School Holiday: ಭಾರೀ ಮಳೆಯ ಕಾರಣ ನಾಳೆ (ಜು.16) ಈ ಶಾಲೆಗಳಿಗೆ ರಜೆ ಘೋಷಣೆ

Share the Article

School Holiday: ರಾಜ್ಯದಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಬಂಗಾಳ ಕೊಲ್ಲಿಯಲ್ಲಿ ಭಾರೀ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿದೆ. 7.6 ಕಿ.ಮೀ ಎತ್ತರದಲ್ಲಿ ಟ್ರಫ್‌ ಬೀಸುತ್ತಿರುವ ಕಾರಣ ಮಳೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

School Holiday: ಮುಂದುವರಿದ ವರುಣನ ಅಬ್ಬರ; ನಾಳೆ (ಜು.16) ದ.ಕ, ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಾಳೆ (ಜು.16) ರಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಹಶೀಲ್ದಾರ್‌ ರಶ್ಮಿ ಅವರು ಹೊಸನಗರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಿದ್ದಾರೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ಇಂದು ಮತ್ತು ನಾಳೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ.

ಸಾಗರದಲ್ಲಿ ಭಾರೀ ಮಳೆಯ ಕಾರಣ ಜುಲೈ 16 ರಂದು ಅಂಗನವಾಡಿ ಸೇರಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಸಾಗರ ತಹಶೀಲ್ದಾರ್‌ ಚಂದ್ರಶೇಖರ್‌ ನಾಯಕ್‌ ಪ್ರಕಟಣೆ ಹೊರಡಿಸಿದ್ದಾರೆ.

Anchor Aparna: ಸಾವಿರ ಕನಸು ಹೊತ್ತ ಅಪರ್ಣಾ ಬದುಕು ಯಾಕೆ ಹೀಗಾಯ್ತು?; ಬ್ರಹ್ಮಾಂಡ ಗುರೂಜಿಯಿಂದ ಶಾಕಿಂಗ್ ಹೇಳಿಕೆ

ಸಕಲೇಶಪುರ, ಆಲೂರು, ಬೇಲೂರು ಮತ್ತು ಹಾಸನ ತಾಲ್ಲೂಕಿನ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ  ನಾಳೆ ರಜೆ ಘೋಷಣೆ ಮಾಡಿದ್ದು, ಸದರಿ ದಿನದ ತರಗತಿಗಳನ್ನು 20-07-2024 ರಂದು ಸರಿದೂಗಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

Leave A Reply