Mangaluru: ಬೆಂಗಳೂರಿನಿಂದ ಬಂದಿರುವುದು ಚಡ್ಡಿಗ್ಯಾಂಗ್- ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್
Mangaluru: ಮಂಗಳೂರಿನಲ್ಲಿ ದರೋಡೆ ನಡೆಸಿ ಸಿಕ್ಕಿ ಬಿದ್ದ ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದು, ದರೋಡೆ ನಡೆಸಿದ ಬಳಿಕ ಬೆಂಗಳೂರಿನ ಯಶವಂತಪುರಕ್ಕೆ ವಾಪಾಸಾಗುತ್ತಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಈ ಚಡ್ಡಿಗ್ಯಾಂಗ್ ಬೆಂಗಳೂರು, ರಾಜಸ್ತಾನ, ಮದ್ಯ ಪ್ರದೇಶಗಳಲ್ಲಿಯೂ ಇದೇ ರೀತಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದು ಹೇಳಿದೆ. ಇದೊಂದು ವೃತ್ತಿಪರ ದರೋಡೆಕೋರರ ಗ್ಯಾಂಗ್ ಆಗಿದ್ದು, ಮಂಗಳೂರಿನ ಕೋಡಿಕಲ್‌ನಲ್ಲಿ ಇದೇ ಗ್ಯಾಂಗ್ ಕಳ್ಳತನ ನಡೆಸಿರುವುದು ಗೊತ್ತಾಗಿದೆ.
ಇದೀಗ ಫಿಂಗರ್ ಪ್ರಿಂಟ್ ಪರಿಶೀಲನೆ ಮೂಲಕ ದೇಶಾದ್ಯಂತ ಈ ತಂಡ ನಡೆಸಿರಬಹುದಾದ ಕೃತ್ಯಗಳ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಐವತ್ತು ಸಾವಿರ ರೂ. ನಗರದನ್ನು ದರೋಡೆಕೋರರನ್ನು ಬಂಧಿಸಿರುವ ತಂಡಕ್ಕೆ ಆಯುಕ್ತರು ನಗದು ಬಹುಮಾನ ಘೋಷಣೆ ಮಾಡಿದರು. ರಾಡ್ ಎಸೆದಿರುವ ಜಾಗದ ಪಂಚನಾಮೆ ನಡೆಸಲು ಹೋದಾಗ, ಮುಲ್ಕಿ ಸಮೀಪದ ಸ್ಥಳದಲ್ಲಿ ಬೆಳಗ್ಗೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ ಮಾಡಿದಾಗ ಕಾಲಿಗೆ ಗುಂಡು ಹಾರಿಸಲಾಯಿತು ಎಂದು ಹೇಳಿದರು.
Madhya Pradesh: ಪ್ರಿಯತಮೆ ಶವ ಹೂತಿಟ್ಟು ಒಂದು ತಿಂಗಳು ಕಾವಲು ಕಾಯ್ದ ಪಾಗಲ್ ಪ್ರೇಮಿ! ಕೊನೆಗೆ ಮಾಡಿದ್ದಾದ್ರೂ ಏನು?