BJP Highcomand : ಕರ್ನಾಟಕ ಬಿಜೆಪಿ ವಿರುದ್ದ ಸಿಡಿದೆದ್ದ ಬಿಜೆಪಿ ಹೈಕಮಾಂಡ್ – ಗಡ ಗಡ ನಡುಗಿದ ರಾಜ್ಯ ನಾಯಕರು !!
BJP Highcomand : ಕರ್ನಾಟಕ ಬಿಜೆಪಿ ವಿರುದ್ದ ಬಿಜೆಪಿ ಹೈಕಮಾಂಡ್(BJP Highcomand) ಸಿಡಿದೆದ್ದಿದೆ. ಕೇಂದ್ರ ನಾಯಕರು ಗುಟುರು ಹಾಕಿದ್ದಕ್ಕೆ ಇದೀಗ ರಾಜ್ಯದ ಬಿಜೆಪಿ(Karnataka BJP) ನಾಯಕರು ಗಡ ಗಡ ನಡುಗಿದ್ದಾರೆ !!
Canara Bank Recruitment 2024: ಕೆನರಾಬ್ಯಾಂಕ್‌ನಲ್ಲಿ ಕೆಲಸ; ಬೆಂಗಳೂರಿನಲ್ಲಿ ನೇಮಕಾತಿ, ಈ ಕೂಡಲೇ ಅರ್ಜಿ ಸಲ್ಲಿಸಿ
ಹೌದು, ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರ ಉದಾಸೀನದ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎರಡು ಅತೀ ದೊಡ್ಡ ಭ್ರಷ್ಟಾಚಾರ (Corruption) ಪ್ರಕರಣಗಳು ಸದ್ದು ಮಾಡುತ್ತಿದೆ. ಆದರೆ ಬಿಜೆಪಿ ನಾಯಕರು ನಾಮಕಾವಸ್ತೆಗೆ ಕಾಂಗ್ರೆಸ್ (Congress) ವಿರುದ್ಧ ಆಗೊಂದು ಈಗೊಂದು ಹೋರಾಟ ಮಾಡುತ್ತಿದ್ದಾರೆ ಎಂದು ಕೇಂದ್ರ ನಾಯಕರು ಸಿಡಿದೆದ್ದಿದ್ದಾರೆ.
ರಾಜ್ಯದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) 187 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಮತ್ತೊಂದೆಡೆ ಮುಡಾದಲ್ಲಿ (MUDA) ನಿವೇಶನಗಳ ಅಕ್ರಮ ಹಂಚಿಕೆಯಿಂದ 5 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ. ಎರಡು ಪ್ರಬಲ ಅಸ್ತ್ರಗಳು ಸಿಕ್ಕಿದ್ದರೂ ಪ್ರತಿಪಕ್ಷ ಬಿಜೆಪಿ ನಾಮಕಾವಸ್ಥೆಗೆ ಪ್ರತಿಭಟನೆಗಿಳಿದಿದೆ. ಬರೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಗೋಂದು ಈಗೊಂದು ಮಾತ್ರ ಪ್ರತಿಭಟನೆ ಮಾಡುತ್ತಿದೆ ಎಂದು ಬಿಜೆಪಿ ಹೈಕಮಾಂಡ್ ಸಿಡಿಮಿಡಿಗೊಂಡಿದೆ.
ಹೈಕಮಾಂಡ್ ಹೇಳಿದ್ದೇನು?
ಕಳೆದ ಸಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಿದ್ದಾಗ, ಕಾಂಗ್ರೆಸ್ ನವರು ಪೇಸಿಎಂ/40% ಕಮೀಷನ್ ಆರೋಪದಲ್ಲಿ ಉಗ್ರ ಹೋರಾಟ ನಡೆಸಿದ್ದರು. ಯಾವುದೇ ದಾಖಲೆಗಳು ಇಲ್ಲದೇ ಇದ್ದರೂ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಅವರ ಹೋರಾಟ ಹೇಗಿತ್ತು? ನಿಮ್ಮ ಹೋರಾಟ ಹೇಗಿದೆ? ಸಿಎಂ ಮತ್ತು ಅವರ ಕುಟುಂಬದ ಮೇಲೆಯೇ ಗಂಭೀರ ಆರೋಪ ಬಂದಿದೆ. ಸಿಎಂ ಕುರ್ಚಿಯನ್ನೇ ಅಲುಗಾಡಿಸುವಂತಹ ಅವಕಾಶ ನಿಮ್ಮ ಮುಂದಿದೆ. ಈ ಎರಡೂ ಪ್ರಕರಣಗಳಿಂದ ಜನ ಸಾಮಾನ್ಯರಿಗೆ ಸರ್ಕಾರದ ಮೇಲೆ ಅಪನಂಬಿಕೆ ಶುರುವಾಗಿದೆ. ಈ ಅವಕಾಶ ಬಳಸಿಕೊಂಡು ಜನಾಭಿಪ್ರಾಯ ರೂಪಿಸಿ. ಆದರೆ ನೀವು ಕೇವಲ ನಾಮ್‌ಕಾವಸ್ತೆ ಹೋರಾಟ ಮಾಡುತ್ತಿದ್ದೀರಿ.
ಜನಾಕ್ರೋಶಕ್ಕೆ ಮಾತ್ರವೇ ಯಾವುದೇ ಸರ್ಕಾರ ಭಯ ಪಡಲಿದೆ. ನಿಮ್ಮ ಹೋರಾಟ ಮೂಲಕ ಅಂಥ ಸಂದರ್ಭಕ್ಕೆ ಪ್ರತಿಪಕ್ಷ ಆಗಿ ನೀವೇ ನಾಂದಿ ಹಾಡಿ. ಒಳ ಕಚ್ಚಾಟ ಬಿಟ್ಟು ಒಗ್ಗಟ್ಟಿನಲ್ಲಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿ. ನಿಮ್ಮ ಈ ಇಲ್ಲದ ಸಲ್ಲದ, ನಾಮಕಾವಸ್ತೆಯ ಆಟ ನಡೆಯುವುದಿಲ್ಲ, ಇಷ್ಟೇ ಸಾಕಾಗುವುದಿಲ್ಲ. ಸಿಎಂ ರಾಜೀನಾಮೆಗೆ ಸನ್ನಿವೇಶ ಸೃಷ್ಟಿ ಆಗುವಂಥ ಹೋರಾಟ ಮಾಡಿ ಎಂದು ಖಡಕ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಚಳಿ ಬಿಡಿಸಿದೆ.
Aparna died: ಕನ್ನಡದ ಖ್ಯಾತ ನಿರೂಪಕಿ, ಮಜಾ ಟಾಕೀಸ್ ಖ್ಯಾತಿಯ ನಟಿ ಅಪರ್ಣ ವಸ್ತಾರೆ ವಿಧಿವಶ !