Ananth -Radhika Marriage: ಅಂಬಾನಿ ಮಗನದ್ದು ಅದ್ಧೂರಿಯಲ್ಲ, ಇದೊಂದು ಕಂಜೂಸ್, ಜಿಪುಣರಲ್ಲಿ ಜಿಪುಣರ ಮದುವೆಯಂತೆ !! ಇದು ನಿಜಾ ಕೂಡ.. ಇಲ್ಲಿದೆ ನೋಡಿ ಅಚ್ಚರಿ ಕಾರಣಗಳು !!
Ananth-Radhika Marriage: ಏಷ್ಯಾದ ಶ್ರೀಮಂತ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ(Ananth Ambani) ಅವರು ಕೆಲವು ದಿನಗಳ ಹಿಂದಷ್ಟೇ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ(Mumbai, Jio World Convention Center) ಬಾಲ್ಯದ ಸ್ನೇಹಿತೆ ರಾಧಿಕಾ ಮರ್ಚೆಂಟ್(Radhika Marchant) ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಈ ಅದ್ದೂರಿ ಮದುವೆಯಲ್ಲಿ ವಿಶ್ವದಾದ್ಯಂತದ ಖ್ಯಾತ ಭಾರತೀಯ ಮತ್ತು ಅಂತರಾಷ್ಟ್ರೀಯ ವ್ಯಕ್ತಿಗಳು ಭಾಗವಹಿಸಿದ್ದರು. ಭಾರತೀಯ ಮತ್ತು ಅಂತರಾಷ್ಟ್ರೀಯ ತಾರೆಯರ ಸಮ್ಮುಖದಲ್ಲಿ ಸತಿಪತಿಗಳಾದರು. ಮದುವೆ ಮಂಟಪವಂತೂ ಸ್ವರ್ಗವೇ ಕೆಳಗಿಳಿದುಬಂದಂತಿತ್ತು. ಹೀಗಾಗಿ ಇದನ್ನು ಜಗತ್ತಿನ ಅತೀ ದೊಡ್ಡ ಮದುವೆ ಎಂದೆಲ್ಲಾ ಬಣ್ಣಿಸಲಾಗಿತ್ತು. ಆದರೆ ಇದನ್ನು ಕೆಲವರು ಅದ್ಧೂರಿ ಮದುವೆ ಅಲ್ಲ, ಅತೀ ಕಂಜೂಸ್ ಮದುವೆ ಎಂದು ಕರೆದಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನೂ ನೀಡಿದ್ದಾರೆ.
ಹೌದು, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ(Ananth – Radhika Marriage) ವೆಚ್ಚವು ಸರಾಸರಿ ಭಾರತೀಯ ಕುಟುಂಬವು ಸಾಮಾನ್ಯವಾಗಿ ಮದುವೆಗಳಿಗೆ ಖರ್ಚು ಮಾಡುವ ವೆಚ್ಚಕ್ಕೆ ಹೋಲಿಸಿದರೆ ಅಸಾಧಾರಣವಾಗಿ ಹೆಚ್ಚಾಗಿದೆ. ಫೋರ್ಬ್ಸ್ ಪ್ರಕಾರ, ಎಲ್ಲಾ ಸಮಾರಂಭಗಳು ಮತ್ತು ಮದುವೆಯ ಪೂರ್ವ ಕಾರ್ಯಕ್ರ, ಸೇರಿದಂತೆ ಸಂಪೂರ್ಣ ಮದುವೆಯ ಅಂದಾಜು ಬರೋಬ್ಬರಿ ರೂ 5000 ಕೋಟಿ ಜಾಸ್ತಿ ಹಣವನ್ನು ಮದುವೆಗಾಗಿ ಅಂಬಾನಿ ಖರ್ಚು ಮಾಡಿದ್ದಾರೆ. ಆದರೆ ಇದೊಂದು ಕಂಜೂಸ್ ಮದುವೆ ಅಂತ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳು ಕೂಡ ಇದೆ.
