2nd PUC Students: ದ್ವಿತೀಯ ಪಿಯುಸಿ ಪಾಸಾದವರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಇಲಾಖೆ

2nd PUC Students: 2023-24 ನೇ ಸಾಲಿನಲ್ಲಿ ಪಾಸಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಶಿಕ್ಷಣ ಇಲಾಖೆ ನೀಡಿದೆ. ಈ ಸಾಲಿನ ಪರೀಕ್ಷೆಯಲ್ಲಿ ಒಟ್ಟು ಮೂರು ಬಾರಿ ಪರೀಕ್ಷೆ ನಡೆದಿರುವುದರಿಂದ ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಅಥವಾ ಉನ್ನತ ಶಿಕ್ಷಣಕ್ಕೆ ಅರ್ಹತೆಯನ್ನು ಪಡೆದಿದ್ದಾರೆ.‌

Government Rules: ಸರ್ಕಾರಿ ಸಮಾರಂಭಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯವೇ? ರಾಜ್ಯ ಸರ್ಕಾರ ಅಂತಿಮ ತೀರ್ಮಾನವೇನು?

ಈ ಕಾರಣದಿಂದ 53 ಪದವಿ ಕಾಲೇಜಿನಲ್ಲಿ ಒಟ್ಟು 97 ಪದವಿ ಸಂಯೋಜನೆಗಳ ಕೋರ್ಸ್‌ ಅನ್ನು ಆಫರ್‌ ಮಾಡಿದೆ ಶಿಕ್ಷಣ ಇಲಾಖೆ.
ಶಿಕ್ಷಣ ಇಲಾಖೆಯು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಕಲ್ಪಿಸುವುದಕ್ಕೋಸ್ಕರ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿದೆ ಎಂದು ವರದಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿನ ಐದು ಕಾಲೇಜುಗಳಲ್ಲಿ ಬಿ.ಎ. ನಲ್ಲಿ 3 ಹಾಗೂ ಬಿಎಸ್ಸಿ ನಲ್ಲಿ 4 ಸೇರಿ ಒಟ್ಟು ಏಳು ಸಂಯೋಜನೆ ಮಾಡಲಾಗಿದೆ. ಪತ್ರಿಕೋದ್ಯಮ, ವಿದ್ಯುನ್ಮಾನ, ಮನಃಶಾಸ್ತ್ರ ವಿಷಯಗಳು ಇದರಲ್ಲಿದೆ. ಹಾಸನದಲ್ಲಿ ಮೂರು ಕಾಲೇಜಿನಲ್ಲಿ ಎಂಟು ಹೊಸ ಸಂಯೋಜನೆ, ಹೊಳೆನರಸೀಪುರ ಕಾಲೇಜಿನಲ್ಲಿ ಇಂಟೀರಿಯರ್‌ ಡಿಸೈನ್‌ ಆಂಡ್‌ ಡೆಕೋರೇಷನ್‌ ಕೋರ್ಸ್‌, ಬೆಳಗಾವಿಯಲ್ಲಿ ನಾಲ್ಕು ಕಾಲೇಜಿನಲ್ಲಿ ಹೊಸ ಕೋರ್ಸ್‌ ಸೇರಿಸಲಾಗಿದೆ. ಕೊಪ್ಪಳದಲ್ಲಿ ಐದು ಡಿಗ್ರಿ ಕಾಲೇಜಿನಲ್ಲಿ ಒಟ್ಟು 13 ಹೊಸ ಡಿಗ್ರಿ ಸಂಯೋಜನೆ ಕೋರ್ಸ್‌ ಪ್ರಾರಂಭ ಮಾಡಲಾಗಿದೆ. ಮೈಸೂರಿನ ಐದು ಕಾಲೇಜಿನಲ್ಲಿ ಬಿಎ, ಬಿಎಸ್ಸಿ ನಲ್ಲಿ ತಲಾ 13 ಹೊಸ ಸಂಯೋಜನೆ ನೀಡಲಾಗಿದೆ.

ಹಾಗೆನೇ ಯಾವ ಕಾಲೇಜಿನಲ್ಲಿ ಯಾವ ಹೊಸ ಕೋರ್ಸ್‌ ಲಭ್ಯವಿದೆ ಎಂಬುವುದನ್ನು ಈ ಕೆಳಗೆ ನೀಡಲಾದ ಲಿಂಕ್‌ ಮೂಲಕ ತಿಳಿದುಕೊಳ್ಳಿ.

ನೋಟಿಫಿಕೇಶನ್

Leave A Reply

Your email address will not be published.