Aparna: ನಿರೂಪಕಿ ಅಪರ್ಣಾಗೆ ನಾಗರಾಜ್ ವಸ್ತಾರೆ ಎರಡನೇ ಗಂಡ, ಹಾಗಿದ್ರೆ ಮೊದಲ ಪತಿ ಯಾರು? ಇಬ್ಬರೂ ದೂರಾಗಿದ್ದು ಯಾಕೆ?
Aparna: ನಿರೂಪಕಿ ಅಪರ್ಣಾ(Aparna) ಸಾವು ಇಂದಿಗೂ ಕನ್ನಡಿಗರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಇದೊಂದು ಕನ್ನಡಿಗರಿಗೆ ನೇರವಾಗಿ ನಾಟಿದ ಸಾವು ಎನ್ನಬಹುದು. ಅಪರ್ಣಾ ಸಾವಿನ ಬಳಿಕ ಅವರ ವೈಯಕ್ತಿಕ ಜೀವನದ ವಿಚಾರಗಳು, ಕನಸಿನ ವಿಚಾರಗಳು, ಸಾಧನೆಯ ಅಂಶಗಳು ಬೆಳಕಿಗೆ ಬಂದಿವೆ. ಅಂತೆಯೇ ಅವರ ದಾಂಪತ್ಯ ಜೀವನದ ಬಗ್ಗೆಯೂ ಕೆಲವು ವಿಚಾರಗಳು ಬಯಲಾಗಿದ್ದು, ಅಪರ್ಣಾ ಎರಡನೇ ಮದುವೆಯಾಗಿದ್ದರು, ನಾಗರಾಜ್ ವಸ್ತಾರೆ(Nagraj Vastare) ಅವರು ಎರಡನೇ ಪತಿ ಎಂದು ತಿಳಿದುಬಂದಿದೆ.
1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ಮಸಣದ ಹೂವು(Masanada Huvu) ಸಿನಿಮಾ ಮೂಲಕ ಚಂದನವನಕ್ಕೆ ಆಗಮಿಸಿದ್ದ ಅಪರ್ಣಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು. ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ, ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಿರೂಪಣೆ. ಸರಿಸುಮಾರು 7 ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಹೆಗ್ಗಳಿಕೆ ಅಪರ್ಣಾ ಅವರದ್ದು. ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಕೂಡ ಸಾಹಿತಿ. ಬರವಣಿಗೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಅಪರ್ಣಾ ಹಾಗೂ ನಾಗರಾಜ್ ತಮ್ಮ ದಾಂಪತ್ಯ ಜೀವನದಲ್ಲಿ ಇಬ್ಬರೂ ಸುಖ-ನೆಮ್ಮದಿಯಿಂದ ಇದ್ದರು. ಆದರೆ ನಾಗರಾಜ್ ಅವರು ಅಪರ್ಣಾ ಅವರಿಗೆ ಎರಡನೇ ಪತಿ(2nd Husband). ನಾಗರಾಜ್ ಗೂ ಮೊದಲು ಅಪರ್ಣಾಗೆ ಬೇರೊಬ್ಬರ ಜೊತೆ ಮದುವೆಯಾಗಿತ್ತು.
ಹೌದು, ಅಪರ್ಣಾ ಅವರಿಗೆ ಕಲಾರಂಗದಲ್ಲಿ ಒಳ್ಳೆಯ ಬೇಡಿಕೆ ಇರುವ ವೇಳೆಯೆ ಭಾರತೀಯ ಮೂಲದ NRI ವ್ಯಕ್ತಿ ವಿದೇಶದಲ್ಲಿ ಇದ್ದವರನ್ನು ಅಪರ್ಣಾ ಮದುವೆಯಾದರು. 2 ವರ್ಷಗಳ ಕಾಲ ಅಮೆರಿಕಾದಲ್ಲಿ ಮೊದಲ ಪತಿ ಜತೆ ಸಂಸಾರ ನಡೆಸಿದ್ದರು. ಆದರೆ ಅಮೆರಿಕಾದ ಜೀವರ ಜೀವನ ಇವರಿಗೆ ತುಂಬಾನೆ ನೋವನ್ನು ನೀಡಿತ್ತಂತೆ. ಮೊದಲ ಪತಿಯಿಂದ ಚಿತ್ರ ಹಿಂಸೆ ಒಳಗಾದರಂತೆ. ಹೀಗಾಗಿ ಈ ವ್ಯಕ್ತಿಯಿಂದ ಮಾನಸಿಕ ಹಿಂಸೆ ಅನುಭವಿಸಿದ ಕಾರಣ ಅವರಿಂದ ದೂರವಾದರು. ಅಲ್ಲದೆ ಅವರು ಮೊದಲ ಪತಿ ಕುರಿತಾಗಿ ಎಲ್ಲಿಯೂ ಮಾತನಾಡಲಿಲ್ಲ.
