Home Entertainment Darshan Thoogudeepa: ಸೇಫ್ ಝೋನ್ ಪ್ಲಾನ್: ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ಕೊಡಲು ಮುಂದಾದ ದರ್ಶನ್! ಎಷ್ಟು...

Darshan Thoogudeepa: ಸೇಫ್ ಝೋನ್ ಪ್ಲಾನ್: ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ಕೊಡಲು ಮುಂದಾದ ದರ್ಶನ್! ಎಷ್ಟು ಕೋಟಿ ಪರಿಹಾರ ಗೊತ್ತಾ?

Darshan Thoogudeepa

Hindu neighbor gifts plot of land

Hindu neighbour gifts land to Muslim journalist

Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿ ತಿಂಗಳು ಕಳೆದವು. ಹೀಗಿದ್ದಾಗ ದರ್ಶನ್ ತೂಗುದೀಪ್ ಮತ್ತು ಅವರ ಕುಟುಂಬ ಸದಸ್ಯರು ಈ ಪ್ರಕರಣವನ್ನ ಸೈಲೆಂಟ್ ಮಾಡಲು, ಶಿಕ್ಷೆ ಆಗದಂತೆ ಸೇಫ್ ಝೋನ್ ಕಾಪಾಡಲು ಹಲವು ಪ್ರಯತ್ನ ನಡೆಯುತ್ತಿದೆ. ಅಂತೆಯೇ ದರ್ಶನ್ ತೂಗುದೀಪ್ (Darshan Thoogudeepa) ಇದೀಗ, ಕೊಲೆ ಆದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಕೋಟಿ ರೂಪಾಯಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಆಗಿದೆ.

ಹೌದು, ದರ್ಶನ್ ತೂಗುದೀಪ್ ವಿರುದ್ಧ ಕೇಳಿಬಂದಿರುವುದು ಒಂದು ದೊಡ್ಡ ಆರೋಪ. ಅವರು ಇಷ್ಟು ದಿನ ಉಳಿಸಿಕೊಂಡು ಬಂದ ಹೆಸರು, ಆಸ್ತಿ, ಗೌರವ ಯಾವುದಕ್ಕೂ ಕಾನೂನು ರಾಜಿ ಆಗಲ್ಲ. ಹಾಗಿರುವಾಗ ದರ್ಶನ್ ತೂಗುದೀಪ್ ಕನಿಷ್ಠ ಕನಿಷ್ಠ ಅಂದ್ರು 6 ತಿಂಗಳು ಜೈಲಿನಿಂದ ಹೊರಗೆ ಬರಲು ಆಗಲ್ಲ ಎಂಬ ಮಾತು ಕಾನೂನು ತಜ್ಞರಿಂದ ಕೇಳಿಬರುತ್ತಿದೆ. ಇಂತಹ ಸ್ಥಿತಿಯಲ್ಲಿ ದರ್ಶನ್ ಮತ್ತು ಕುಟುಂಬ ಸದಸ್ಯರು ಕೊಲೆಯಾದ ರೇಣುಕಾ ಸ್ವಾಮಿಯ ಹೆಂಡತಿ ಮತ್ತು ತಂದೆ-ತಾಯಿ ಭೇಟಿ ಮಾಡಲು ನಿರ್ಧಾರ ಮಾಡಿದ್ದಾರಂತೆ.

ಹೌದು, ದರ್ಶನ್ & ಗ್ಯಾಂಗ್ ಮೂಲಕ ಕೊಲೆ ಆಗಿದ್ದಾರೆ ಎನ್ನಲಾಗಿರುವ ರೇಣುಕಾಸ್ವಾಮಿ ಕುಟುಂಬ ಬಡತನದಲ್ಲಿ ಇದ್ದು ಪರದಾಡುತ್ತಿದ್ದಾರೆ. ಹೀಗಾಗಿ ಅವರ ಕುಟುಂಬಕ್ಕೆ ಸಹಾಯ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಮತ್ತು ಫ್ಯಾಮಿಲಿ ಸೇರಿಕೊಂಡು ರೇಣುಕಾಸ್ವಾಮಿ ಕುಟುಂಬಕ್ಕೆ ಪರಿಹಾರ ನೀಡಲು ಚಿಂತನೆ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ. ಸುಮಾರು 5 ಕೋಟಿ ಪರಿಹಾರ ನೀಡಲು ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಇದೀಗ ಗಾಂಧಿನಗರ & ಪರಪ್ಪನ ಅಗ್ರಹಾರ ಜೈಲಿನಲ್ಲಿ ಓಡಾಡುತ್ತಿವೆ.

Bengaluru: ‘ಪೊಲೀಸ್’ ಹೆಸರು ಹೇಳಿ ಹೀಗೂ ನಿಮ್ಮನ್ನು ದೋಚುತ್ತಾರೆ: ಮೈಯೆಲ್ಲಾ ಕಣ್ಣಾಗಿರಲಿ, ಎಚ್ಚರ!