Vartur Santosh: ವಯಸ್ಸಾದ ಹಸುಗಳನ್ನು ಕಸಾಯಿಖಾನೆಗೆ ಕಳಿಸ್ತಾರಾ ವರ್ತೂರ್ ಸಂತೋಷ್ ?! ಏನಿದು ಶಾಕಿಂಗ್ ಆರೋಪ ?

Share the Article

Vartur Santosh: ಬಿಗ್ ಬಾಸ್(Bigg Boss) ಖ್ಯಾತಿಯ ಹಳ್ಳೀಕಾರ್ ಒಡೆಯ ವರ್ತೂರ್ ಸಂತೋಷ್ ಅವರು ಇತ್ತೀಚೆಗೆ ಯಾಕೋ ಬರೀ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಅಂತೆಯೇ ಇದೀಗ ಅವರ ಮೇಲೆ ಗಂಭೀರವಾದ ಆರೋಪವೊಂದು ಕೇಳಿಬಂದಿದೆ.

ಹೌದು, ವರ್ತೂರ್ ಸಂತೋಷ್(Vartur Santosh) ಗೆ ಹಳ್ಳಿಕಾರ್ ಒಡೆಯ ಎಂದು ಹೆಸರು ಬರಲು ಕಾರಣ ನಾನೆ ಎಂದು ಹೇಳಿರುವ ವೀರೇಶ್ ಹೊಸಕೋಟೆಯವರು (Veeresh Hoskote) ಸಂತೋಷ್ ಮೇಲೆ ಗಂಭೀರವಾದ ಆರೋಪ ಮಾಡಿದ್ದು ‘ವರ್ತೂರು ಸಂತೋಷ್ ವಯಸ್ಸಾದ ಹಸುಗಳನ್ನು ಕೂಯಿಸಲು ಕಳುಹಿಸುತ್ತಾನೆ, ಇದರಿಂದ ನನಗೆ ನಿದ್ದೆಯೇ ಬರದಂತಾಗಿದೆ’ ಎಂದು ಹೇಳಿದ್ದಾರೆ.

ಅಲ್ಲದೆ ತಲೆ ಇಲ್ಲದ ಜನರು ಅವನ ಬಳಿ ಹೋಗುತ್ತಿದ್ದಾರೆ ಆತ ಚೆನ್ನಾಗಿ ಟೋಕನ್ ಹೊಡೆಯುತ್ತಿದ್ದಾನೆ. ರೈತರಿಗೆ ದೊಡ್ಡ ಮೋಸ ಮಾಡುತ್ತಿದ್ದಾನೆ ಚೀಲದಲ್ಲಿ ಹಣ ಇಟ್ಟುಕೊಂಡು ಹೋಗುತ್ತಿದ್ದಾನೆ. ನಾವು ಎಷ್ಟೇ ಫೋನ್ ಮಾಡಿದರೂ ಅವರು ಫೋನ್ ತೆಗೆಯುತ್ತಿಲ್ಲ, ನಾನು ವರ್ತೂರ್ ಸಂತೋಷ್ ವಿರುದ್ಧ ಆರೋಪ ಮಾಡಿದ್ದು ಸತ್ಯ. ಹಾಗಿದ್ದ ಮೇಲೆ ಆತ ಕರೆ ಮಾಡಿ ನನ್ನನ್ನು ಕೇಳಬೇಕಿತ್ತು. ಒಂದು ಕಡೆ ಮಾತನಾಡಿದರೆ ಮತ್ತೊಂದು ಕಡೆ ಮಾತನಾಡುವುದಿಲ್ಲ ಆತ ಪಕ್ಕಾ ಜಾತಿವಾದಿ’ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ವರ್ತೂರ್ ಸಂತೋಷ್ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದಾನೆ ಎಂದು ಅವರ ಮಾವ ಹೇಳುತ್ತಿದ್ದಾರೆ ಹೀಗಾಗಿ ತಕ್ಷಣವೇ ಆತನನ್ನು ಅರೆಸ್ಟ್‌ ಮಾಡಿ ತನಿಖೆ ಮಾಡಬೇಕು. ಆತನ ರಕ್ತ ಟೆಸ್ಟ್‌ ಮಾಡಬೇಕು ಡ್ರಗ್ಸ್‌ ಬಗ್ಗೆ ತಿಳಿದು ಬರುತ್ತದೆ ಎಂದು ಹೇಳಿದ್ದಾರೆ.

Renukaswamy Murder Case: ಡಿಸಿಎಂ ಡಿಕೆಶಿಯನ್ನು ಭೇಟಿಯಾದ ದರ್ಶನ್‌ ಪತ್ನಿ; ಯಾಕೆ? ಇಲ್ಲಿದೆ ಕಾರಣ

Leave A Reply