Ripponpet: ಮೂತ್ರ ವಿಸರ್ಜನೆ ಮಾಡುತ್ತಿರುವಾಗ ಕರೆಂಟ್‌ ಶಾಕ್‌; ವಿದ್ಯಾರ್ಥಿ ಸಾವು

Share the Article

Shimogga: ವಿದ್ಯುತ್‌ ತಗುಲಿ ಯುವಕನೋರ್ವ ಸಾವಿಗೀಡಾದ ಘಟನೆಯೊಂದು ರಿಪ್ಪನ್‌ಪೇಟೆಯ ಗವಟೂರಿನ ಹಳೂರು ಗ್ರಾಮದಲ್ಲಿ ನಡೆದಿದೆ.

ಕಾರ್ತಿಕ್‌ ಎಸ್‌ (19) ಎಂಬಾತನೇ ಮೃತ ಯುವಕ. ಬೆಳಗಿನ ಜಾವ (ಇಂದು ಶುಕ್ರವಾರ) ಮನೆ ಮುಂಭಾಗದಲ್ಲಿ IBX ಬೇಲಿ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ. ಮನೆ ಮುಂಭಾಗದ ಬೇಲಿ ಮೇಲೆ ವಿದ್ಯುತ್‌ ವೈರ್‌ ತುಂಡಾಗಿ ಬಿದ್ದಿತ್ತು. ಕೂಡಲೇ ವಿದ್ಯುತ್‌ ಪ್ರವಹಿಸಿ ಬೇಲಿಯ ಮೇಲೆನೇ ಯುವಕನ ಕರೆಂಟ್‌ ಶಾಕ್‌ ಹೊಡೆದು ಬಿದ್ದಿದ್ದಾನೆ.

ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ.

ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ. ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Bank Loan: ಸಾಲಗಾರರಿಗೆ ಸಿಹಿ ಸುದ್ದಿ! ಇನ್ಮುಂದೆ ವಿವಿಧ ರೀತಿಯ ಸಾಲದ ಕಂತು ಕಟ್ಟಬೇಕಾಗಿಲ್ಲ!

Leave A Reply