ಹೌದು, ಮದುವೆಯಲ್ಲಿ ಖರ್ಚು ಮಾಡಿದ್ದು ಯಾವುದಕ್ಕೆಲ್ಲ ಅಂದರೆ, 100 ವಿಮಾನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಕ್ಕೆ ಜಸ್ಟೀನ್ ಬೀಬರ್ ಗೆ 83 ಕೋಟಿ, ರಿಯಾನಾಗೆ 73 ಕೋಟಿ , ಅದ್ಧೂರಿ ಡೆಕೋರೇಷನ್ ಗೆ , ಚಿನ್ನ , ಬೆಳ್ಳಿ, ವಜ್ರ , ರತ್ನಗಳಿಂದ ಕಸೂತಿ ಮಾಡಿದ ಬಟ್ಟೆಗಳಿಗೆ ಕೋಟಿಗಟ್ಟಲೆ ಖರ್ಚಾಗಿದೆ. ಆದರೆ ಇಲ್ಲಿ ಎಲ್ಲರೂ ತಿಳಿದು ಕೊಳ್ಳಬೇಕಾಗಿರುವ ಪ್ರಮುಖ ಅಂಶವಿದೆ. ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 9 ಲಕ್ಷ ಕೋಟಿಗೂ ಅಧಿಕವಾಗಿದೆ. ಅಂದರೆ ಈ ಮದುವೆಗೆ ಅಂಬಾನಿ ಖರ್ಚು ಮಾಡಿರುವ ಹಣ ಅವರ ಒಟ್ಟು ಆಸ್ತಿಯ ಕೇವಲ 0.5% ಆಗಿದೆ. ಅಂದರೆ ಮದುವೆಗೆ ಖರ್ಚು ಮಾಡಿರುವ 5000 ಕೋಟಿಯನ್ನು ಅಂಬಾನಿ ಕೇವಲ 20 ದಿನದಲ್ಲಿ ಸಂಪಾದನೆ ಮಾಡಿ ಬಿಡುತ್ತಾರೆ. ಹೀಗಾಗಿ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಅಂಬಾನಿ ಶ್ರೀಮಂತಿಕೆಗೆ ಇದೇನು ಅಂತಹ ಅದ್ಧೂರಿ ಅಲ್ಲವೇ ಅಲ್ಲ.
ಇನ್ನು ಮದುವೆಯಲ್ಲೂ ಬಿಸಿನೆಸ್ ಬಗ್ಗೆಯೇ ತಲೆ ಉಪಯೋಗಿಸಿರುವ ಅಂಬಾನಿ ಅಂತರಾಷ್ಟ್ರೀಯ ವಸ್ತ್ರವಿನ್ಯಾಸಕಾರರಿಗೆ ಬಟ್ಟೆ ಡಿಸೈನ್ ಗೆ ಕೊಟ್ಟಿದ್ದಾರೆ. ವಿದೇಶದ ಶ್ರೀಮಂತ ಮಾತ್ರವಲ್ಲ ಎಲ್ಲಾ ಕ್ಷೇತ್ರದ ದಿಗ್ಗಜರನ್ನು ಕರೆಯುವ ಮೂಲಕ ಭವಿಷ್ಯ ವ್ಯವಹಾರದ ಬಗ್ಗೆ ಕೂಡ ಚಿಂತಿಸಿದ್ದಾರೆ. ಇದರೊಂದಿಗೆ ಬ್ಯಾಂಡೆಡ್ ಗಿಫ್ಟ್ ಗಳು, ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಅಲ್ಲೂ ಪ್ರಮೋಷನ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಮದುವೆಯಿಂದ ಮದುವೆಗೆ ಖರ್ಚಾಗುವ ಬದಲು ಅದೆಷ್ಟೋ ಲಾಭವೇ ಆಗಿದೆ ಎನ್ನುವುದು ಮಾರುಕಟ್ಟೆ ವಿಶ್ಲೇಷಕರಿಂದ ಬಂದಿರುವ ಅಭಿಪ್ರಾಯವಾಗಿದೆ. ಮಾತ್ರವಲ್ಲ ಈ ಎಲ್ಲಾ ಆಚರಣೆಗಳ ನಡುವೆ, ಮುಖೇಶ್ ಅಂಬಾನಿ ವ್ಯವಹಾರಕ್ಕೆ ಸ್ವಲ್ಪವೂ ಹಾನಿಯಾಗಿಲ್ಲ. ವಾಸ್ತವವಾಗಿ ಕಳೆದ 10 ದಿನಗಳಲ್ಲಿ 25,000 ಕೋಟಿ ರೂ. ಲಾಭವಾಗಿದೆ.
ಅಲ್ಲದೆ ಅಂಬಾನಿ ಮಗನ ಮದುವೆಯನ್ನು ಇನ್ನೂ ಅದ್ಧೂರಿಯಾಗಿ ಮಾಡಬಹುದಿತ್ತು. ಆದರೆ ಅಂತರಾಷ್ಟ್ರೀಯ ಸ್ನೇಹ ಸಂಬಂಧದ ಜೊತೆಗೆ ಅಂಬಾನಿ ಈ ಮೂಲಕ ಮಿಡಲ್ ಕ್ಲಾಸ್ ಮತ್ತು ಲೋವರ್ ಮಿಡಲ್ ಕ್ಲಾಸ್ ಜನರಿಗೆ ಸಂದೇಶ ನೀಡುತ್ತಿದ್ದಾರೆ. ಸಾಲ ಮಾಡಿ ಮದುವೆ ಮಾಡಬೇಡಿ. ಸಂಪಾದಿಸಿದ ಆಸ್ತಿಯಲ್ಲಿ ಎಷ್ಟನ್ನು ಖರ್ಚು ಮಾಡಬೇಕು ಎಂಬುದನ್ನು ಅಂಬಾನಿ ನೋಡಿ ಕಲಿಯಿರಿ. ಭಾರತದ ಜನರ ಬಡತನಕ್ಕೆ ಅಂಬಾನಿ ಕಾರಣ ಅಲ್ಲ. ಭಾರತವನ್ನು ಆಳಿದ ವಿವಿಧ ರಾಜಕೀಯ ಪಕ್ಷಗಳೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್ ಗಳು, ಟ್ರೋಲ್ ಮಾಡಲಾಗುತ್ತಿದೆ.
ಮದುವೆಯಲ್ಲಿ ಪಾಲ್ಗೊಂಡ ಸೆಲೆಬ್ರಿಟಿಗಳು:
ಸಮಾರಂಭಕ್ಕೆ ಜಾಗತಿಕ ಮಟ್ಟದ ಸೆಲೆಬ್ರಿಟಿಗಳು, ರಾಜಕಾರಣಿಗಳು, ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗದ ಗಣ್ಯರು, ಅಗ್ರ ಕ್ರಿಕೆಟಿಗರು ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಾಕ್ಷಿಯಾಗಿದ್ದರು.
ಈವೆಂಟ್ಗೆ ಜಾಗತಿಕ ಮಟ್ಟದ ಗಣ್ಯ ವ್ಯಕ್ತಿಗಳು ಆಗಮಿಸಿ ಗಮನ ಸೆಳೆದಿದ್ದಾರೆ. ಕಿಮ್ ಕಾರ್ಡಶಿಯಾನ್, ಖ್ಲೋಯೆ ಕಾರ್ಡಶಿಯಾನ್, ನೈಜೀರಿಯಾದ ರ‍್ಯಾಪರ್ ರೆಮಾ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೈರ್ ಮತ್ತು ಸೌದಿ ಅರಾಮ್ಕೊ ಸಿಇಓ ಅಮೀನ್ ನಾಸರ್, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಜಯ್ ಲೀ ಮತ್ತು ಜಿಎಸ್‌ಕೆ (GSK plc) ಸಿಇಓ ಎಮ್ಮಾ ವಾಲ್ಮ್ಸ್ಲೇ, ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
ಅಮಿತಾಭ್ ಬಚ್ಚನ್ ಅವರ ಸಂಪೂರ್ಣ ಕುಟುಂಬ, ಶಾರುಖ್ ಖಾನ್ ಫ್ಯಾಮಿಲಿ, ಸಲ್ಮಾನ್ ಖಾನ್, ಅಜಯ್ ದೇವಗನ್, ರಣ್ಬೀರ್ ಕಪೂರ್, ಆಲಿಯಾ ಭಟ್, ರೇಖಾ, ಟೈಗರ್ ಶ್ರಾಫ್ ಫ್ಯಾಮಿಲಿ, ವರುಣ್ ಧವನ್, ಕತ್ರಿನಾ ಕೈಫ್ – ವಿಕ್ಕಿ ಕೌಶಲ್, ದೀಪಿಕಾ ಪಡುಕೋಣೆ – ರಣ್ವೀರ್ ಸಿಂಗ್ ಮತ್ತು ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ರಾಮ್ ಚರಣ್, ಮಹೇಶ್ ಬಾಬು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
BSNL Recharge Plan: ಬಿಎಸ್‌ಎನ್‌ಎಲ್ ನಿಂದ 395 ದಿನಗಳ ಸೂಪರ್ ರಿಚಾರ್ಜ್ ಪ್ಲಾನ್! ದೇಶದಾದ್ಯಂತ 4G ಸೇವೆ!