Mangaluru: ಕಳ್ಳತನ ಕೇಸ್‌; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಬಂದಿದ್ದಾರೆಯೇ “ಚಡ್ಡಿ ಗ್ಯಾಂಗ್‌”?

Share the Article

Mangaluru: ದಕ್ಷಿಣ ಕನ್ನಡ ಉಡುಪಿ ಭಾಗದಲ್ಲಿ ಕಳ್ಳರ ತಂಡವೊಂದು ಕ್ರಿಯಾಶೀಲರಾಗಿದ್ದಾರೆ. ಚಡ್ಡಿ ಗ್ಯಾಂಗ್‌ವೊಂದು ಸಕ್ರಿಯವಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿರುವ ಕುರಿತು ವರದಿಯಾಗಿದೆ.
ಈ ಗ್ಯಾಂಗ್‌ ಹೈದರಾಬಾದ್‌, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆಗಳಲ್ಲಿ ಈ ಗ್ಯಾಂಗ್‌ ತನ್ನ ಕೈಚಳವನ್ನು ತೋರಿಸಿದ್ದು, ಈ ಹಿಂದೆಯೂ ಕೂಡಾ ದ.ಕ., ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳ್ಳತನ ಕೃತ್ಯವನ್ನು ನಡೆಸಿತ್ತು. ಇದೀಗ ಮಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಶನಿವಾರ ರಾತ್ರಿ ಮಂಗಳೂರು ಉರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಕಲ್‌ನಲ್ಲಿ ಮನೆ ಕಳ್ಳತನ ಘಟನೆ ನಡೆದಿದ್ದು, ಇದೇ ತಂಡ ಮಾಡಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಯಾರಿದು ಚಡ್ಡಿ ಗ್ಯಾಂಗ್‌?
ಮೈಮೇಲೆ ಚಡ್ಡಿ, ಬನಿಯಾನ್‌, ತಲೆಮೇಲೆ ಒಂದು ಬಟ್ಟೆ ಸುತ್ತಿಕೊಂಡು ಈ ಗ್ಯಾಂಗ್‌ನ ಸದಸ್ಯರು ಸೊಂಟದಲ್ಲಿ ಆಯುಧವನ್ನು ಹಿಡಿದುಕೊಂಡು, ಸಾಮಾನ್ಯವಾಗಿ ಮಳೆ ಜೋರಾಗಿ ಸುರಿಯುತ್ತಿರುವ ಹೊರಗೆ ಬಂದು ಮನೆಮಂದಿ ಗಾಢ ನಿದ್ದೆಯಲ್ಲಿರುವಾಗ ತಮ್ಮ ಕೈಚಳಕ ತೋರಿಸುತ್ತದೆ ಎಂದಿದ್ದಾರೆ ಪೊಲೀಸರು.
ಕೋಡಿಕಲ್‌ನ ವಿವೇಕಾನಂದ ನಗರದಲ್ಲಿ ಭಾನುವಾರ ಸಮಯ ಮನೆ ಮಂದಿ ಮಲಗಿದ್ದಾಗ ಕಳ್ಳರು ಈ ಕೃತ್ಯ ಮಾಡಿದ್ದಾರೆ. ಬೆಳಗ್ಗಿನ ಜಾವ 2.04 ರ ಸುಮಾರಿಗೆ ಮನೆಯ ಕಿಟಿಕಿಯ ಸರಳಗಳನ್ನು ಕಿತ್ತಿರುವ ಸುಮಾರು ಐದು ಮಂದಿ ಕಳ್ಳರ ತಂಡ ಮನೆಯ ಕೋಣೆಯೊಂದರಲ್ಲಿ ಜಾಲಾಡಿದ್ದು ಕಪಾಟಿನಲ್ಲಿ 10000 ರೂ. ನಗದನ್ನು ಕಳವು ಮಾಡಿರುವ ಕುರಿತು ವರದಿಯಾಗಿದೆ. ಆದರೆ ಇದ್ಯಾವುದರ ಗೋಚರವಿಲ್ಲದೇ ಮಲಗಿದ್ದ ಮನೆಮಂದಿಗೆ ಬೆಳಗ್ಗೆ ಎದ್ದಾಗಲೇ ಈ ಕೃತ್ಯ ನಡೆದಿರುವುದು ಗೊತ್ತಾಗಿದೆ.

Spain: ಸಮುದ್ರಲ್ಲಿ ಸುಸ್ಸು ಮಾಡಿದ್ರೆ 67,000 ರೂ ದಂಡ ಎಂದ ಸರ್ಕಾರ – ಉಚ್ಚೆ ಹುಯ್ದವನ ಪತ್ತೆ ಹೇಗ್ ಮಾಡ್ತೀರಪ್ಪಾ ಎಂದ ನೆಟ್ಟಿಗರು !!

ಈ ಕುರಿತು ಇದೀಗ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯ ನಡೆದ ಮನೆಯ ಸಿಸಿಟಿವಿ ನೋಡಿದಾಗ ಕಳ್ಳರ ಕೆಲವು ದೃಶ್ಯಗಳು ಕಂಡು ಬಂದಿದೆ. ರಾತ್ರಿ ಸಮಯದಲ್ಲಿ ಕಳ್ಳರು ಕೈಯಲ್ಲಿ ಟಾರ್ಚ್‌ ಹಿಡಿದು ಮನೆಯ ಬಳಿ ನಸುಕಿನ ಸಮಯದಲ್ಲಿ ಮನೆಗೆ ಪ್ರವೇಶಿಸಿ 3.42 ಕ್ಕೆ ವಾಪಾಸಾಗಿದ್ದು ಸೆರೆಯಾಗಿದೆ. ಇದರಲ್ಲಿ ಓರ್ವನ ಬಳಿ ಬ್ಯಾಗ್‌ ಇತ್ತು. ಕಳ್ಳರು ಮನೆಯಿಂದ ಹೊರಗೆ ಬರುವ ಸಮಯದಲ್ಲಿ ರಸ್ತೆಯಲ್ಲಿ ವಾಹನವೊಂದು ಹಾದು ಹೋಗಿದೆ. ಹಾಗಾಗಿ ಮನೆಯ ಗೇಟ್‌ ಬಳಿಯೇ ನಿಂತ ಕಳ್ಳರು ನಂತರ ರಸ್ತೆಗೆ ಬಂದಿದ್ದಾರೆ.

ಆ ಸಮಯದಲ್ಲಿ ನಾಯಿ ಕೂಡಾ ಬೊಗಳುತ್ತಿದ್ದು, ನಾಯಿಯ ಕಡೆಗೆ ಓರ್ವ ಕಳ್ಳ ಕಲ್ಲು ಎಸೆಯುವ ದೃಶ್ಯ ಕೂಡಾ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಇವರ ಡ್ರೆಸ್‌ಕೋಡ್‌ ನೋಡುವಾಗ ಚಡ್ಡಿ ಗ್ಯಾಂಗ್‌ ನ ಡ್ರೆಸ್‌ಕೋಡನ್ನು ಹೋಲುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Poonam Pandey: ಬೆತ್ತಲೆ ಫೋಟೋ ಶೇರ್ ಮಾಡಿದ ಪೂನಂ ಪಾಂಡೆ – ಫೋಟೋ ವೈರಲ್ !!

Leave A Reply