UttaraKannada: ಶಿರೂರು ಬಳಿ ಗುಡ್ಡಕುಸಿತ ಪ್ರಕರಣ; ಮಣ್ಣಿನಡಿ ಬೆಂಜ್‌ ಕಾರಿನ ಲೊಕೇಶನ್‌ ಪತ್ತೆ

UttaraKannada: ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿನ್ನೆ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಜ್‌ ಕಾರು ಮಣ್ಣಿನಡಿ ಸಿಲುಕಿದ್ದು, ಇದರ ಲೊಕೇಶನ್‌ ಅನ್ನು ತಜ್ಞರು ಪತ್ತೆ ಮಾಡಿದ್ದಾರೆ. ಈ ಮೂಲಕ ಮಣ್ಣಿನಡಿಯಲ್ಲಿ ಬೆಂಜ್‌ ಕಾರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಶೇ.30 ರಷ್ಟು ಮಾತ್ರ ಮಣ್ಣು ತೆರವು ಮಾಡಲಾಗಿದೆ. ಶೇ.70 ರಷ್ಟು ಮಣ್ಣು ತೆರವು ಕಾರ್ಯ ಇನ್ನೂ ಆಗಬೇಕಿದೆ ಎಂದು ವರದಿಯಾಗಿದೆ.

ಮಣ್ಣು ತೆರವು ಮಾಡೋಕೆ ಗುಡ್ಡ ಕುಸಿತದ ಆತಂಕ ಕೂಡಾ ಹೆಚ್ಚಿದೆ. ಇನ್ನೊಂದು ಕಡೆಯಲ್ಲಿ ಗಂಗಾವಳಿ ನದಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಒಂದು ಕೊಚ್ಚಿ ಹೋಗಿದ್ದು, ಗ್ಯಾಸ್‌ ರಿಲೀಸ್‌ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆದರೆ ಟ್ಯಾಂಕರ್‌ ಮುಂದೆ ಕೊಚ್ಚಿ ಹೋಗಿ ಬಂಡೆಗೆ ಅಪ್ಪಳಿಸುವ ಆತಂಕ ಇನ್ನೊಂದು ಕಡೆ ಹೆಚ್ಚಾಗಿದೆ. ಈ ಟ್ಯಾಂಕರ್‌ ಶಿರೂರದಿಂದ ಸಗಡಗೆರೆ ಗ್ರಾಮದ ಬಳಿ ಸುಮಾರು 6 ಕಿ.ಮೀ. ಹರಿದು ಬಂದಿದೆ. ಒಂದು ಕಡೆ ಸಿಲುಕಿದರೆ ಇನ್ನು ಬೇರೆ ಕಡೆ ಹೋಗುತ್ತಾ ಇಲ್ವಾ ಗೊತ್ತಿಲ್ಲ. ಸದ್ಯಕ್ಕೆ ಎನ್‌ಡಿಆರ್‌ಎಫ್‌ ತಂಡ ಟ್ಯಾಂಕರನ್ನು ಕಟ್ಟಿ ಹಾಕುತ್ತಿದೆ.

 

Leave A Reply

Your email address will not be published.