Delhi: ಬಾಲಕನಿಗೆ ಶ್ವಾಸಕೋಶ ಸಮಸ್ಯೆ ತಂದಿಟ್ಟ ಪಾರಿವಾಳ ಸವಾಸ – ಜನರೇ ಹುಷಾರ್ ಎನ್ನುತ್ತಿದ್ದಾರೆ ವೈದ್ಯರು !!

Share the Article

Delhi: ಪ್ರಾಣಿ ಪ್ರಿಯರಂತೆ ಅನೇಕರು ಪಕ್ಷಿ ಪ್ರಿಯರೂ ಇದ್ದಾರೆ. ಮನೆಗಳಲ್ಲಿಯೂ ಅವುಗಳನ್ನು ಸಾಕಿದ್ದಾರೆ. ಇಲ್ಲಇದ್ದರೆ ಪ್ರಕೃತಿಯಲ್ಲಿ ಅವುಗಳನ್ನು ಕಂಡು ಮುದ್ದಿಸಿ ಆನಂದಿಸುವವರೂ ಇದ್ದಾರೆ. ಅದರಲ್ಲಿ ಪಾರಿವಾಳ ಎಂದರೆ ಅನೇಕರಿಗೆ ಪ್ರೀತಿ. ಸುಲಭದಲ್ಲಿ ಲಭ್ಯವಾಗುವ ಇವುಗಳನ್ನು ಸಾಕುವುದು, ಮುದ್ದಿಸುವುದು, ಕಂಡಲ್ಲಿ ಅವುಗಳಿಗೆ ಆಹಾರ ಹಾಕುವುದೆಂದರೆ ಅನೇಕರಿಗೆ ಅದೇನೋ ಇಷ್ಟ. ಆದರೆ ಈ ಪ್ರೀತಿಯೇ ಬಾಲಕನ ಜೀವಕ್ಕೆ ಕುತ್ತು ತಂದಿದೆ.

ಹೌದು, ಪಾರಿವಾಳದ(Doves) ಸಹವಾಸದಿಂದ ಬಾಲಕನೊಬ್ಬ ಪ್ರಾಣಾಪಾಯ ಉಂಟುಮಾಡಬಲ್ಲ ಅಲರ್ಜಿಗೆ ಒಳಗಾಗಿದ್ದಾನೆ. 11 ವರ್ಷದ ದೆಹಲಿ(Delhi)ಯ ಈ ಬಾಲಕ ಸಾಮಾನ್ಯ ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಪರೀಕ್ಷೆಗೆ ಒಳಪಡಿಸಿದಾಗ ಅಪಾಯಕಾರಿ ಅಲರ್ಜಿ ವರದಿಯಾಗಿದೆ. ಆಗ ವೈದ್ಯರು ಪಾರಿವಾಳದ ಸಂಪರ್ಕದಿಂದಲೇ ಇದು ಉಂಟಾಗಿದ್ದು, ಪಾರಿವಾಳದ ಗರಿ ಮತ್ತು ತ್ಯಾಜ್ಯಕ್ಕೆ ದೀರ್ಘಕಾಲ ತೆರೆದುಕೊಂಡಿದ್ದರಿಂದಲೇ ಹೀಗಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯರು ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಶ್ವಾಸಕೋಶ ಉರಿಯೂತವಿದ್ದು, ಎಚ್‌ಪಿ(HP) ಸೂಚನೆಗಳು ಕಾಣಿಸುತ್ತಿದ್ದವು. ಎದೆಯ ಭಾಗದಲ್ಲಿ ಕಪ್ಪಗಿನ ಪ್ರದೇಶ ಬಿಳಿಯಾಗಿ ಕಾಣುತ್ತಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಆತನ ಉಸಿರಾಟ ಕೆಟ್ಟದಾಗಿದ್ದು, ಆರೋಗ್ಯ ಕ್ಷೀಣಿಸುತ್ತಿದೆ. ಹೈಪರ್​ಸೆನ್ಸಿಟಿವ್​ ನ್ಯೂಮೊನಿಟಿಸ್​ (ಎಚ್‌ಪಿ) ಉಂಟಾಗಿದೆ. ಪಾರಿವಾಳಗಳಿಂದಾಗುವ ಅಲರ್ಜಿ ಇದಾಗಿದ್ದು, ತಕ್ಷಣಕ್ಕೆ ಆರೋಗ್ಯದ ತುರ್ತು ಪರಿಸ್ಥಿತಿ ಏರ್ಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ ಪಕ್ಷಿಗಳ ಹಿಕ್ಕೆ ಮತ್ತು ಗರಿಗಳಿಂದಾಗುವ ಆರೋಗ್ಯ ಹಾನಿ ಮತ್ತು ಪರಿಸರ ಪ್ರಚೋದಕದ ಬಗ್ಗೆ ಶಿಕ್ಷಣ ನೀಡುವುದು ಅಗತ್ಯ. ಪಾರಿವಾಳ ಮತ್ತು ಕೋಳಿಗಳು ಯಾವುದೇ ಹಾನಿ ಮಾಡುವುದಿಲ್ಲ ಎಂದು ತೋರಿದರೂ ಅವುಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಏನಿದು ರೋಗ?
ಎಚ್​ಪಿ ಎಂಬುದು ದೀರ್ಘಾವಧಿಯ ಶ್ವಾಸಕೋಶ ಸಮಸ್ಯೆ. ಈ ಪರಿಸ್ಥಿತಿಯಲ್ಲಿ ಶ್ವಾಸಕೋಶದಲ್ಲಿ ಗಾಯವಾಗಿ, ಉಸಿರಾಡುವುದು ಸವಾಲಾಗುತ್ತದೆ. ಈ ರೀತಿಯ ಪರಿಸ್ಥಿತಿ ವಯಸ್ಕರಲ್ಲೂ ಕಾಣಬಹುದಾಗಿದ್ದು, ಮಕ್ಕಳಲ್ಲಿ ವಿರಳ. ಮಕ್ಕಳಲ್ಲಿ ಲಕ್ಷದಲ್ಲಿ 2 ರಿಂದ 4 ವರದಿಗಳಾಗುತ್ತದೆ.

Chikkamagalur: ವೇದಿಕೆ ಮೇಲಿನ ಖುರ್ಚಿಗಾಗಿ ಮಕ್ಕಳಂತೆ ಕಿತ್ತಾಡಿಕೊಂಡ ಶಾಸಕರು,ಪರಿಷತ್ ಸದಸ್ಯರು – ಸಮಾಧಾನ ಮಾಡಲು ಸಚಿವರು, ಅಧಿಕಾರಿಗಳು ಹೈರಾಣು !!

Leave A Reply