

SIIMA 2024: ದಕ್ಷಿಣ ಭಾರತದಲ್ಲಿ ನಿರ್ಮಾಣ ಆದ ಸಿನಿಮಾಗಳಿಗೆ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್ (SIIMA 2024) ನೀಡುವ ಸಮಾರಂಭ ಮತ್ತೆ ಶುರುವಾಗುತ್ತಿದೆ. ಹೌದು, 2024ನೇ ಸಾಲಿನ ದಕ್ಷಿಣ ಭಾರತದ ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. ಮುಖ್ಯವಾಗಿ 2024ರಲ್ಲಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಳೆದ ವರ್ಷ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಸಿನಿಮಾ ಬಾರದೇ ಇದ್ದರೂ, ಎರಡು ಸಿನಿಮಾಗಳು ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಿಕ್ಕಾಪಟ್ಟೆ ಪೈಪೋಟಿಗೆ ಬಿದ್ದಿವೆ. ಅದು ‘ಕಾಟೇರ’ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’.
ಸದ್ಯ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಮಾತ್ರ ಸೈಮಾದವರು ರಿಲೀಸ್ ಮಾಡಿದ್ದಾರೆ. ‘ಕಾಟೇರ’ ಎಂಟು ವಿಭಾಗಳಲ್ಲಿ ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’ ಸಿನಿಮಾ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ಅತ್ಯುತ್ತಮ ನಟರ ಪಟ್ಟಿ ಇಂತಿವೆ :
ದರ್ಶನ್- ಕಾಟೇರ
ಧನಂಜಯ- ಗುರುದೇವ ಹೊಯ್ಸಳ
ರಾಜ್ ಬಿ ಶೆಟ್ಟಿ-ಟೋಬಿ
ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2
ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ
ಶಿವರಾಜ್ಕುಮಾರ್- ಘೋಸ್ಟ್
ಅತ್ಯುತ್ತಮ ಸಿನಿಮಾ ಪಟ್ಟಿ ಇಂತಿವೆ:
ಆಚಾರ್ ಆ್ಯಂಡ್ ಕೋ
ಕಾಟೇರ
ಕೌಸಲ್ಯ ಸುಪ್ರಜಾ ರಾಮ
ಕ್ರಾಂತಿ
ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ
ಈ ಬಾರಿ ಸೈಮಾ ಅವಾರ್ಡ್ ಕಾರ್ಯಕ್ರಮ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದ್ದು, ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಕಾರ್ಯಕ್ರಮ ಜರುಗಲಿದೆ. ಕನ್ನಡದ ಬಹುತೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ.
Men Hair: ಪುರುಷರ ಕೂದಲ ಸಮಸ್ಯೆಗೆ ಜಸ್ಟ್ ಒಂದೇ ಒಂದು ಎಣ್ಣೆ ಮಸಾಜ್ ಸಾಕು!