39ನೇ ವಯಸ್ಸಿಗೆ ಎರಡನೇ ಮದುವೆಯಾದ ಅಪರ್ಣಾ!!
ನಂತರ ಒಂಟಿಯಾಗಿ ಜೀವನ ನಡೆಸುತ್ತಿದ್ದ ಅಪರ್ಣಾ ಅವರಿಗೆ ನಿರೂಪಣೆ ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆತು ಬಂತು. ಮನರಂಜನಾ ಜಗತ್ತಿನಲ್ಲಿ ಗುರುತಿಕೊಳ್ಳುತ್ತಿದ್ದರು. ಹೊಸ ಜೀವನ ನಡೆಸಬೇಕು ಎಂದು ಕನಸು ಇಟ್ಟುಕೊಂಡಿದ್ದರು. ಈ ವೇಳೆ ಪರಿಚಯವಾದವರೇ ನಾಗರಾಜ್ ವಸ್ತಾರೆ. ಇಬ್ಬರು ಭೇಟಿ ಆಗ್ತಾರೆ. ಈ ವೇಳೆ ನಾಗರಾಜ್ ವಸ್ತಾರೆ ಸ್ನೇಹವಾಯ್ತು.
2003 ರಲ್ಲಿ ನಾಗರಾಜ್ ವಸ್ತಾರೆ ಅವರೊಂದಿಗೆ ಮದುವೆ ಆಗುತ್ತಾರೆ. ಈ ವೇಳೆ ಅಪರ್ಣಾ ಅವರಿಗೆ 39 ವರ್ಷವಾಗಿತ್ತು. ಇಬ್ಬರು ಮಕ್ಕಳಿಲ್ಲದ ನೋವನ್ನು ಇಬ್ಬರ ಪ್ರೀತಿಯಲ್ಲೇ ಕಳೆದ್ರು. ಸಾಕಷ್ಟು ಕನಸುಗಳನ್ನು ಕಂಡಿದ್ದರು. ಗಂಡ ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಅವರಿಗೆ ಸಂತಾನ ಅಭಿವೃದ್ಧಿ ಇಲ್ಲದೆ ಇರುವುದರಿಂದ ಅದೊಂದು ಬೇಜಾರು ಇತ್ತು. ಮಕ್ಕಳನ್ನು ಅವರು ಗಿಡಗಳಲ್ಲಿ ಕಾಣುತ್ತಿದ್ದರು. ಹೀಗಾಗಿ ಇಬ್ಬರಲ್ಲೂ ಅನ್ನೋನ್ಯತೆಯಿತ್ತು.
ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಬಾಳಿ ಬದುಕಬೇಕಿದ್ದ, ಇನ್ನೂ ಹಲವು ಸಾಧನೆ ಮಾಡಬೇಕಿದ್ದ ಅಪರ್ಣಾ ಅವರನ್ನು ದೇವರು ಬೇಗ ಕರೆಸಿಕೊಂಡುಬಿಟ್ಟರು. ಅನ್ಯೋನ್ಯವಾಗಿದ್ದ ಎರಡು ಜೀವವನ್ನು ಬೇರಾಗಿಸಿಬಿಟ್ಟಿತು.
Donald Trump: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಜೀವ ಉಳಸಿದ ಪುರಿ ಜಗನ್ನಾಥ !! ಅರೆ.. ಏನಿದು ಪವಾಡ?