Shirur: ಶಿರೂರುನಲ್ಲಿ ಗುಡ್ಡ ಕುಸಿತ, ಇದರ ಬೆನ್ನಲ್ಲೇ ಕಾಣೆಯಾಗಿದ್ದ ತಮಿಳುನಾಡಿನ ಲಾರಿ ಚಾಲಕನ ಅರ್ಧ ಮೃತ ದೇಹ ಪತ್ತೆ!
Shirur: ಶಿರೂರು (Shirur)ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ತಮಿಳುನಾಡು ಮೂಲದ ವ್ಯಕ್ತಿ ಲಾರಿ ಚಾಲಕ ಶರವಣನ್ ಎಂಬಾತ ನಾಪತ್ತೆಯಾಗಿದ್ದನು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಲಾರಿ ಚಾಲಕ ಶರಣವನ್ ಮೃತದೇಹ ಪತ್ತೆಯಾಗಿದ್ದು ಡಿಎನ್ಎ ವರದಿಯ ಬಳಿಕ ಶರವಣನ್ ಮೃತದೇಹ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು.ಅಬ್ಬಾಬ್ಬಾ ಎಂತಹ ಬುಕುಸಿತ.ಈ ಮೃತ ದೇಹ ಈಗ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತ ದೇಹ ಎಂದು ಉತ್ತರ ಕನ್ನಡ ಎಸ್ಪಿ ನಾರಾಯಣ್ ದೃಢ ಪಡಿಸಿದ್ದಾರೆ.
ರಾಷ್ಟೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾದ ಪಕ್ಕದಲ್ಲಿಯೇ ಟ್ಯಾಂಕರ್ ಇತ್ತು.ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರೆಂದು ಈಗ ತಿಳಿದುಬಂದಿದೆ.ಈ ಬಗ್ಗೆ ಮಾಹಿತಿ ಸಿಗುತ್ತಾ ಲಾರಿ ಚಾಲಕ ಶರವಣನ್ ನಾಪತ್ತೆ ಆಗಿದ್ದಾರೆ ಎಂದು ಶರವಣನ್ ಮಾವ ಸೆಂದೀಲ್ ಎಂಬುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆ ಮಾಡಿದ್ದಾರೆ.