Soldiers’ Food: ಯುದ್ಧ ಸಮಯದಲ್ಲಿ ಯೋಧರ ಆಹಾರ ಕ್ರಮ ಹೇಗಿರುತ್ತೆ? ಏನೆಲ್ಲಾ ಸೇವಿಸುತ್ತಾರೆ ನಮ್ಮ ರಕ್ಷಕರು ?
Soldiers’ Food: ನಾವಿಲ್ಲಿ ಇಷ್ಟು ಸುರಕ್ಷಿತವಾಗಿದ್ದೇವೆಂದರೆ, ಮಳೆ, ಚಳಿ ಇದ್ದರೂ ಬೆಚ್ಚಗೆ ಮನೆಯಲ್ಲಿ ಕೂತಿದ್ದೇವೆ ಅಂದರೆ ಅದಕ್ಕೆ ನಮ್ಮ ಯೋಧರು ಕಾರಣ. ಕೊರೆಯುವ ಚಳಿಯಲ್ಲೂ, ಸುಡುವ ಬಿಸಿಲಲ್ಲೂ ಅವರು ನಮಗಾಗಿ ಹೋರಾಡುತ್ತಾರೆ. ಇಷ್ಟೆಲ್ಲಾ ಸಾಹಸಮಯವಾಗಿರೋ ಅವರ ಆಹಾರ ಕ್ರಮ ಹೇಗಿರುತ್ತೆ(Soldiers’ Food) ಗೊತ್ತಾ? ಅಲ್ಲದೆ ಯುದ್ಧದ ಸಮಯದಲ್ಲಿ ಅವರು ಏನೆಲ್ಲಾ ತಿನ್ನುತ್ತಾರೆ? ಯಾವ ರೀತಿಯ ಆಹಾರ ಸೇವನೆ ಮಾಡಬಹುದು? ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡಿರಬಹುದು ಎಂದು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.
ನಿವೃತ್ತ ಸೇನಾಧಿಕಾರಿ ಪರಮೇಶ್ವರ್ ಎನ್. ಹೆಗಡೆ(Parameshwar N Hegde) ಅವರು ಈ ಬಗ್ಗೆ ಮಾತನಾಡಿದ್ದು, ಯೋಧರ ಆಹಾರ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಅಗತ್ಯ ಖಾದ್ಯ ಮತ್ತು ಪೌಷ್ಟಿಕಾಂಶ ಸೇರಿಸಲಾಗುತ್ತದೆ. ಜೊತೆಗೆ ಅವರಿಗೆ ಬೇಕಾದ ಆಯ್ಕೆಗಳನ್ನು ಕೂಡ ನೀಡಲಾಗುತ್ತದೆ. ಅಂದರೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಆಹಾರವಿರುತ್ತದೆ. ಪ್ರತಿದಿನವೂ ಒಂದೊಂದು ರೀತಿಯ ಆಹಾರವಿರುತ್ತದೆ, ಇಲ್ಲಿ ಆಯ್ಕೆ ನಮ್ಮದಾಗಿರುತ್ತದೆ. ಅಲ್ಲಿ ಕೊಡುವ ಆಹಾರ ಆರೋಗ್ಯಕ್ಕೆ ಪೂರಕವಾಗಿರುತ್ತದೆ ಹಾಗಾಗಿ ಒಳ್ಳೆಯ ರೀತಿಯಲ್ಲಿ ಆಹಾರ ಸೇವನೆ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ” ಎಂದು ಹೇಳಿದ್ದಾರೆ.
PM Modi: ಮೋದಿಯಿಂದ ಇಂದು ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ!
ಸಾಮಾನ್ಯ ದಿನಗಳಲ್ಲಿ ಆಹಾರ ಕ್ರಮ ಹೇಗಿರುತ್ತದೆ?
“ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ಇದ್ದೇ ಇರುತ್ತದೆ. ಇವು ದೈಹಿಕ ಶಕ್ತಿ ನೀಡುತ್ತವೆ. ಅಲ್ಲದೆ ಪ್ರತಿದಿನವೂ ಯೋಧರಿಗೆ ಸಮತೋಲಿತ ಆಹಾರ ನೀಡಲಾಗುತ್ತದೆ. ಪನೀರ್, ಕೋಳಿ ಮತ್ತು ಮೀನು ಹೀಗೆ ಪ್ರೋಟೀನ್, ಕ್ಯಾಲ್ಸಿಯಂ ಇರುವ ಆಹಾರಗಳನ್ನು ಕೂಡ ನೀಡಲಾಗುತ್ತದೆ. ಇದೆಲ್ಲದರ ಜೊತೆಗೆ ಋತುಮಾನದ ಹಣ್ಣು ಮತ್ತು ತರಕಾರಿಯನ್ನು ನೀಡಲಾಗುತ್ತದೆ. ಕಾಲೋಚಿತ ಪದಾರ್ಥಗಳು ಆರೋಗ್ಯಕ್ಕೆ ಅಗತ್ಯ ಪೋಷಣೆ ನೀಡುತ್ತವೆ. ಇವೆಲ್ಲವೂ ಕೆಮ್ಮು ಮತ್ತು ಶೀತ, ಜ್ವರದಂತಹ ಸಮಸ್ಯೆ ಕಡಿಮೆ ಮಾಡುತ್ತವೆ.
ಯುದ್ಧದ ಸಮಯದಲ್ಲಿ ಆಹಾರ ಹೇಗಿರುತ್ತದೆ?
“ಈ ಸಮಯದಲ್ಲಿ ಆದಷ್ಟು ಪೌಷ್ಟಿಕಾಂಶ ಭರಿತ ಆಹಾರಗಳನ್ನು ನೀಡಲಾಗುತ್ತದೆ. ಒಂದು ದಿನಕ್ಕೆ ಬೇಕಾಗುವಂತಹ ಆಹಾರಗಳನ್ನು ಕೊಡಲಾಗುತ್ತದೆ ಅದರಲ್ಲಿಯೂ ಡ್ರೈ ಫ್ರೂಟ್ಸ್ ಮತ್ತು ಕಡಲೆಕಾಯಿ, ನೆಲ್ಲಿ ಹೀಗೆ ಬೇರೆ ಬೇರೆ ರೀತಿಯ ಧಾನ್ಯಗಳನ್ನು ಸೇರಿಸಿ ಪೌಷ್ಟಿಕಾಂಶ ಯುಕ್ತವಾದ ಲಾಡು ಅಥವಾ ಚಾಕಲೇಟ್ ಮಾದರಿಯ ಆಹಾರಗಳನ್ನು ತಯಾರಿಸಿ ಕೊಡಲಾಗುತ್ತದೆ. ಇದನ್ನು ಯುದ್ಧದ ಸಮಯದಲ್ಲಿ ಯೋಧರಿಗೆ ನೀಡಲಾಗುತ್ತದೆ. ಇದರಲ್ಲಿ ಎಲ್ಲಾ ರೀತಿಯ ಶಕ್ತಿ ವರ್ಧಕ ಪದಾರ್ಥಗಳಿರುವುದರಿಂದ, ಬೇಗ ಹಸಿವಾಗುವುದಿಲ್ಲ ಜೊತೆಗೆ ಊಟ, ತಿಂಡಿಗೆ ತುಂಬಾ ಸಮಯ ಇಲ್ಲದಿರುವಾಗ ಇದು ತುಂಬಾ ಉಪಯೋಗವಾಗುತ್ತದೆ. ಅಲ್ಲದೆ ಇವುಗಳ ಜೊತೆಗೆ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಆಹಾರವಿರುತ್ತದೆ” ಎಂದಿದ್ದಾರೆ.