Bengaluru: ‘ಪೊಲೀಸ್’ ಹೆಸರು ಹೇಳಿ ಹೀಗೂ ನಿಮ್ಮನ್ನು ದೋಚುತ್ತಾರೆ: ಮೈಯೆಲ್ಲಾ ಕಣ್ಣಾಗಿರಲಿ, ಎಚ್ಚರ!
Bengaluru: ಕಳ್ಳತನ ಪ್ರಕರಣ ಇತ್ತೀಚಿಗೆ ಯಾವಾಗ ಯಾವ ರೀತಿ ನಡೆಯುತ್ತೆ ಅನ್ನೋದು ಊಹಿಸೋಕು ಸಾಧ್ಯವಿಲ್ಲ. ಹೌದು, ಇಲ್ಲೊಬ್ಬ ತಾನು ಪೊಲೀಸ್ ಎಂದು ನಂಬಿಸಿ ಮಹಿಳಾ ಮಸಾಜ್ ಥೆರಪಿಸ್ಟ್ (Woman Massage Therapist) ಬಳಿ ಸುಲಿಗೆ ಮಾಡಿದ್ದಾನೆ. ಸದ್ಯ ಸುಲಿಗೆಯನ್ನೆ ವೃತ್ತಿ ಮಾಡಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು (Bengaluru) ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Mansoon Session: ಇಂದಿನಿಂದ ಮುಂಗಾರು ಅಧಿವೇಶನ ಶುರು – ಮಂಡನೆಯಾಗಲಿದೆ ಈ 6 ಮಸೂದೆಗಳು !!
ಜುಲೈ 3 ರಂದು 33ವರ್ಷದ ಆರೋಪಿ ಮಹೇಂದ್ರ ಕುಮಾರ್, ತನ್ನ ಹೆಸರು ಸುರೇಶ್ ಎಂದು ಮಸಾಜ್ ಗಾಗಿ ಆನ್ಲೈನ್ ಮೂಲಕ 25 ವರ್ಷದ ಥೆರಪಿಸ್ಟ್ ಬುಕ್ ಮಾಡಿದ್ದ. ಥೆರಪಿಸ್ಟ್ನನ್ನು ರಾಮಮೂರ್ತಿ ನಗರದ ಅಪಾರ್ಟ್ಮೆಂಟ್ ಒಂದರ ಬಳಿ ಕರೆಸಿದ್ದ. ಮಹಿಳಾ ಥೆರಪಿಸ್ಟ್ ರಾತ್ರಿ 10;30ರ ಸುಮಾರಿಗೆ ಸ್ಥಳಕ್ಕೆ ಬಂದಿದ್ದು ಆಕೆಯನ್ನು ಕಾರಿನಲ್ಲಿ ಸುಮಾರು ದೂರ ಕರೆದೊಯ್ದು ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದ.
ತಾನು ಆಫೀಸರ್ ಎಂದು, ಮಸಾಜ್ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ತಿಳಿದಿದೆ. ನಿಮ್ಮ ಮೇಲೆ ಕೇಸ್ ದಾಖಲಿಸೋದಾಗಿ ಬೆದರಿಕೆ ಹಾಕಿದ್ದಾನೆ. ಕೇಸ್ ದಾಖಲಿಸದಿರಲು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಅಥವಾ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಹಜವಾಗಿ ಪೊಲೀಸ್ ಹೆಸರಿಗೆ ಹೆದರಿದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಹೊಂದಿಸಿ ಆರೋಪಿಗೆ 1 ಲಕ್ಷದ 50 ಸಾವಿರ ಹಣ ವರ್ಗಾವಣೆ ಮಾಡಲಾಗಿದೆ. ನಂತರ ಯುವತಿಯನ್ನು ಇಡೀ ರಾತ್ರಿ ರಾತ್ರಿ ಹಲವೆಡೆ ಸುತ್ತಾಡಿಸಿದ್ದ ಆರೋಪಿ, ಬೆಳಗಿನ ಜಾವ ಏರ್ಪೋರ್ಟ್ ಬಳಿ ಇಳಿಸಿ ನಿನ್ನ ಊರಿಗೆ ಹೋಗಬೇಕು ಇಲ್ಲ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ.
ಸದ್ಯ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ಮಹೇಂದ್ರ ಈ ರೀತಿ ಸುಲಿಗೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದ. ಸದ್ಯ ಬಂಧನದ ನಂತರ ಈ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಮಾರತ್ತಳ್ಳಿ, ಪುಲಿಕೇಶಿ ನಗರ ಠಾಣೆಯಲ್ಲೂ ಈತನ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.