Belthangady: ವಿದ್ಯುತ್‌ ಶಾಕ್‌ ಹೊಡೆದು ಯುವಕ ಸಾವು

Share the Article

Belthangady: ರಾಜ್ಯಾದ್ಯಂತ ಮಳೆ ನಿರಂತರ ಸುರಿಯುತ್ತಿದ್ದು, ವಿದ್ಯುತ್‌ ಅವಘಡ ಸಂಭವಿಸಿದ ಪ್ರಕರಣಗಳು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಯುವಕನೋರ್ವನಿಗೆ ವಿದ್ಯುತ್‌ ಶಾಕ್‌ ಹೊಡೆದಿದ್ದು, ಸಾವನ್ನಪ್ಪಿರುವ ಘಟನೆಯೊಂದು ಇಳಂತಿಲ ಗ್ರಾಂದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಇಳಂತಿಲ ಗ್ರಾಮದ ಗೋಳಿದಡಿ ತಿಮ್ಮಪ್ಪಗೌಡ ಎಂಬುವವರ ಪುತ್ರ ಹರೀಶ್‌ ಗೌಡ (35) ಎಂಬುವವರೇ ವಿದ್ಯುತ್‌ ಶಾಕ್‌ ಹೊಡೆದು ಮೃತ ಹೊಂದಿದವರು.

ಮನೆ ಸಮೀಪವೇ ವಿದ್ಯುತ್‌ ಆಘಾತಕ್ಕೆ ಒಳಗಾಗಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರು ಮೃತ ಹೊಂದಿದ್ದರು. ಪೊಲೀಸರು, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply