

Katrina Kaif: ಜನಸಾಮಾನ್ಯರು ಅನೇಕ ಸೆಲೆಬ್ರಿಟಿಗಳನ್ನು ತಮ್ಮ ಆರಾಧ್ಯ ದೈವ ಎಂಬಂತೆ ಕಾಣುತ್ತಾರೆ. ಅಂದ್ರೆ ಅಷ್ಟು ಹುಚ್ಚು ಅಭಿಮಾನ ಹೊಂದಿರುತ್ತಾರೆ. ಅಂತೆಯೇ ಇದೀಗ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಿವುಡ್ ನಟಿಯನ್ನು(Bollywood Actor) ಇಲ್ಲೊಂದು ಕುಟುಂಬ ಮನೆದೇವರೆಂದು ಬಗೆದು, ಬರೋಬ್ಬರಿ 11 ವರ್ಷಗಳಿಂದ ಪೂಜೆ ನಡೆಸುತ್ತಾ ಬಂದಿದೆ.
ಬಾಲಿವುಡ್‌ನಲ್ಲಿ ಫೇಮಸ್ ಸ್ಟಾರ್ ಹೀರೋಯಿನ್ ಕತ್ರಿನಾಗೆ(Katrina Kaif) ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಭಿಮಾನಿಗಳಿದ್ದಾರೆ. ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಬೇಕೆಂದು ನಟಿ ಯಾವಾಗಲೂ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಹೀಗಾಗಿ ಕತ್ರಿನಾ ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅಂತೆಯೇ ಅಭಿಮಾನಿಗಳು ಕೂಡ ನಟಿಯನ್ನು ಮೆಚ್ಚಿ ಲೈಕ್, ಕಮೆಂಟ್ ನೀಡುತ್ತಾರೆ. ಆದರೆ ಇಲ್ಲೊಂದು ಈ ದಂಪತಿ ಒಂದು ಹೆಜ್ಜೆ ಮುಂದೆ ಹೋಗಿ ಕತ್ರಿನಾಳನ್ನು ಮನೆ ದೇವರಾಗಿ ಮಾಡಿಕೊಂಡು ಪೂಜೆ ಮಾಡುತಿದ್ದಾರೆ.
Post Office Scheme: ಡಬಲ್ ಪ್ರಾಫಿಟ್ ಮಾಡೋಕೆ ಇಲ್ಲಿ ಹೂಡಿಕೆ ಮಾಡಿ! ಶೇಕಡಾ ನೂರಕ್ಕೆ ನೂರು ಗ್ಯಾರಂಟಿ ಇಲ್ಲಿದೆ!
ಹೌದು, ಹರಿಯಾಣದ ಚಾರ್ಕಿ ದಾದ್ರಿ ಜಿಲ್ಲೆಯ ಧನಿ ಪೋಗಟ್ ಎಂಬ ಹಳ್ಳಿಯಲ್ಲಿ ವಾಸಿಸುವ ಕರಂಬಿರ್ ಅಲಿಯಾಸ್ ಬಂಟು ಮತ್ತು ಅವರ ಪತ್ನಿ ಸಂತೋಷಿ 11 ವರ್ಷಗಳಿಂದ ಕತ್ರಿನಾಳನ್ನು ಪೂಜಿಸುತ್ತಿದ್ದಾರೆ. ಪ್ರತಿದಿನವೂ ಕತ್ರಿನಾಳನ್ನು ಪೂಜಿಸುತ್ತಾರೆ. ಆಕೆಯ ಹುಟ್ಟುಹಬ್ಬವನ್ನೂ ಅದ್ದೂರಿಯಾಗಿ ಆಚರಿಸುತ್ತಾರೆ.
ಅಲ್ಲದೆ ಕಳೆದ 11 ವರ್ಷಗಳಿಂದ ಈ ಜೋಡಿ ಕತ್ರಿನಾ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಲಡ್ಡ ವಿತರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ಕತ್ರಿನಾ ಕೈಫ್ ತಮ್ಮನ್ನು ಭೇಟಿಯಾಗಬೇಕು ಎಂಬುದೇ ಇವರ ಅತೀ ದೊಡ್ಡ ಆಸೆಯಂತೆ.
ಈ ಬಗ್ಗೆ ಮಾತನಾಡಿದ ಪತಿಯಾರ “ನಾನು 13-14 ವರ್ಷ ವಯಸ್ಸಿನಿಂದಲೂ ಕತ್ರಿನಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೇನೆ. ಮದುವೆಗೂ ಮುನ್ನ ಕತ್ರಿನಾಳ ಹುಟ್ಟುಹಬ್ಬವನ್ನು ಒಬ್ಬನೆ ಆಚರಿಸುತ್ತಿದ್ದೆ. ಈಗ ನಾನು ಮತ್ತು ನನ್ನ ಹೆಂಡತಿ ಒಟ್ಟಿಗೆ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಕತ್ರಿನಾ ನಮ್ಮ ಮನೆಗೆ ಬರಬೇಕೆಂದು ನಾನು ಬಯಸುತ್ತೇನೆ. ಕತ್ರಿನಾ ನಮ್ಮನ್ನು ಭೇಟಿಯಾಗಲು ಖಂಡಿತ ಬರುತ್ತಾಳೆ ಎಂದು ನಂಬಿದ್ದೇನೆ’ ಎಂದು ಹೇಳುತ್ತಾನೆ. ಜಗತ್ತಿನಲ್ಲಿ ಎಂತಹ ಹುಚ್ಚರಿದ್ದಾರೆ ಅನ್ನೋದಕ್ಕೆ ಇದು ಸಾಕ್ಷಿಯಲ್ಲವೇ?
https://hosavishya.com/2024/07/18/ankola-hill-collapse-mother-said-come-home-soon-son-the-son-who-came-back-got-only-his-mothers-saree/













