

Infosys: ರಾಜ್ಯದ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರವಾಗಿ ಕೆಲದಿನಗಳಿಂದ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ನಿರ್ಧಾರಕ್ಕೆ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ಬೆನ್ನಲ್ಲೇ ಮಸೂದೆ ಜಾರಿಗೆ ರಾಜ್ಯ ಸರ್ಕಾರ(Karmataka Government) ಮುಂದಾಗಿರುವುದಕ್ಕೆ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್(Infosys)ಬೆಂಬಲಿಸಿದೆ.
ಹೌದು, ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ (Reservation For Kannadigas)ಮಸೂದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ವೇರ್ ದಿಗ್ಗಜ ಇನ್ಫೋಸಿಸ್ ಬೆಂಬಲಿಸಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳೊಂದಿಗೆ ಕೆಲಸ ಮಾಡುತ್ತೇವೆ. ಯಾವ ಕಾನೂನು ಮತ್ತು ಮಾರ್ಗಸೂಚಿಗಳನ್ನು ತರುತ್ತಾರೋ ಅದಕ್ಕೆ ನಾವು ಬೆಂಬಲ ಸೂಚಿಸುತ್ತೇವೆ ಎಂದು ತಿಳಿಸಿದ್ದಾರೆ. ನಾವು ಕಾನೂನು ಪರ ಎಂದು ಹೇಳುವ ಮೂಲಕ ಉದ್ಯೋಗ ಮೀಸಲು ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಇನ್ಫೋಸಿಸ್ ಸಂಸ್ಥೆ ಮತ್ತೆ ಕನ್ನಡಿಗರ ಮನ ಗೆದ್ದಿದೆ.
ಸರ್ಕಾರದ ವಿರುದ್ಧ ಕಿಡಿಕಾರಿದ ಇತರ ಸಂಸ್ಥೆಗಳು:
ಮಣಿಪಾಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ:
ಇದು ತಾರತಮ್ಯದಿಂದ ಕೂಡಿದ ಮತ್ತು ಪ್ರತಿಗಾಮಿ ಸ್ವರೂಪದ ಮಸೂದೆ. ಇದರ ಬದಲಿಗೆ ಕನ್ನಡಿಗರ ಉದ್ಯೋಗಾರ್ಹತೆ ಹೆಚ್ಚಿಸಲು ಅವರಿಗೆ ಅಗತ್ಯ ವೃತ್ತಿಪರ ತರಬೇತಿ ನೀಡಿ ಮೋಹನದಾಸ್ ಪೈ
ಆರ್.ಕೆ.ಮಿಶ್ರಾ ಅಸೋಚಾಮ್ ಸಹ-ಅಧ್ಯಕ್ಷ:
ಸ್ಥಳೀಯರಿಗೆ ಮೀಸಲಾತಿಯ ಮೇಲ್ವಿಚಾರಣೆಗೆ ಕಂಪನಿಗಳಲ್ಲಿ ಸರ್ಕಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಿಬಿಡಿ. ದೂರದೃಷ್ಟಿಯಿಲ್ಲದ ಈ ನಡೆ, ಉದ್ಯಮಗಳಿಗೆ ಮಾರಕ
ಕಿರಣ್ ಮಜುಂದಾರ್ ಶಾ ಬಯೋಕಾನ್ ಮುಖ್ಯಸ್ಥೆ:
ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು, ಐಟಿ ಸೇವೆಯಲ್ಲಿ ನಮ್ಮ ಅಗ್ರಸ್ಥಾನಕ್ಕೆ ಧಕ್ಕೆ ಮಾಡಿಕೊಳ್ಳಲಾಗದು. ಪ್ರತಿಭಾನ್ವಿತರ ಆಯ್ಕೆಗೆ ಅವಕಾಶವಿರಬೇಕು
ರಮೇಶ್ ಚಂದ್ರ ಲಹೋಟಿ ಅಧ್ಯಕ್ಷರು, ಎಫ್‌ಕೆಸಿಸಿಐ:
ಈ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಪ್ರತಿಭಾನ್ವಿತರ ಅಗತ್ಯವಿದೆ. ಹೀಗಾಗಿ ಮೀಸಲಾತಿ ಪ್ರಮಾಣವನ್ನು ಶೇ 25ಕ್ಕೆ ಇಳಿಸಬೇಕು.
https://hosavishya.com/2024/07/18/the-fear-of-the-hill-collapsing-night-traffic-ban-on-sampaje-national-highway/













