Basavanagouda Yatnal: ಪ್ರತಿಭಟನೆ ಮಾಡ್ತಾರೆ, ಮತ್ತೆ ಸಿಎಂಗೆ ಫೋನ್ ಮಾಡಿ ತಪ್ಪು ತಿಳಿಬೇಡಿ ಸಾರ್ ಹೈಕಮಾಂಡ್ ಪ್ರೆಶರ್ ಅಂತಾರೆ – ಸ್ವಪಕ್ಷ ಬಿಜೆಪಿ ವಿರುದ್ಧವೇ ಯತ್ನಾಳ್ ಬಾಂಬ್ !!
Basavanagouda Yatnal: ರಾಜ್ಯದಲ್ಲಿ ಮುಡಾ ಹಗರಣ(Muda Scam) ಹಾಗೂ ವಾಲ್ಮಿಕಿ ನಿಗಮದಲ್ಲಾದ ಹಗರಣಗಳು ಭಾರೀ ಸದ್ದು ಮಾಡುತ್ತಿವೆ. ಈ ಕುರಿತು ಬಿಜೆಪಿ(BJP) ಹಾಗೂ ಜೆಡಿಎಸ್(JDS) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸಿಎಂ ರಾಜಿನಾಮೆಗೆ ಆಗ್ರಹಿಸಿದ್ದವು. ಅಲ್ಲದೆ ಇದೀಗ ವಿಧಾನಸಭಾ ಅಧಿವೇಶನದಲ್ಲೂ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಇವುಗಳನ್ನು ಅಸ್ತ್ರಗಳಾಗಿ ಪ್ರಯೋಗಿಸುತ್ತಿವೆ.
ವಿಧಾನಸಭೆಯ ಮುಂಗಾರು ಅಧಿವೇಶನ ಕೆಲವು ದಿನಗಳಿಂದ ಶುರುವಾಗಿದ್ದು ಹಗರಣಗಳ ವಿಚಾರವೇ ಬಿಸಿಬಿಸಿ ಚರ್ಚೆಯಾಗಿದೆ. ಪ್ರತಿಪಕ್ಷಗಳಂತೂ ಇದೇ ವಿಚಾರವನ್ನು ಮತ್ತೆ ಮತ್ತೆ ಎತ್ತಿ ಸರ್ಕಾರದ ಬಾಯಿ ಮುಚ್ಚಿಸುತ್ತಿವೆ. ಆದರೆ ಇದೀಗ ಬಿಜೆಪಿ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್(Basavanagouda Yatnal) ಅವರು ಈ ಹಗರಣಗಳ ವಿರುದ್ಧ ನಡೆದ ಪ್ರತಿಭಟನೆ ವಿಚಾರವಾಗಿ ತಮ್ಮ ಪಕ್ಷದ ಬಾಯಿಯನ್ನೇ ಮುಚ್ಚಿಸುಲು ಮುಂದಾಗಿದ್ದಾರೆ. ಅಲ್ಲದೆ ಮುಜುಗರವನ್ನೂ ಉಂಟುಮಾಡಿದ್ದಾರೆ.
ಹೌದು, ಸದನದಲ್ಲಿ ಹಗರಣಗಳ ಕುರಿತು ಪ್ರಸ್ತಾಪಿಸಿ ನ್ಯಾಯ ಸಿಗಬೇಕು ಎಂದು ಮಾತನಾಡಿದ ಯತ್ನಾಳ್ ಅವರು SIT ಯಿಂದ ಯಾವುದೇ ಕಾರಣಕ್ಕೂ ನ್ಯಾಯ ಸಿಗುವುದಿಲ್ಲ, ಸರ್ಕಾರಗಳು, ರಾಜಕೀಯ ನಾಯಕರು ಅಧಿಕಾರಿಗಳನ್ನು ಬಲಿಪಶುಗಳಾಗಿ ಮಾಡುತ್ತಾರೆ. ಹೀಗೆ ಎರಡ್ಮೂರು ವರ್ಷ ಎಳೆದ ಬಳಿಕ ಮತ್ತೊಂದು ಹಗರಣ ಬಯಲಾಗುತ್ತೆ. ಆಗ ಹಳೆಯದು ಮರೆತುಹೋಗುತ್ತೆ’ ಎಂದಿದ್ದಾರೆ.
ಅಲ್ಲದೆ ವಿಪಕ್ಷಗಳು ಹೋರಾಟ ಮಾಡುತ್ತಲೇ ಇರುತ್ತವೆ. ಇದನ್ನು ಮಾಧ್ಯಮಗಳ ಭಾರೀ ಹೋರಾಟ, ಗಡಗಡ ನಡುಗಿದ ಸರ್ಕಾರ ಎಂದೆಲ್ಲಾ ತೋರಿಸುತ್ತಾರೆ. ಆದರೆ ಇಲ್ಲಿ ಗಡಗಡನೂ ಇಲ್ಲ ಪಡಪಡನೂ ಇಲ್ಲ. ಮತ್ತೆ ಪ್ರತಿಭಟನೆ ಆದ ಬಳಿಕ ಮನೆ ಬಂದು ಮುಖ್ಯಮಂತ್ರಿಗಳಿಗೆ ಫೋನ್ ಮಾಡಿ, ಸರ್ ತಪ್ಪು ತಿಳಿಯಬೇಡಿ, ಮೇಲಿನ ಪ್ರೆಶರ್, ಹೈಕಮಾಂಡ್ ಒತ್ತಡ ಇದೆ. ಹೀಗಾಗಿ ನಾವು ಮಾಡಲೇ ಬೇಕು. ನಮ್ಮ ಯಾವುದನ್ನು ತೆಗೆಯಬೇಡಿ ಎನ್ನುತ್ತಾರೆ’ ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಅವರ ಈ ಮಾತಿಗೆ ಇಡೀ ಸಧನವೇ ನಗೆಯಲ್ಲಿ ತೇಲಿದರೆ ಬಿಜೆಪಿಯ ಹಲವು ನಾಯಕರು ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಆ ಮನಸ್ಥಿತಿ ಇಲ್ಲ ಎಂದಿದ್ದಾರೆ. ಯತ್ನಾಳ್ ಅವರು ಒಂದು ರೀತಿಯಲ್ಲಿ ಇದು ಎಲ್ಲರಿಗೂ ಅನ್ವಯವಾಗುವಂತೆ ಹೇಳಿದರೂ ಕೂಡ ತನ್ನ ಪಕ್ಷ ಬಿಜೆಪಿಗಂತೂ ಮುಜುಗುರವಾದದ್ದು ಮಾತ್ರ ಸತ್ಯ.
H D Revanna: ನನ್ನ ಮಗನನ್ನು ಗಲ್ಲಿಗೇರಿಸಿ – ಸದನದಲ್ಲಿ ಎಚ್ ಡಿ ರೇವಣ್ಣ ಬಾವುಕ !!