀಸರ ತನಿಖೆಯ ಮೂಲಕ ಈತ ಭಾರತೀಯ ಮೂಲದ ವ್ಯಕ್ತಿ ಎಂದು ತಿಳಿದುಬಂದಿದೆ.

ಉಪೇಂದ್ರ ಅಡೂರು ಬಾಲಕಿಯರನ್ನು ಗುರಿಯಾಗಿಸಿ ಅವರನ್ನು ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕಿರುಕುಳ ನೀಡುತ್ತಿದ್ದನು. ಹಾಗೂ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪದೇ ಪದೇ ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಿದ್ದನೆಂದು ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ಆತನ ಮೊಬೈಲ್ ವಶಪಡಿಸಿಕೊಂಡು ತನಿಖೆಯ ಆರಂಭಿಸಿದ್ದರು ಎಂದು ಫೆಡರಲ್ ನ್ಯಾಯಾಲಯದ ಅಟಾರ್ನಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.