Govt Employees – RSS: ‘ಸರ್ಕಾರಿ ನೌಕರರು RSSಗೆ ಸೇರುವಂತಿಲ್ಲ’ ಎಂಬ ನಿಯಮವನ್ನ ರದ್ದು ಮಾಡಿದ ಮೋದಿ ಸರ್ಕಾರ! RSS ಭರ್ಜರಿ ಸ್ವಾಗತ
Govt Employees – RSS: ಮೋದಿ ಸರ್ಕಾರದಲ್ಲಿ RSS ಮತ್ತು ಸರ್ಕಾರಿ ನೌಕರರ (Govt Employees – RSS) ನಡುವಿನ ನಂಟಿನ ಬಗ್ಗೆ ಮಹತ್ವ ನಿರ್ಧಾರ ಒಂದನ್ನು ಕೈಗೊಳ್ಳಲಾಗಿದೆ. ಹೌದು, 1966 ರಲ್ಲಿ ಕಾಂಗ್ರೆಸ್ ಸರ್ಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು (Govt Employees) ಭಾಗವಹಿಸುವುದನ್ನು ನಿಷೇಧಿಸಿತು. ಅದನ್ನು ಪಾಲಿಸದ ಸರ್ಕಾರಿ ನೌಕರರಿಗೆ ಕಠಿಣ ಶಿಕ್ಷೆ ನೀಡುವ ನಿಬಂಧನೆ ಇತ್ತು. ಇದೀಗ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆಗಳಲ್ಲಿ ಭಾಗವಹಿಸುವ ನಿಷೇಧವನ್ನು ಈಗ ತೆಗೆದುಹಾಕಲಾಗಿದೆ. ಈ ಸಂಬಂಧ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಇದನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಾಗತಿಸಿದೆ.
ಇದೀಗ ಕಾಂಗ್ರೆಸ್ ನಾಯಕರು ಅಧಿಕೃತ ಆದೇಶದ ಪ್ರತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಆದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು 58 ವರ್ಷಗಳ ಹಿಂದೆ ನೀಡಲಾದ ‘ಅಸಂವಿಧಾನಿಕ’ ಸೂಚನೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಿಂಪಡೆದಿದೆ ಎಂದು ಹೇಳಿದ್ದಾರೆ.
Relationship: ಪ್ರೇಮಿಯೊಂದಿಗೆ ತಪ್ಪಿಯೂ ಈ ರೀತಿ ನಡೆದುಕೊಳ್ಳದಿರಿ; ಬ್ರೇಕ್ಅಪ್ ಆದೀತು!
ಆದೇಶದ ಪ್ರತಿಯನ್ನು ಹಂಚಿಕೊಳ್ಳುವಾಗ, ಅಮಿತ್ ಮಾಳವಿಯಾ ಅವರು , ‘58 ವರ್ಷಗಳ ಹಿಂದೆ ಅಂದರೆ 1966 ರಲ್ಲಿ ಸರ್ಕಾರಿ ನೌಕರರು RSS ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ವಿಧಿಸಿದ್ದ ನಿಷೇಧವನ್ನು ಮೋದಿ ಸರ್ಕಾರ ತೆಗೆದುಹಾಕಿದೆ. ಈ ಆದೇಶ ಆರಂಭದಲ್ಲೇ ಜಾರಿಯಾಗಬಾರದಿತ್ತು. ಇನ್ನು 1966ರ ನವೆಂಬರ್ 7ರಂದು ಸಂಸತ್ತಿನಲ್ಲಿ ಗೋಹತ್ಯೆ ವಿರುದ್ಧ ಭಾರಿ ಪ್ರತಿಭಟನೆ ನಡೆದ ಕಾರಣ ಈ ನಿಷೇಧ ಹೇರಲಾಗಿದೆ ಎಂದು ಆರೋಪಿಸಿದರು. ಯಾಕೆಂದರೆ ಆ ಸಮಯ ಆರೆಸ್ಸೆಸ್-ಜನಸಂಘ ಲಕ್ಷಗಟ್ಟಲೆ ಬೆಂಬಲವನ್ನು ಸಂಗ್ರಹಿಸಿತ್ತು. ಆದ್ದರಿಂದ 1966ರ ನವೆಂಬರ್ 30ರಂದು ಆರ್‌ಎಸ್‌ಎಸ್-ಜನಸಂಘದ ಪ್ರಭಾವಕ್ಕೆ ಹೆದರಿ ಇಂದಿರಾಗಾಂಧಿಯವರು ಸರ್ಕಾರಿ ನೌಕರರು ಆರೆಸ್ಸೆಸ್‌ಗೆ ಸೇರುವುದನ್ನು ನಿಷೇಧಿಸಿದ್ದರು. ಅವತ್ತು ಅದು ಸರಿಯಾದ ನಿರ್ಧಾರವೂ ಆಗಿತ್ತು. 1966ರಲ್ಲಿ ನಿಷೇಧ ಹೇರಲು ಹೊರಡಿಸಿದ ಅಧಿಕೃತ ಆದೇಶ ಇದಾಗಿದೆ ಎಂದಿದ್ದಾರೆ.
1966, 1970 ಮತ್ತು 1980 ರಲ್ಲಿ ಆಗಿನ ಸರ್ಕಾರಗಳು ಹೊರಡಿಸಿದ ಆದೇಶಗಳನ್ನು ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿದೆ, ಇದರಲ್ಲಿ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಶಾಖೆಗಳು ಮತ್ತು ಅದರ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮಗಳಿಗೆ ಬರದಂತೆ ನಿರ್ಬಂಧ ಹೇರಿದ್ದವು ಎಂದು ಆರೋಪಿಸಲಾಗಿದೆ.
ಈ ಮಧ್ಯೆ, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಈ ಆದೇಶವನ್ನು ರದ್ದುಗೊಳಿಸಿದ್ದವು, ಆದರೆ ನಂತರವೂ ಇದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾನ್ಯವಾಗಿದೆ. ಈ ವಿಚಾರವಾಗಿ ಇಂದೋರ್ ನ್ಯಾಯಾಲಯದಲ್ಲಿ ಪ್ರಕರಣವೊಂದು ನಡೆಯುತ್ತಿದ್ದು, ಈ ಕುರಿತು ನ್ಯಾಯಾಲಯ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ನಿರ್ಬಂಧಗಳನ್ನು ಅಂತ್ಯಗೊಳಿಸಿದೆ.
The unconstitutional order issued 58 years ago, in 1966, imposing a ban on Govt employees taking part in the activities of the Rashtriya Swayamsevak Sangh has been withdrawn by the Modi Govt. The original order shouldn’t have been passed in the first place.
The ban was imposed… pic.twitter.com/Gz0Yfmftrp
— Amit Malviya (@amitmalviya) July 22, 2024