7th Pay Commission: 7ನೇ ವೇತನ ಆಯೋಗ ಜಾರಿ ಸದ್ಯಕ್ಕಿಲ್ಲ – ಜಾರಿಗಾಗಿ ಎಲ್ಲಾ ರೆಡಿಯಾದಾಗ ಕೊನೇ ಕ್ಷಣದಲ್ಲಿ ಸರ್ಕಾರ ಹಿಂದೇಟು ಹಾಕಿದ್ದೇಕೆ ?!

7th Pay Commission: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗುತ್ತಿದೆ. ಇದುವರೆಗೂ 7ನೇ ವೇತನ ಆಯೋಗವನ್ನು(7th Pay Commission) ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದ ಸರ್ಕಾರವು ಇದೀಗ ಆಯೋಗದ ಜಾರಿಗೆ ಹಿಂದೆಟು ಹಾಕುತ್ತಾ ಸರ್ಕಾರಿ ನೌಕರರ ಆಸೆಗೆ ತಣ್ಣೀರು ಎರಚಿದೆ.

ಹೌದು, ರಾಜ್ಯ ಸರ್ಕಾರಿ ನೌಕರರಿಗೆ(Government Employees) ಪದೇ ಪದೇ ನಿರಾಸೆಯಾಗುತ್ತಿದೆ. 7ನೇ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತಿಲ್ಲ. ಇದಕ್ಕೆ ಕಾರಣ ಬಹಿರಂಗವಾಗಿದೆ.

ರಾಜ್ಯದ ಗೃಹ ಸಚಿವರಾದ ಡಾ. ಜಿ ಪರಮೇಶ್(Dr G Parameswhar) ಅವರು ಏಳನೇ ವೇತನ ಆಯೋಗವನ್ನು ಯಾಕೆ ಸದ್ಯದಲ್ಲಿ ಜಾರಿ ಮಾಡಲಾಗುವುದಿಲ್ಲ ಎಂಬುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಏಕೆಂದರೆ 7ನೇ ವೇತನ ಆಯೋಗ ಜಾರಿಗೆ ಸುಮಾರು 18 ಸಾವಿರ ಕೋಟಿಯಷ್ಟು ವೆಚ್ಚವಾಗುತ್ತದೆ. ಆದರೆ ಇದೀಗ ಸರ್ಕಾರದ ಬಳಿ ಅಷ್ಟು ಹಣವಿಲ್ಲ. ಹೀಗಾಗಿ ತಾಳ್ಮೆಯಿಂದ ಕಾಯಿರಿ, ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಇದನ್ನು ನಾವು ಈಡೇರಿಸುತ್ತೇವೆ ಯಾವುದೇ ರೀತಿಯ ಗೊಂದಲಗಳು ಬೇಡ ಎಂದು ಅವರು ಸರ್ಕಾರಿ ನೌಕರರಿಗೆ ಹೇಳಿದ್ದಾರೆ.

ಅಂದಹಾಗೆ ಇತ್ತೀಚೆಗೆ ಸಿಎಂ(CM) ನೇತೃತ್ವದ ಸಂಪುಟ ಸಭೆಯಲ್ಲಿ ಏಳನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿ ವಿಚಾರವಾಗಿ ಚರ್ಚೆ ನಡೆದು 7ನೇ ವೇತನ ಆಯೋಗ ಜಾರಿಗೆ ಎಲ್ಲಾ ಸಿದ್ದತೆ ನಡೆಸಿದೆ ಎನ್ನಲಾಗಿತ್ತು. ಇದರ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಹಿಸಲಾಗಿತ್ತು. ಇದೀಗ ಈ ಬಗ್ಗೆ ಅಪ್ಡೇಟ್ ನೀಡಿದ ಸಿದ್ದರಾಮಯ್ಯ ಏಳನೇ ` ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಸಚಿವರು ಅನೌಪಚಾರಿಕವಾಗಿ ಒಪ್ಪಿಗೆ ಸೂಚಿಸಿದ್ದರು. ಆಯೋಗದ ವರದಿಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದ್ದರು.

ಆದರೆ ಇದೀಗ ಏಳನೇ ವೇತನ ಆಯೋಗ ಜಾರಿಗೆ ಖರ್ಚಾಗುವ ಲೆಕ್ಕಾಚಾರವನ್ನು ನೋಡಿ ಸರ್ಕಾರಕ್ಕೆ ಏನು ಮಾಡಬೇಕೆಂಬುದೇ ತೋಚದಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ, ಎಲ್ಲಾ ವಸ್ತುಗಳ ಬೆಲೆಗಳನ್ನು ಏರಿಸಿದರು ಕೂಡ ಸರ್ಕಾರಕ್ಕೆ ಹಣದ ಕೊರತೆ ತುಂಬಾ ಎದುರಾಗಿದೆ. ಹೀಗಾಗಿ ಈಗ 7ನೇ ಆಯೋಗವನ್ನು ಜಾರಿಗೊಳಿಸಿದರೆ ಇನ್ನು ಕೂಡ ಸಂಕಷ್ಟ ಆಗಬಹುದು ಎಂದು ಸರ್ಕಾರ ಈ ನಿರ್ಧಾರವನ್ನು ತಳೆದಿದೆ.

Actor Darshan Health: 10 ಕೆಜಿ ತೂಕ ಕಳೆದುಕೊಂಡ ಭಯದಲ್ಲಿ ಕೋರ್ಟ್‌ಗೆ ಮೊರೆ ಹೋದ ದರ್ಶನ್‌; ಇಲ್ಲಿದೆ ಬೇಡಿಕೆಗಳ ಲಿಸ್ಟ್‌

Leave A Reply

Your email address will not be published.