Puttur: ಸರ್ವೆ ಸೇತುವೆ ಸಮೀಪ ಯುವಕ ನಾಪತ್ತೆ ಪ್ರಕರಣ; ಮೃತದೇಹ ಪತ್ತೆ

Share the Article

Puttur: ಸರ್ವೆ ಗೌರಿ ಹೊಳೆಯ ಸೇತುವೆ ಸಮೀಪ ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಗೌರಿ ಹೊಳೆಯಲ್ಲಿ ಇಂದು ಪತ್ತೆಯಾಗಿದೆ.

ಪುತ್ತೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸನ್ಮಿತ್‌ (21) ಮೃತ ಯುವಕ. ಈತ ಕುದ್ಮಾರು ಗ್ರಾಮದ ತೆಕ್ಕಿತ್ತಾಡಿ ನಿವಾಸಿ. ಸನ್ಮಿತ್‌ ಜು.19 ರಂದು ರಾತ್ರಿ ತನ್ನ ಕೆಲಸ ಮುಗಿಸಿ ವಾಪಾಸು ಬರುವ ಸಂದರ್ಭದಲ್ಲಿ ಸರ್ವೆ ಗೌರಿ ಹೊಳೆಯ ಪಕ್ಕ ವಾಹನ ನಿಲ್ಲಿಸಿದ್ದು, ಅಲ್ಲಿಯೇ ಮೊಬೈಲ್‌, ಪರ್ಸ್‌ಗಳನ್ನು ಬಿಟ್ಟು ನಾಪತ್ತೆಯಾಗಿದ್ದ.

ಆ ಕಾರಣದಿಂದ ಗೌರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದು, ಇಂದು ಯುವಕನ ಮೃತ ದೇಹ ಪತ್ತೆಯಾಗಿದೆ.

Leave A Reply